ದಸರಾ ಹಬ್ಬದ ಪ್ರಯುಕ್ತ ಬಸ್ರೂರು ಮಹಾಲಸಾ ನಾರಾಯಣೀ ದೇವಾಲಯದಲ್ಲಿ ನವರಾತ್ರಿ ಮಹೋತ್ಸವ

ಬಸ್ರೂರು : ಇತಿಹಾಸ ಪ್ರಸಿದ್ಧ ಬಸ್ರೂರಿನ ಶ್ರೀ ಮಹಾಲಸಾ ನಾರಾಯಣಿ ದೇವಾಲಯದಲ್ಲಿ ಇದೇ ತಿಂಗಳ 15 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಇದೇ ತಿಂಗಳು ದಿ. 15.10.2023 ರಿಂದ ದಿ. 24.10.2023 ಮಂಗಳವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ವಿಜೃಂಭಣೆಯಿಂದ ನಡೆಯಲಿವೆ.

ನವರಾತ್ರಿ ಕಾರ್ಯಕ್ರಮದ ಅಂಗವಾಗಿ ತಾ.22.10 2023 ರವಿವಾರ ಸಂಜೆ ದುರ್ಗಾಷ್ಟಮಿ ಪ್ರಯುಕ್ತ ದುರ್ಗಾನಮಸ್ಕಾರ ಸೇವೆ, 23ರಂದು ಮಹಾನವಮಿ, 24ರಂದು ವಿಜಯದಶಮಿ ಪ್ರಯುಕ್ತ ಸಂಜೆ ರಜತ ಪಲ್ಲಕ್ಕಿ ಉತ್ಸವ ಇರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಜಿಲ್ಲೆಯ ವಿವಿಧ ಭಜನಾ ಪಾಳಿಗಳಿಂದ ಭಜನಾ ಕಾರ್ಯಕ್ರಮ ಇರುವುದು ಹಾಗೂ ಪ್ರತಿನಿತ್ಯ ಮಧ್ಯಾಹ್ನ ಪೂಜೆಯ ಬಳಿಕ ಸಂತರ್ಪಣ ಸೇವೆ ಜರಗುವುದು.

ದಿ . 26 ರಂದು ಚಂಡಿಕಾ ಹವನ ಸೇವೆಯು ನಡೆಯಲಿದೆ : ನವರಾತ್ರಿ ಪ್ರಯುಕ್ತ ನಡೆಯುವ ಚಂಡಿಕಾ ಹವನ ಸೇವೆಯು ತಾ. 26.10.2023 ಗುರುವಾರ ನಡೆಯಲಿರುವುದು. ಮಧ್ಯಾಹ್ನ 12 ಗಂಟೆಗೆ ಯಾಗದ ಪೂರ್ಣಹುತಿ, ಮಧ್ಯಾಹ್ನ ಪೂಜೆ, ದೇವಿಗೆ ಬಂದ ಹರಕೆಯ ಸೀರೆಗಳ ಏಲಂ, ಮಹಾಸಮಾರಾಧನ ಸೇವೆ ಇರುವುದು. ಸಂಜೆ ರಜತ ಪಲ್ಲಕ್ಕಿ ಉತ್ಸವ, ಭಜನಾ ಕಾರ್ಯಕ್ರಮ, ರಾತ್ರಿ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ಇರುವುದು. ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಪರವೂರ ಸಾವಿರಾರು ಭಜಕ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಸ್ರೂರಿನ ಶ್ರೀ ಮಹಾಲಸಾ ನಾರಾಯಣಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.