ಉಡುಪಿ ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ರಾಯಚೂರಿನ ಭಕ್ತರಿಂದ ಹೊರಕಾಣಿಕೆ ಸಮರ್ಪಣೆ

ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕೆ, ರಾಯಚೂರಿನ ಶ್ರೀಕೃಷ್ಣಭಕ್ತರಿಂದ 220 ಕ್ವಿಂಟಲ್ ಅಕ್ಕಿ ಮತ್ತು ಬೆಲ್ಲವನ್ನು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಮುಖಾಂತರ ಭಾವೀಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಪರ್ಯಾಯ ಕಾಣಿಕೆಯಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ, ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಜೊತೆಕಾರ್ಯದರ್ಶಿ ರಾಜಗೋಪಾಲ ಭಟ್, ಪ್ರವೀಣ ಉಪಾಧ್ಯಾಯ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಶ್ವಥ ಎಲೆಯಲ್ಲಿ ಕೃಷ್ಣಾಪುರ ಶ್ರೀಗಳ ಕಲಾಕೃತಿ ರಚಿಸಿ ಪರ್ಯಾಯಕ್ಕೆ ಶುಭಕೋರಿದ ಉಡುಪಿಯ ಯುವ ಕಲಾವಿದ

ಅಶ್ವಥ ಎಲೆಯಲ್ಲಿ ಉಡುಪಿಯ ಯುವ ಕಲಾವಿದರೊಬ್ಬರು ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಕಲಾಕೃತಿ ರಚಿಸಿ ಪರ್ಯಾಯ ಮಹೋತ್ಸವಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು exclusive ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ ಗೊಂಡ ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವಥ ಎಲೆಯಲ್ಲಿ ಶ್ರೀಗಳ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಮಹೇಶ್ ಅವರು ಈ ಹಿಂದೆಯೂ ಅನೇಕ ರಾಜಕೀಯ ನಾಯಕರು, ಸಾಧಕರು, ಸ್ವಾಮೀಜಿಗಳು ಹಾಗೂ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು […]
ಇಂದು ಪರ್ಯಾಯ ಶ್ರೀ ಅದಮಾರು ಮಠಾಧೀಶರಿಗೆ ನಾಗರಿಕ ಅಭಿವಂದನಾ ಸಮಾರಂಭ

ಉಡುಪಿ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ವತಿಯಿಂದ ಜನವರಿ 17ರ ಸೋಮವಾರ ಸಂಜೆ 6.30 ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ನಾಗರಿಕ ಅಭಿವಂದನಾ ಕಾರ್ಯಕ್ರಮ ನಡೆಯಲಿದೆ . ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಪ್ರಸಿದ್ಧ ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ಅಭಿವಂದನಾ ಭಾಷಣ ಮಾಡಲಿರುವರು. ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ […]
ಉಡುಪಿ ಕೃಷ್ಣಾಪುರ ಪರ್ಯಾಯಕ್ಕೆ ಕುಂಜಾರುಗಿರಿಯ ಗಿರಿಬಳಗ ಮತ್ತು ಗಿರಿಭಗಿನಿಯರ ಬಳಗದಿಂದ ಹೊರಕಾಣಿಕೆ ಸಮರ್ಪಣೆ

ಉಡುಪಿ: ಶ್ರೀಕೃಷ್ಣಾಪುರ ಪರ್ಯಾಯಕ್ಕೆ ಕುಂಜಾರುಗಿರಿಯ ಗಿರಿಬಳಗ ಮತ್ತು ಗಿರಿಭಗಿನಿಯರ ವತಿಯಿಂದ ಭಾನುವಾರ ಹೊರಕಾಣಿಕೆ ಸಮರ್ಪಿಸಲಾಯಿತು.800 ಕಿಲೋ ಅಕ್ಕಿ, 650 ತೆಂಗಿನ ಕಾಯಿ,35 ಕಿಲೋ ಬೆಲ್ಲ, 25 ಕಿಲೋ ಸಕ್ಕರೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಿರಿಬಳಗದ ಅಧ್ಯಕ್ಷರಾದ ಪುಂಡರೀಕಾಕ್ಷ ಭಟ್, ಕಾರ್ಯದರ್ಶಿ ಶ್ರೀಶ ಕಾರಂತ, ಹಿರಿಯರಾದ ರಾಜಮೂರ್ತಿ ಭಟ್,ಪುಂಡರೀಕಾಕ್ಷ ಆಚಾರ್ಯ,ಬಳಗದ ಸದಸ್ಯರು,ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣು ಪ್ರಸಾದ್ ಪಾಡಿಗಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸರಳ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿ ಗೋಷಣೆ

ಬಹುನಿರೀಕ್ಷೆಯ ಧಾರ್ಮಿಕ ಉತ್ಸವ ನಾಡಹಬ್ಬ ಉಡುಪಿ ಪರ್ಯಾಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಅತೀ ಸರಳವಾಗಿ ನಡೆಸಲು ತೀರ್ಮಾನಿಸಿರುವುದಾಗಿ ಸಮಿತಿ ಕಾರ್ಯಾಧ್ಯಕ್ಷ ಕೆ ರಘುಪತಿ ಭಟ್ ಘೋಷಿಸಿದ್ದಾರೆ . ಸಮಿತಿ ಗೌರವಾಧ್ಯಕ್ಷ ಕೆ ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಶನಿವಾರ ರಾತ್ರಿ ನಡೆದ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ . ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ಣವಾಗಿ ಸಹಕರಿಸಬೇಕೆನ್ನುವ ಭಾವೀ ಪರ್ಯಾಯ […]