ವಿಜೃಂಭಣೆಯ ಪೆರ್ಡೂರು ಜಾತ್ರಾ ಮಹೋತ್ಸವ: ಪ್ರಸನ್ನ ಪೆರ್ಡೂರು ಅವರು ಕ್ಲಿಕ್ಕಿಸಿದ ಸುಂದರವಾದ ಚಿತ್ರಗಳು..

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ರಥೋತ್ಸವ ಮೆರವಣಿಗೆಯು ಮಾ.16 ರಂದು ಸಾಯಂಕಾಲ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರು ಅವರು ಶ್ರೀಮನ್ಮಹಾರಥೋತ್ಸವ, ಹಚ್ಚಡ ಸೇವೆ, ಸುಡುಮದ್ದು ಪ್ರದರ್ಶನ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದ, ನಾಟಕ ಹಾಗೂ ಯಕ್ಷಗಾನದ ಸುಂದರವಾದ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.

ನಾಳೆ ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ: ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ

ಉಡುಪಿ, ಮಾರ್ಚ್ 15: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ರಾ.ಹೆ.169(ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಮಾರ್ಚ್ 16 ರಂದು ಸಂಜೆ 4 ಗಂಟೆಯಿ೦ದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ. ರಾ.ಹೆ.169(ಎ)ರಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳಿಗೆ ಹಿರಿಯಡ್ಕ ಜಂಕ್ಷನ್ ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ-ಹರಿಖಂಡಿಗೆ-ಬೈರ೦ಪಳ್ಳಿ-ಪೆರ್ಡೂರು-ಮೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ […]

ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ 

ಮಲ್ಪೆ: ಜೀರ್ಣೋದ್ಧಾರಗೊಂಡ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ದೇಗುಲದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಬುಧವಾರ ಬೆಳಗ್ಗೆ ಜರಗಿತು. ಶಾಸಕ ಯಶ್‌ಪಾಲ್ ಸುವರ್ಣ ಅವರು ಚಪ್ಪರ ಮುಹೂರ್ತವನ್ನು ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು, ಆನುವಂಶಿಕ ಆಡಳಿತ ಮೊಕೇಸರ ಶ್ರೀನಿವಾಸ ಭಟ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಉಪಾಧ್ಯಕ್ಷ ಆನಂದ ಪಿ. ಸುವರ್ಣ, ರಮೇಶ್ ಕೋಟ್ಯಾನ್, ಶರತ್ […]

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಫೆ.14ರಂದು ಶ್ರೀ ಮನ್ಮಹಾರಥೋತ್ಸವ

ಬ್ರಹ್ಮಾವರ: ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 13 ಕುಂಭ ಸಂಕ್ರಮಣದಂದು ರಾತ್ರಿ ಕೆಂಡೆಸೇವೆ, 14ರಂದು ಶ್ರೀ ಮನ್ಮಹಾರಥೋತ್ಸವ, 15ರಂದು ರಾತ್ರಿ ಕೆರೆ ದೀಪೋತ್ಸವ, ಪಲ್ಲಕ್ಕಿ ಉತ್ಸವ, ಅಷ್ಟವಧಾನ ಸೇವೆ ನಡೆಯಲಿದ್ದು, ಆನಂತರ ಐದು ಮೇಳಗಳಿಂದ ಸೇವೆ ಆಟ ನಡೆಯಲಿದೆ. ದೇವಸ್ಥಾನದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಹೆಚ್ಚುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಂಡಸೇವೆ ಈ ಬಾರಿ ಮಾಮೂಲಿಗಿಂತ ಬೇಗನೆ ಪ್ರಾರಂಭಗೊಳ್ಳಲಿದೆ. ರಾತ್ರಿ 7ರಿಂದ ಸೇವಾ ಚೀಟಿ ನೀಡಲು ಪ್ರಾರಂಭವಾಗಲಿದ್ದು, ರಾತ್ರಿ 9ಕ್ಕೆ ದರ್ಶನ ಸೇವೆ ಮುಗಿದ […]

ಮಲ್ಪೆ ವಡಭಾಂಡ ಬಲರಾಮ ದೇವಸ್ಥಾನ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಲೋಕಾರ್ಪಣೆ 

ಮಲ್ಪೆ: ಇಲ್ಲಿನ ಇತಿಹಾಸ ಪ್ರಸಿದ್ದ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಬಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಫೆ.11 ರಂದು ದೇವಸ್ಥಾನದಲ್ಲಿ ನಡೆಯಿತು. ಶಾಸಕ ಯಶ್‌ಪಾಲ್ ಸುವರ್ಣ ಅವರು ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಗ್ರಾಮದ ಭಕ್ತರ ಒಮ್ಮತಡಾ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲಿ ಎಂದರು. ಬ್ರಹ್ಮಕಲಶೋತ್ಸವ ಸಮಿತಿಯ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕೋಶಾಧಿಕಾರಿ ಟಿ. […]