ಉಡುಪಿ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ಪುತ್ತಿಗೆ ಶ್ರೀಗಳಿಂದ ರಜತಕವಚ ಸಮರ್ಪಣೆ

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಷಷ್ಟ್ಯಬ್ದಪೂರ್ತಿ ಪ್ರಯುಕ್ತ ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಗುರುವಾರ ₹15 ಲಕ್ಷ ರೂ. ವೆಚ್ಚದಲ್ಲಿ ರಜತಕವಚ ಸಮರ್ಪಣೆ ಮಾಡಲಾಯಿತು. ಅನಂತೇಶ್ವರ ದೇವರ ಮಹಾರಥೋತ್ಸವದ ನಿಮಿತ್ತ ಜೋಡು ದೇಗುಲದ ಆಡಳಿತ ಮುಕ್ತೇಸರರೂ ಆಗಿರುವ ಪುತ್ತಿಗೆ ಶ್ರೀಗಳು, ವೈಯಕ್ತಿಕ ಸೇವಾರೂಪವಾಗಿ ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿ ಬಂದು ದೇವರಿಗೆ ರಜತಕವಚ ಸಮರ್ಪಣೆ ಮಾಡಿದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ರಥೋತ್ಸವ ಸಂಭ್ರಮ

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ ದೇವರ ಸನ್ನಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪಲ್ಲಕಿ ಉತ್ಸವ, ಉತ್ಸವ ಬಲಿ, ರಥೋತ್ಸವದಲ್ಲಿ ಚಂಡೆ ವಾದನ, ಮಂಗಳವಾದ್ಯ, ಬಿರುದು ವಾಲಿಗಳಿಂದ ಸಂಭ್ರಮದಿಂದ ರಥೋತ್ಸವ ಜರಗಿತು. ಸುಡುಮದ್ದು ಪ್ರದರ್ಶನ, ಓಲಗ ಮಂಟಪ ಪೂಜೆ ಇತ್ಯಾದಿ ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀನಿವಾಸ ತಂತ್ರಿಗಳ ಮಾರ್ಗ ದರ್ಶನದಲ್ಲಿ, ಚಂದ್ರಶೇಖರ ಐತಾಳ, ಯೋಗೀಶ್ ಉಪಾಧ್ಯ ಪೂಜಾ ವಿಧಿಗಳನ್ನು ನೆರವೇರಿಸಿದರು. ಪ್ರಧಾನ ಅರ್ಚಕರಾದ ವಾಸುದೇವ ಉಪಾಧ್ಯ, ಅರ್ಚಕ ಮಧುಸೂದನ ಉಪಾಧ್ಯ, ದೇವಳದ […]
ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಸಂಭ್ರಮ

ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿತು. ಇಂದು ಸಂಜೆ ವಿದ್ವಾನ್ ಹೆರ್ಗ ಜಯರಾಮ ತಂತ್ರಿಗಳು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಶತರುದ್ರಾಭಿಷೇಕ, ಅಷ್ಟೋತ್ತರ ಶತಕುಂಭ ಕ್ಷೀರಾಭಿಷೇಕ ಸಹಿತ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ವೈಭವದಿಂದ ಜರಗಿತು. ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
ಕಾರ್ಕಳದ ಸಂಗಮವಿದು, ಸಂಸ್ಕೃತಿಯ ಸಂಭ್ರಮವಿದು: ಕಾರ್ಕಳ ಉತ್ಸವಕ್ಕೆ ಇನ್ನು ಕೆಲವೇ ದಿನ

ಕಾರ್ಕಳ: ಕಾರ್ಕಳದ ಸಂಸ್ಕೃತಿ, ಕಲೆ, ಪ್ರವಾಸೋದ್ಯಮವನ್ನು ಪರಿಚಯಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಕಳ ಉತ್ಸವ 2022ಕ್ಕೆ ಈಗ ದಿನಗಣನೆ ಆರಂಭವಾಗಿದೆ. ಮಾ.10 ರಿಂದ 20ರವರೆಗೆ ಕಾರ್ಕಳ ಉತ್ಸವವನ್ನು ಆಯೋಜಿಸಲಾಗಿದೆ. ಕರೋನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಕಾರ್ಕಳ ಉತ್ಸವದ ಸಿದ್ಧತೆಗೀಗ ಮತ್ತೆ ಜೀವ ಬಂದಿದೆ. ಕಾರ್ಕಳ ಶಾಸಕ, ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಇಲ್ಲಿನ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನಲ್ಲಿ ಯಕ್ಷ […]
ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಫೆ.26 ರಂದು ನಡೆದ ಇತಿಹಾಸ ಪ್ರಸಿದ್ಧ ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 04 ಜೊತೆ ಅಡ್ಡಹಲಗೆ: 09 ಜೊತೆ ಹಗ್ಗ ಹಿರಿಯ: 17 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 18 ಜೊತೆ ನೇಗಿಲು ಕಿರಿಯ: 99 ಜೊತೆ ಒಟ್ಟು ಕೋಣಗಳ ಸಂಖ್ಯೆ: 179 ಜೊತೆ ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: […]