ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ ಸ್ಥಾಪನೆ: ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ: ವಿ. ಸುನಿಲ್ ಕುಮಾರ್

ಕಾರ್ಕಳ: ನಮ್ಮ ಕರಾವಳಿ ಮತ್ತು ಮಲೆನಾಡು ಪ್ರದೇಶವು ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಮತ್ತು ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧ. ಈಗ ಈ ಭಾಗದ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗಿದೆ. ಕರ್ನಾಟಕದ ಆರನೇ ರಂಗಾಯಣವಾಗಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ವು ಆರಂಭವಾಗಲಿದೆ. ಈ ಕುರಿತು ಈಗಾಗಲೇ ಸರ್ಕಾರಿ ಆದೇಶವು ಹೊರಬಿದ್ದಿದ್ದು , ‘ಯಕ್ಷ ರಂಗಾಯಣ’ವು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನ ಬಳಿ ಕಾರ್ಯಾರಂಭ ಮಾಡಲಿದೆ. ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನೆಲೆಯಲ್ಲಿನ ನಾಟಕಗಳ ರಂಗಪ್ರಯೋಗ […]
ಉಡುಪಿಯಲ್ಲಿ ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ

ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮವನ್ನು ಹೊಸ ತರಗತಿಯೊಂದಿಗೆ ಆರಂಭಿಸುತ್ತಿದೆ. ಇದೇ ಬರುವ ಜುಲೈ 20ರ ಮಂಗಳವಾರದಿಂದ ಹೊಸ ತರಗತಿಯು ಆರಂಭಗೊಳ್ಳಲಿದೆ. ಕಳೆದ 4 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ತರಬೇತಿ ಉಚಿತವಾಗಿದ್ದು, ಹೊಸ ತರಗತಿ ಪ್ರತೀ ಮಂಗಳವಾರ ಸಂಜೆ 5ರಿಂದ 6ರ ವರೆಗೆ ಉಡುಪಿಯ ಸೋದೆ ಮಠದಲ್ಲಿ ನಡೆಯಲಿದೆ. […]
ಸಂಗೀತ ಪ್ರಿಯ ಉಡುಪಿ ಶ್ರೀಕೃಷ್ಣನ ಕತೆ ಹೇಳಿದ್ದಾರೆ ಪಿ.ಲಾತವ್ಯ ಆಚಾರ್ಯ

»ಪಿ.ಲಾತವ್ಯ ಆಚಾರ್ಯ ಉಡುಪಿ. 15ನೇ ಶತಮಾನದಲ್ಲಿ ದಾಸಸಾಹಿತ್ಯದ ಕ್ರಾಂತಿಗೆ ಶ್ರೀಕೃಷ್ಣನ ಉಡುಪಿ ಕ್ಷೇತ್ರವೇ ತವರೂರಾಯಿತು ಶ್ರೀವ್ಯಾಸರಾಜರು, ಶ್ರೀವಾದಿರಾಜರು. ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯೀಂದ್ರರ ನೇತೃತ್ವದಲ್ಲಿ ನೂರಾರು ಕೃತಿಗಳು ಉಡುಪಿಯಲ್ಲಿ ಅನಾವರಣಗೊಂಡಿತು. ಉಡುಪಿ ಶ್ರೀಕೃಷ್ಣ ನ ಕುರಿತಾಗಿಯೇ ಅಸಂಖ್ಯ ಗದ್ಯ ಪದ್ಯಗಳು ರಚಿತವಾಯಿತು. ತಂಬೂರಿ ಮೀಟಿ,ಗೆಜ್ಜೆ ಕಟ್ಟಿ, ಶುದ್ಧಭಕ್ತಿ,ಮುಗ್ಧ ಹೃದಯದಿಂದ ಭಜಿಸಿ ನಲಿದ ಸಂತರಿಗೆ ಉಡುಪಿಯು ಸಾಕ್ಷಾತ್ಕಾರದ ನೆಲೆಯಾಯಿತು. ಕನಕದಾಸರ ಅಂತರಾಳದ ಕೂಗಿಗೆ ಕಡೆಗೋಲಕೃಷ್ಣ ದರುಶನವನ್ನು ಕರುಣಿಸಿದ. ದಾಸಸಾಹಿತ್ಯದ ಸ್ವಣ೯ಯುಗವೆಂದೇ ಬಿಂಬಿತವಾದ ಈ ಪವ೯ಕಾಲದಲ್ಲಿ ಸಮಸ್ತ ಉಡುಪಿಯು ಸಂಗೀತಮಯವಾಯಿತು. ಹೌದು […]
ಶ್ರೀ ಶಿರೂರು ಶ್ರೀಗಳ ಎಂದೂ ಮುಗಿಯದ ನೆನಪು: ಅಕ್ಷೋಭ್ಯ ಆಚಾರ್ಯರು ತೆರೆದ ಶ್ರೀಗಳ ನೆನಪಿನ ಸಂಪುಟ

ಒಮ್ಮೆ ನನ್ನ ಅಜ್ಜಿ ಕುಸುಮಕ್ಕನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಮಠದಲ್ಲೇ ಉಳಿದೆವು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಯಾರೋ ಮಠದವರೊಬ್ಬರು ಬೊಬ್ಬಿಡುತ್ತಾ ಬಂದು ನಮ್ಮ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದರು. ಕೃಷ್ಣಮಠದ ಪಾಯದ ಕೋಣೆಗೆ ಬೆಂಕಿ ಹತ್ತಿಕೊಂಡಿದೆ ಎಲ್ಲಾ ಬನ್ನಿ ಎಂದು ಕೂಗುತ್ತಾ ಮಠದ ಸಿಬ್ಬಂದಿ ಎಲ್ಲರಿಗೂ ವಿಷಯ ತಿಳಿಸುತ್ತಿದ್ದ. ತಕ್ಷಣ ನನ್ನ ಅಪ್ಪ ಲಾತವ್ಯಾಚಾರ್ ಮಠದ ಕಡೆಗೆ ಓಡಿದರು. ನಾವೂ ಕೂಡಾ ಅಮ್ಮನ ಜೊತೆ ಆ ಸ್ಥಳಕ್ಕೆ ಹೋದೆವು. ಆದರೆ ನಾವು ಬರುವಷ್ಟರಲ್ಲಿ ಶಿರೂರು […]
ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭಹಾರೈಸಿದ ಗಣ್ಯರು

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಸರಳ ರೀತಿಯಲ್ಲಿ ಸಂಪ್ರದಾಯದಂತೆ ನೆರವೇರಲಿದೆ. ಭಕ್ತಿಪೂರ್ವಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ವಿವಿಧ ಗಣ್ಯರು ಶುಭಾಶಯ ಕೋರಿದ್ದಾರೆ. ಅಷ್ಟಮಿ ಹಿನ್ನೆಲೆಯಲ್ಲಿ ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥರು ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸುವರು. ಇಂದು ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುವುದು. […]