ಕರಾವಳಿ ವಿವಿಧೆಡೆ ಗಣೇಶೋತ್ಸವ ಸಂಭ್ರಮ
ಚಿತ್ರ :ಸುಜಿತ್ ಕೊಠಾರಿ
ಶ್ರೀಚಕ್ರ ಪೀಠ ಸುರಪೋಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ವೈಭವದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ
ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಶ್ರಾವಣ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಪೂಜೆಯ ಅಂಗವಾಗಿ ಶ್ರೀ ದುರ್ಗಾ ಆದಿಶಕ್ತಿ ದೇವಿ ಹಾಗೂ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನವನ್ನು ಕನ್ಯಾಕುಮಾರಿಯಿಂದ ವಿಶೇಷವಾಗಿ ತರಿಸಲಾಗಿದ್ದ ತಾವರೆಯ ಹೂವಿನಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. […]
ಉಡುಪಿ ತುಳುನಾಡ ಟೈಗರ್ಸ್ ನಿಂದ ಮೂರನೇ ವರ್ಷದ ಹುಲಿ ಕುಣಿತ
ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ನೇತೃತ್ವದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ಮೂರನೇ ವರ್ಷದ ಹುಲಿ ಕುಣಿತ ನಡೆಯಲಿದೆ.
ಪಂದುಬೆಟ್ಟುವಿನ ನಾಗಮೂಲಸ್ಥಾನದಲ್ಲಿ ನಾಗಾರಾಧನೆ, ನಾಗತಂಬಿಲ ಸೇವೆ
ಉಡುಪಿ: ಕಲ್ಮಾಡಿ ಪಂದುಬೆಟ್ಟುವಿನ ನಾಗ ಮೂಲಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ನಾಗತಂಬಿಲ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಚಿಕ್ಕಮಗಳೂರು ಸಹಿತ ಉಡುಪಿಯ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಭಕ್ತರು ತಂದ ಹಾಲು, ಸೀಯಾಳವನ್ನು ಅರ್ಚಕರು ದೇವರಿಗೆ ಅರ್ಪಿಸಿದರು. ಇದು ಅತ್ಯಂತ ಪ್ರಾಚೀನ ನಾಗಬನವಾಗಿದ್ದು, ನೂರಾರು ಕುಟುಂಬಗಳಿಗೆ ಮೂಲಸ್ಥಾನವೂ ಆಗಿದೆ. ಅಲ್ಲದೆ, ಗರೋಡಿ, ದೇವಸ್ಥಾನ, ಗುತ್ತುದ ಮನೆಗಳಿಗೆ ಈ ನಾಗಬನವೇ ಮೂಲ. ಹೀಗಾಗಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ತನು ಸೇವೆ ಅನ್ನು […]
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೋಜರಾಜ್ ವಾಮಂಜೂರು ದಂಪತಿ ಭೇಟಿ
ಉಡುಪಿ: ಶ್ರೀಕೃಷ್ಣಮಠಕ್ಕೆ ತುಳು ರಂಗಭೂಮಿ ಹಾಗೂ ಸಿನಿಮಾ ಕಲಾವಿದರಾದ ಭೋಜರಾಜ್ ವಾಮಂಜೂರು ಇವರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಮಧೂರು ನಾರಾಯಣ ಶರಳಾಯ ಇವರು ಉಪಸ್ಥಿತರಿದ್ದರು.