ಬಿಹಾರದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಪೇಜಾವರ ಶ್ರೀ

ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಜಗದ್ಗುರು ಶ್ರೀರಾಮಾನುಜಾಚಾರ್ಯರ ಜನ್ಮಸಹಸ್ರಾಬ್ಧ ಪ್ರಯುಕ್ತ ಬಿಹಾರದ ಬಕ್ಸರ್ ನಲ್ಲಿ ಶ್ರೀ ದೇವಭೂಮಿ ವಾಮನಾಶ್ರಮದಲ್ಲಿ ನಡೆದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಧರ್ಮಸಂದೇಶ ನೀಡಿದರು. ಶ್ರೀ ಜೀಯರ್ ಸ್ವಾಮೀಜಿ, ಶ್ರೀ ಅಯೋಧ್ಯಾನಾಥ ಸ್ವಾಮೀಜಿ, ಶ್ರೀಧರಾಚಾರ್ಯ ಸ್ವಾಮೀಜಿ ಮೊದಲಾದವರ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದೇಶಾದ್ಯಂತದಿಂದ ಹಾಗೂ ವಿದೇಶಗಳಿಂದಲೂ ನೂರಾರು ಸಾಧು ಸಂತರು ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಧರ್ಮ ಚಿಂತನ- ಮಂಥನ […]

ಉಡುಪಿ: ಏ.2ರಿಂದ 10ರ ವರೆಗೆ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 2 ರಿಂದ 10ರ ವರೆಗೆ ದೇವಸ್ಥಾನದ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಜೀರ್ಣೋದ್ಧಾರ ಸಮಿತಿ‌ಯ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ‌ ಆಚಾರ್ಯ ಮಾಹಿತಿ ನೀಡಿದರು. ಪುತ್ತೂರು ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀದೇವಿಗೆ ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏ.2 ರಂದು ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ […]

ಕಾರ್ಕಳ ಉತ್ಸವಕ್ಕೆ ರಂಗೇರಿ ನಿಂತಿದೆ ಶಿಲ್ಪಕಾಶಿ ಕಾರ್ಕಳ: ಎಷ್ಟೆಲ್ಲಾ ಕೆಲಸ ಆಗಿದೆ ಗೊತ್ತಾ?

ಕಾರ್ಕಳ: ಕೊನೆಗೂ ಕಾರ್ಕಳ‌ ಉತ್ಸವಕ್ಕೆ ಅಖಾಡ ಸಿದ್ಧಗೊಂಡಿದೆ. ಶಿಲ್ಪಕಾಶಿ ಎಂದೇ ಜನಮಾನಸದಲ್ಲಿ ಛಾಪು ಹೊತ್ತಿರುವ ಕಾರ್ಕಳದಲ್ಲೀಗ ಎಲ್ಲೆಡೆ ಜಗಮಗ, ಸಂಭ್ರಮ, ಸಡಗರದ ಅಬ್ಬರ. ಮಾ.10 ರಿಂದ ಮಾ.20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಭರ್ಜರಿ ಚಾಲನೆ ಸಿಗಲಿದೆ. ಬೀದಿ ಬೀದಿಗೂ ಬೆಳಕಿನ ಉತ್ಸವ: ಕಾರ್ಕಳ ನಗರದಲ್ಲೀಗ ಪ್ರತೀ ಬೀದಿ ಬೀದಿಯೂ ಸಿಂಗಾರಗೊಂಡಿದ್ದು ಪ್ರತೀ ಬೀದಿಯನ್ನೂ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೇ ಸಂಪೂರ್ಣ ವಿದ್ಯುತ್ […]

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ, ಆವರಣ ಗೋಡೆ ಸಮರ್ಪಣೆ

ಕಡಬ: ಪದವಿಭೂಷಣ ಪುರಸ್ಕೃತ ಹಿರಿಯ ಸಂತ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ದ.ಕ‌ ಜಿಲ್ಲೆ ಕಡಬ ತಾಲೂಕು ಹಳೇನೇರಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿರುವ ಚಂದ್ರಮಂಡಲ ರಥ ಹಾಗೂ ದೇವಾಲಯಕ್ಕೆ ನಿರ್ಮಿಸಲಾದ ಆವರಣಗೋಡೆಯ ಸಮರ್ಪಣೆ ಕಾರ್ಯಕ್ರಮಗಳು ಭಾನುವಾರ ಸೋಮವಾರ ನೆರವೇರಿತು. ರಾಜ್ಯ ಮುಜರಾಯಿ ಇಲಾಖೆಯ ಇಪ್ಪತ್ತು ಲಕ್ಷ ರೂ ಅನುದಾನ‌ ಹಾಗೂ ಭಕ್ತರ ನೆರವಿನಿಂದ ಈ ನಿರ್ಮಾಣಗಳು ನಡೆದಿವೆ. ಭಾನುವಾರ ಸಂಜೆ ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿ […]

ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನದ ಕೊಡುಗೆ ಅಪಾರ: ಗೋಪಾಲಕೃಷ್ಣ ನಾಯರಿ

ಉಡುಪಿ, ಮಾ.7: ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನದ ಕೊಡುಗೆ ಅಪಾರವಾಗಿದ್ದು, ಯಕ್ಷಗಾನ ಹಾಗೂ ನಾಟಕಗಳಿಗೆ ಇರುವಷ್ಟು ಶಕ್ತಿ ಬೇರಾವುದೇ ಕಲೆಗಳಿಗೆ ಇಲ್ಲ ಎಂದು ರಂಗ ಸಂಶೋಧನಾ ಕೇಂದ್ರದ ಮುಖ್ಯಸ್ಥ ಗೋಪಾಲಕೃಷ್ಣ ನಾಯರಿ ಹೇಳಿದರು. ಅವರು ರವಿವಾರ, ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಸಮಸ್ತರು ರಂಗ ಸಂಶೋಧನಾ ಕೆಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 3 ದಿನಗಳ ಯಕ್ಷೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]