ಉಡುಪಿ ಕೃಷ್ಣಮಠಕ್ಕೂ ಮಹಾಲಕ್ಷ್ಮೀ ಸನ್ನಿಧಾನಕ್ಕೂ ಅವಿನಾಭಾವ ಸಂಬಂಧವಿದೆ: ಪುತ್ತಿಗೆ ಶ್ರೀ

ಉಡುಪಿ: ಉಡುಪಿ ಶ್ರೀಕೃಷ್ಣ ಸನ್ನಿಧಾನ ಹಾಗೂ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸನ್ನಿಧಾನಗಳು ಪರಸ್ಪರ ಅಂತಃ ಸಂಬಂಧವುಳ್ಳ ಸನ್ನಿಧಾನಗಳಾಗಿದೆ. ಹಾಗಾಗಿ ಲಕ್ಷ್ಮೀದೇವಿ ಇಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ. ದೇಗುಲದ ಬ್ರಹ್ಮಕಲಶೋತ್ಸವವು ಡಾ| ಜಿ. ಶಂಕರ್ ಅವರಿಂದ ಆದರ್ಶಪ್ರಾಯವಾಗಿ ನಡೆದಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದ ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. […]

ಅಂಬಲಪಾಡಿ ಬಿಲ್ಲವ ಸೇವಾ ಸಂಘದಲ್ಲಿ ಎ.11ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಬೇತಿ ಶಿಬಿರ

ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ, ನೇತ್ರಾವತಿ ವಲಯ, ಉಡುಪಿ ಜಿಲ್ಲೆ ಇದರ ವತಿಯಿಂದ ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಆರೋಗ್ಯ ರಕ್ಷಣೆ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಎಪ್ರಿಲ್ 11ರಿಂದ ಬೆಳಿಗ್ಗೆ 5.00ರಿಂದ 6.30ರ ವರೆಗೆ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಗಳು ನಡೆಯಲಿವೆ. ಎಪ್ರಿಲ್ 10 ರವಿವಾರ ಬೆಳಿಗ್ಗೆ 10.00ಕ್ಕೆ ಉಚಿತ ಯೋಗ ಶಿಕ್ಷಣ […]

ಸಗ್ರಿ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ; ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುತ್ತಿಗೆ ಶ್ರೀ ಚಾಲನೆ

ಉಡುಪಿ: ಸಗ್ರಿ ಶ್ರೀ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವದ ಅಂಗವಾಗಿ ಆಯೋಜಿಸಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು. ಶಾಸಕ ಕೆ. ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೂರ್ಯನಾರಾಯಣ ಉಪಾಧ್ಯ, ಸಗ್ರಿ ಶ್ರೀ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ಸಾಮಗ, ಉಡುಪಿ ನಗರ ಸಭೆಯ […]

ಎ.9: ನೀರೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ 42ನೇ ವರ್ಷದ ಭಜನಾ ಮಂಗಲೋತ್ಸವ

ಬೈಲೂರು: ಕಾರ್ಕಳ ತಾಲೂಕಿನ ನೀರೆ ಜಡ್ಡಿನಂಗಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ 42ನೇ ವರ್ಷದ ಭಜನಾ ಮಂಗಲೋತ್ಸವ ಎ.9 ಶನಿವಾರ ಸಂಜೆ ಗಂಟೆ 6 ಗೋಧೂಳಿ ಮುಹೂರ್ತದಲ್ಲಿ ನೀರೆ ಜಡ್ಡಿನಂಗಡಿಯಲ್ಲಿ ನಡೆಯಲಿದೆ. ಸಂಜೆ 6 ರಿಂದ ಭಜನೆ ಪ್ರಾರಂಭವಾಗಿ ಭಾನುವಾರ ಮುಂಜಾನೆ ಗಂಟೆ 4:30 ರ ತನಕ ಭಜನಾ ಮಂಗಲೋತ್ಸವ ವಿವಿಧ ಮಂಡಳಿಗಳಿಂದ ನಡೆಯಲಿದ್ದು, ಸರ್ವರಿಗೂ ಆದರದ ಸ್ವಾಗತ ಕೋರಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಕೋಟಿ ಕುಂಕುಮಾರ್ಚನೆ

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕದ ತದಂಗವಾಗಿ ಎ.8 ರಂದು ಕೋಟಿ ಕುಂಕುಮಾರ್ಚನೆ ಸೇವೆಯು ನೆರವೇರಲಿದ್ದು, ಮಧ್ಯಾಹ್ನ ಹಾಲು ಪಾಯಸ ಸಹಿತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12:30 ರಿಂದ ಭಕ್ತಿ ಸಂಗೀತ, ಸಂಜೆ 6:30 ರಿಂದ ತಾಳಮದ್ದಳೆ, ರಾತ್ರಿ 9ರಿಂದ ‘ಆನಿದ ಮನದಾನಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿರುವ ಕೋಟಿ ಕುಂಕುಮಾರ್ಚನೆ ಸೇವೆಯು ಮಾ.11ರಂದು ಆರಂಭಗೊಂಡಿದ್ದು ಎ.8 ರಂದು ಸಮಾಪನಗೊಳ್ಳಲಿದೆ. ಎಂದು […]