ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ ಉದ್ಘಾಟನೆ

ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಶನಿವಾರ ಉದ್ಘಾಟಿಸಿದರು. ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿಮತ ಭೇದವಿಲ್ಲದೆ ಆ ಗ್ರಾಮದ ಎಲ್ಲಾ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾದುದು. ಇದರಿಂದ ದೇವಸ್ಥಾನದ ಜತೆ ಮನೆಗಳಲ್ಲಿಯೂ ಸಾನಿಧ್ಯ ವೃದ್ಧಿ ಯಾಗುತ್ತದೆ ಎಂದು ಶ್ರೀಪಾದರು ಹೇಳಿದರು. ದೇವಸ್ಥಾನದ […]
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹರಿದು ಬಂತು ದಾಖಲೆಯ ಹೊರೆಕಾಣಿಕೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಹಾಗೂ ಚತುಃಪವಿತ್ರ ನಾಗಬ್ರಹ್ಮಮಂಡಲೋತ್ಸವಕ್ಕೆ ಸಮಸ್ತ ಮೊಗವೀರ ಕುಲಭಾಂದವರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ಸಮರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಆಗಮಿಸಿದ ದಕ್ಷಿಣ ವಿಭಾಗದ ಹೊರೆಕಾಣಿಕೆ ಮೆರವಣಿಗೆಯನ್ನು ಎರ್ಮಾಳ್ ನಲ್ಲಿ, ಉತ್ತರದ ಶಿರೂರು ಗಡಿಭಾಗದಿಂದ ಮೊದಲ್ಗೊಂಡು ಆಗಮಿಸಿದ ಉಡುಪಿ ಜಿಲ್ಲೆಯ ಹೊರೆ ಕಾಣಿಕೆ ಮೆರವಣಿಗೆಗೆ ಮುಳೂರಿನಲ್ಲಿ ಚಾಲನೆ ನೀಡಲಾಗಿದೆ. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಸಹಿತ ದ.ಕ. […]
ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ

ಬೆಂಗಳೂರು: ಪುತ್ತಿಗೆ ಶ್ರೀಪಾದರು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದ ಭಕ್ತರಿಗೂ ಸಾರಿದವರು ಎಂದು ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು. ಗುರುವಾರ ನಗರದ. ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ಶ್ರೀಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಬೆಂಗಳೂರು ಅಭಿಮಾನಿಗಳು ಮತ್ತು ಶಿಷ್ಯವೃಂದದವರು ಆಯೋಜಿಸಿದ್ದ `ಗುರು ವಂದನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಗಳದ್ದು. ಮೇರು ವ್ಯಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬ್ಜರಾಗಿ ಕಾಣುತ್ತೇವೆ. ಸುಜ್ಞಾನೇಂದ್ರತೀರ್ಥ ಅನಂತರದಲ್ಲಿ ಮಠವನ್ನು ಸಮರ್ಥವಾಗಿ ನಿರ್ವಹಿಸಿದರು ಎಂದರು. ಆದರ್ಶ ಗುರು ಶಿಷ್ಯರು : […]
ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ: ವೈಭವದ ಹೊರಕಾಣಿಕೆ ಮೆರವಣಿಗೆ

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಏ.10 ರ ತನಕ ನಡೆಯುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ಗುರುವಾರ ಜೋಡುಕಟ್ಟೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆವು ಅಮ್ಮನ ಸನ್ನಿಧಾನಕ್ಕೆ ಸಮರ್ಪಿಸಲಾಯಿತು. ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಡಾ. ರೋಶನ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದ್ದ, ಊರ ಪರವೂರ ಭಕ್ತರು ವಾಹನಗಳಲ್ಲಿ ಅಕ್ಕಿ, ಬೇಳೆಕಾಳು, ಸಕ್ಕರೆ, ಬೆಲ್ಲ, ತುಪ್ಪ, ತೆಂಗಿನಕಾಯಿ ಅರ್ಪಿಸಿದರು. ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಹಾಲು ಪಾಯಸ ಸಹಿತ ಮಹಾ ಅನ್ನಸಂತರ್ಪಣೆ ನೆರವೇರಲಿದ್ದು, ಕಾಳಿಂಗಮರ್ಧನ ಕೃಷ್ಣ, ಈಶ್ವರ, […]
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ: ಎ.2 ರಿಂದ ಗ್ರಾಮ ಭಜನೆ

ಉಡುಪಿ: ಉಡುಪಿ ಜಿಲ್ಲೆಯ 1400 ವರ್ಷ ಇತಿಹಾಸ ಇರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿದ್ದು ಮೇ 3ರಿಂದ ಮೇ 10ರ ತನಕ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪೂರ್ವಬಾವಿಯಾಗಿ ಸಮಸ್ತ ಕಡಿಯಾಳಿ ಗ್ರಾಮದ ಮನೆ ಮನೆಗಳಲ್ಲಿ ‘ಗ್ರಾಮ ಭಜನೆ’ ಎಂಬ ವಿನೂತನ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 2 ಶನಿವಾರ ಚಂದ್ರಮಾನ ಯುಗಾದಿಯ ಪರ್ವ ಕಾಲದಲ್ಲಿ ಸಂಜೆ 4 ಗಂಟೆಗೆ ಕಾಣಿಯೂರು ಮಠಾದೀಶರಾದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಈ […]