ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ: ಸಚಿವ ರಾಮಲಿಂಗಾ ರೆಡ್ಡಿ

ಉಡುಪಿ: ವಡಭಾಂಡೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಮಲೈಯಲ್ಲಿರುವ ಪುರಾಣ ಪ್ರಸಿದ್ಧ ವಡಭಾಂಡೇಶ್ವರ ಬಲರಾಮನ ದೇಗುಲಕ್ಕೆ ಭಾನುವಾರ ಭೇಟಿ ನೀಡಿ, ಜೀರ್ಣೋದ್ಧಾರ ಕಾಮಗಾರಿ ಅವಲೋಕಿಸಿ ಮಾತನಾಡಿದರು. ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾ ಮಹೋತ್ಸವದ ಹಿನ್ನೆಯಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು 15 ದಿನದ ಹಿಂದೆಯೇ ಆದೇಶ ಹೊರಡಿಸಿದ್ದೇನೆ. ರಾಜ್ಯ ಸರ್ಕಾರ ಸಿ ದರ್ಜೆಯ ಎಲ್ಲ ದೇಗುಲವನ್ನು ಅಭಿವೃದ್ಧಿ ಮಾಡಬೇಕಿದೆ. […]

ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆ: ನಾಳೆ ಉಡುಪಿಯಲ್ಲಿ ಮೂರು ಬಸ್ಸುಗಳಿಂದ ಉಚಿತ ಸೇವೆ

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಹಾಗೆಯೇ ನಾಳೆ ಉಡುಪಿಯಿಂದ ಹೆಬ್ರಿಗೆ ತೆರಳುವ ಎಸ್ ಆರ್ ಎಮ್, ಎಸ್ ಡಿ ಎಮ್, ಮುಟ್ಲುಪಾಡಿಯಿಂದ ಉಡುಪಿಗೆ ತೆರಳುವ ಎಸ್ ಎಮ್ ಎಮ್ ಎಸ್ ಬಸ್ಸಿನವರು ದಿನವಿಡೀ ಉಚಿತ ಪ್ರಯಾಣವನ್ನು ನಾಗರಿಕರಿಗೆ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸರಸ್ವತಿಯ ಉಗಮ ಸ್ಥಾನದಿಂದ ಅಯೋಧ್ಯೆಗೆ ತೀರ್ಥ ಕಳುಹಿಸಿದ ಗೌಡಪಾದಾಚಾರ್ಯ ಮಠ: ಪಿ.ರಾಮಚಂದ್ರ ಕಾಮತ್ ಅವರಿಂದ ಹಸ್ತಾಂತರ

ಶ್ರೀಮದ್ ಗೌಡಪಾದಾಚಾರ್ಯ ಮಠವು ತನ್ನ ಪರಂಪರೆಯಲ್ಲಿ 77 ನೇ ಸ್ವಾಮೀಜಿಯನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ಮಠ ಪರಂಪರೆಯಾಗಿದೆ. ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರು ದೈವಿಕ ಸಂಪ್ರದಾಯಗಳನ್ನು ಗೌರವಿಸಿ ಹಿಮಾಲಯದಲ್ಲಿರುವ ಗರ್ವಾಲ್ ಉತ್ತರಾಖಂಡದಿಂದ ಸರಸ್ವತಿ ನದಿಯ ಮೂಲದಿಂದ ಪಡೆದ ಮಂಗಳಕರವಾದ ಸರಸ್ವತಿ ನದಿಯ ಶುಭ ಉಗಮ ತೀರ್ಥವನ್ನು ಕಳುಹಿಸಿ ಕೃಪೆ ತೋರಿದ್ದಾರೆ. ಈ ಅಪರೂಪದ ಮತ್ತು ಪವಿತ್ರ ತೀರ್ಥವನ್ನು ಶ್ರೀ ಸರಸ್ವತಿ ಹೆರಿಟೇಜ್ ಪ್ರತಿಷ್ಠಾನದ ಜಗದೀಶ್ ಗಾಂಧಿಯವರ ಮೂಲಕ ಭಕ್ತಿಯಿಂದ ಸಂಗ್ರಹಿಸಲಾಗಿದೆ. ಪೂಜೆಯ ನಂತರ ಸ್ವಾಮೀಜಿಯವರು […]

ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವ ಸಂಭ್ರಮ: ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗಿ.

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಭಕ್ತರು ಕಣ್ತುಂಬಿಕೊಂಡರು. ಕಾಪು ದಂಡಯಾತ್ರೆ ಮಧ್ಯರಾತ್ರಿ ಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಜೋಡುಕಟ್ಟೆ ಆಗಮಿಸಿದರು. ನಗರದ ಜೋಡುಕಟ್ಟೆಯಿಂದ ನಸುಕಿನ ವೇಳೆ 2:30ರ ಸುಮಾರಿಗೆ ಮೆರವಣಿಗೆ ಆರಂಭಗೊಂಡಿತು. ಪುತ್ತಿಗೆ ಮಠದ ಪಟ್ಟದ ದೇವರು, ವಿದ್ವಾಂಸರು, ನಾಡಿನ ಗಣ್ಯರು ಹಾಗೂ ಸಹಸ್ರಾರು ಭಕ್ತಾದಿಗಳೊಂದಿಗೆ ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಐಡಿ ಯಲ್ ಸರ್ಕಲ್, ತೆಂಕಪೇಟೆ ಮಾರ್ಗದ […]

ಉಡುಪಿXPRESS ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ಬಿಡುಗಡೆ

ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಉಡುಪಿXPRESS ನ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ವನ್ನು ಬುಧವಾರ ಕೃಷ್ಣಮಠದ ಕನಕದಾಸ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು. ಪರ್ಯಾಯ ಪೀಠವೇರಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಂಚಿಕೆ ಅನಾವರಣಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪರ್ಯಾಯ ಉತ್ಸವ ಸಮಿತಿ, ಹೊರೆಕಾಣಿಕೆಯ ಸಮಿತಿಯ ಸದಸ್ಯರು, ಉಡುಪಿXPRESS ಮಾರುಕಟ್ಟೆ ವಿಭಾಗದ ಸ್ವರೂಪ್ ಶ್ರೀಯಾನ್, ಅಶೋಕ್, ನಿತಿನ್ ಉಪಸ್ಥಿತರಿದ್ದರು.