ಕಚ್ಚೂರು ದೇವಸ್ಥಾನವನ್ನು ಶೈಕ್ಷಣಿಕ ಕೇಂದ್ರವಾಗಿಸುವ ಪ್ರಯತ್ನ: ಡಿ.ವಿ. ಸದಾನಂದ ಗೌಡ

ಬ್ರಹ್ಮಾವರ: ಕಚ್ಚೂರು ದೇವಸ್ಥಾನವನ್ನು ಶೈಕ್ಷಣಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಶಿಕ್ಷಣ ಸಂಸ್ಥೆ ಮಂಜೂರಾತಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ರವಿವಾರ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಉತ್ಸವ ಸಂದರ್ಭ ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ 10 ಎಕರೆ ಜಾಗ ಮಂಜೂರಿಗೆ ಪ್ರಯತ್ನಿಸುತ್ತೇನೆ.ಈ ಕುರಿತು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು. […]

ಕಚ್ಚೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಭ್ರಮ:  ಮನೆಗುಡಿಯೊಳಗೆ ದೇವರ ಸ್ಥಾಪಿಸಿದರೆ ಸಾಲದು ಮನದೊಳಿರಬೇಕು: ಮಾದರಚೆನ್ನಯ್ಯ ಸ್ವಾಮೀಜಿ

ಬ್ರಹ್ಮಾವರ: ಮನೆ ಗುಡಿಯೊಳಗೆ ದೇವರನ್ನು ಸ್ಥಾಪಿಸಿದರೆ ಸಾಲದು, ಮನದೊಳಗೆ ಭಗವಂತನನ್ನು ಪ್ರತಿಷ್ಠಾಪಿಸಬೇಕು. ಧರ್ಮ ಮಾನವೀಯ ಮೌಲ್ಯದ ಮೇಲೆ ನಿಂತಿದೆ. ನಾವೆಲ್ಲರೂ ಒಂದು ಎನ್ನುವ ಚಿಂತನೆ ದೇವಸ್ಥಾನದ ಮೂಲಕ ಮೂಡಬೇಕು ಎಂದು ಚಿತ್ರದುರ್ಗ ಶ್ರೀ ಮಾದರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ ಹೇಳಿದರು. ಅವರು ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಅಖಿಲ ಕರ್ನಾಟಕ ಶ್ರೀ ಬಬ್ಬುಸ್ವಾಮಿ ದೇಗುಲಗಳ ಹತ್ತು ಸಮಸ್ತರ […]

ಉಡುಪಿ:ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಬಳಿ ಕೊಠಡಿ ಉದ್ಘಾಟನೆ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಹತ್ತಿರ ನಿರ್ಮಿಸಿರುವ ನೂತನ ಕೊಠಡಿಯನ್ನು ಪರ್ಯಾಯ ಪಲಿಮಾರು  ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ  ಕರ್ನಾಟಕದ ಕಾನೂನು,ಸಂಸದೀಯ ವ್ಯವಹಾರ,ಸಣ್ಣ ನೀರಾವರಿ ಖಾತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸ್ವಾಮಿಜಿಯವರ  ಆಪ್ತಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ,ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ,ಮಠದ  ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ:ಮಹಿಳಾ ಸಮಾವೇಶ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಮಹಿಳಾ ಸಮಾವೇಶ ನಡೆಯಿತು. ಅಧ್ಯಕ್ಷತೆ ವಹಿಸಿದ ಶೋಭಾ ಉಪಾಧ್ಯಾಯರು, ನಮ್ಮ ಸಮಾಜ ಉತ್ತಮವಾಗಿ ನಡೆಯಲು ಮಹಿಳೆಯರ ಪಾಲು ದೊಡ್ಡದು. ತಾಯಿಯೇ ಮೊದಲ ಪಾಠ ಶಾಲೆ ಎಂಬಂತೆ ಚಿಕ್ಕ ಮಕ್ಕಳು ತಾಯಿಯ ಮಾತನ್ನು ಕೇಳಿ ಅದನ್ನು ಅಳವಡಿಸಿಕೊಳ್ಳುತ್ತವೆ.ಸಣ್ಣ ಮಕ್ಕಳಲ್ಲಿಯೇ ಉತ್ತಮ ಸಂಸ್ಕಾರ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಇಂತಹ ಸಮಾವೇಶದಿಂದ ನಮ್ಮ ಸಮಾಜಕ್ಕೆ ಹಲವಾರು ಪ್ರಯೋಜನ ಸಿಗುವುದರಿಂದ ಮುಂದೆಯೂ ಸಮ್ಮೇಳನಗಳು ನಡೆಯಲಿ ಎಂದರು. […]

ಶ್ರೀ ಕೃಷ್ಣ ಮಠದಲ್ಲಿ ವಿಶೇಷ ರಥೋತ್ಸವ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಬೆಳಿಗ್ಗೆ  ರಥಬೀದಿಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನಿಟ್ಟು  ವಿಶೇಷ ರಥೋತ್ಸವವು ನಡೆಯಿತು.ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀ ಪಾದರು ಪಾಲ್ಗೊಂಡಿದ್ದರು.