ಕಾರ್ಕಳ ಶ್ರೀ ವೆಂಕಟರಮಣ ದೇವಳದ ರಥೋತ್ಸವ: ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಉಡುಪಿ: ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮೇ 9 ರಿಂದ 14 ರ ವರೆಗೆ ರಥೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಮೇ 13 ರಂದು ಸಂಜೆ 4 ಗಂಟೆಯಿಂದ ಮೇ 14 ರ ಬೆಳಗ್ಗೆ 6 ಗಂಟೆಯವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ. ಪರ್ಯಾಯ ಮಾರ್ಗದ ವಿವರ: ಘನವಾಹನಗಳು ಬಂಗ್ಲೆಗುಡ್ಡೆ- ಹಿರಿಯಂಗಡಿ- ಪುಲ್ಕೆರಿ ಮಾರ್ಗವಾಗಿ […]
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಶ್ರೀಮನ್ಮಹಾರಥೋತ್ಸವ.
ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀ ಮನ್ಮಹಾರಥೋತ್ಸವ ನಡೆಯಿತು . ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗ ಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು. ಪರ್ಯಾಯ ತಂತ್ರಿ ವೇ.ಮೂ. ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ.ಮೂ ಗುರುರಾಜಭಟ್ ಅರ್ಚಕತ್ವದಲ್ಲಿ, […]
ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಶ್ರೀನಾಗದೇವರ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶ ಸಂಪನ್ನ
ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಸಮೀಪ ಸೀತಾ ನದಿಯ ತಟದಲ್ಲಿರುವ ಪಂಚಮೀಕಾನು ನಾಗಸನ್ನಿಯಲ್ಲಿ ಗುರುವಾರ ಶ್ರೀನಾಗದೇವರ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶ ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ನಾಗದೇವರಿಗೆ ಬ್ರಹ್ಮಕಲಾಭಿಷೇಕ, ಮಹಾಪೂಜೆ ಹಾಗೂ ನಾಗಪಾತ್ರಿ ವೈ. ಲಕ್ಷ್ಮೀನಾರಾಯಣ ಮಧ್ಯಸ್ಥ ಅವರಿಂದ ನಾಗದೇವರ ಸಂದರ್ಶನ ನಡೆಯಿತು. ನಂತರ ಪಲ್ಲಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಜರಗಿತು. ಅರ್ಚಕರಾದ ಚಂದ್ರಶೇಖರ ಅಡಿಗ, ಕೃಷ್ಣ ಅಡಿಗ, ರಾಘವೇಂದ್ರ ಅಡಿಗರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]
ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಾಳೆ ಅಷ್ಟಪವಿತ್ರ ನಾಗಮಂಡಲೋತ್ಸವ.
ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.18 ಗುರುವಾರ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 6-15ರಿಂದ: ಪುಣ್ಯಾಹ ಸರ್ಪಸೂಕ್ತ ಹೋಮ, ಪುರುಷಸೂಕ್ತ ಹೋಮ, ಪಾರಾಯಣ. ಬೆಳಿಗ್ಗೆ 7-30ರಿಂದ: ಕಲಶಾಭಿಷೇಕ ಪ್ರಾರಂಭ. ಬೆಳಿಗ್ಗೆ 9-00ರಿಂದ: ಬ್ರಹ್ಮಕಲಶಾಭಿಷೇಕ ಪೂಜೆ, ದಾನಾದಿಗಳು, ದಶದಾನ, ವಟುಆರಾಧನೆ, ಬ್ರಾಹ್ಮಣ ಆರಾಧನೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಪೂಜಾ, ಸಂದರ್ಶನ, ಫಲ್ಲಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ […]
ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ನಾಗಮಂಡಲ ಹೊರೆಕಾಣಿಕೆ ಸಮರ್ಪಣೆ.
ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.13ರಿಂದ 19ರ ತನಕ ನಡೆಯಲಿರುವ ಸಮಗ್ರ ಜೀರ್ಣೋದ್ಧಾರಾಂಗ ಪುನಃ ಪ್ರತಿಷ್ಠಾಪನಾ ಮಹೋತ್ಸವ, ನಾಗಮಂಡಲ ಪ್ರಯುಕ್ತ ರವಿವಾರ ಹೊರೆಕಾಣಿಕೆ ಸಮರ್ಪಣೆ ಭವ್ಯ ಮೆರವಣಿಗೆಯಿಂದ ಜರಗಿತು. ಕುಂಜಾಲಿನ ನೀಲಾವರ ಕ್ರಾಸ್ ನಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಅನೂಪ್ ಕುಮಾರ್ ಶೆಟ್ಟಿ, ಹೇಮ ವಿ. ಬಾಬ್ರಿ, ಕೆ. ತಮ್ಮಯ್ಯ […]