ಪಂದುಬೆಟ್ಟುವಿನ ನಾಗಮೂಲಸ್ಥಾನದಲ್ಲಿ ನಾಗಾರಾಧನೆ, ನಾಗತಂಬಿಲ ಸೇವೆ

ಉಡುಪಿ: ಕಲ್ಮಾಡಿ ಪಂದುಬೆಟ್ಟುವಿನ ನಾಗ ಮೂಲಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ನಾಗತಂಬಿಲ‌ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.

ಚಿಕ್ಕಮಗಳೂರು ಸಹಿತ ಉಡುಪಿಯ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಭಕ್ತರು ತಂದ‌ ಹಾಲು, ಸೀಯಾಳವನ್ನು ಅರ್ಚಕರು ದೇವರಿಗೆ ಅರ್ಪಿಸಿದರು.

ಇದು ಅತ್ಯಂತ ಪ್ರಾಚೀನ ನಾಗಬನವಾಗಿದ್ದು, ನೂರಾರು ಕುಟುಂಬಗಳಿಗೆ ಮೂಲಸ್ಥಾನವೂ ಆಗಿದೆ. ಅಲ್ಲದೆ, ಗರೋಡಿ, ದೇವಸ್ಥಾನ, ಗುತ್ತುದ ಮನೆಗಳಿಗೆ ಈ ನಾಗಬನವೇ ಮೂಲ. ಹೀಗಾಗಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು‌ ಆಗಮಿಸಿ ತನು ಸೇವೆ ಅನ್ನು ಅರ್ಪಿಸುತ್ತಾರೆ.