30 ವರ್ಷಗಳ ಬಳಿಕ ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಅರ್ಚಕರು

ವಾರಣಾಸಿ: ಜ್ಞಾನವಾಪಿ ಮಂದಿರದ ನೆಲಮಾಳಿಗೆಯಲ್ಲಿ ಸೀಲ್ ಮಾದುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರು ‘ವ್ಯಾಸರ ನೆಲಮಾಳಿಗೆ’ಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡರು. ಬುಧವಾರದಂದು ಜಿಲ್ಲಾ ನ್ಯಾಯಾಲಯವು ಸೀಲ್ ಮಾಡಲಾದ ಪ್ರದೇಶವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಮತ್ತು ಪೂಜಾ ವಿಧಿ ವಿಧಾನಗಳನ್ನು ಜಿಲ್ಲಾಡಳಿತದ ಸುಪರ್ದಿಯಲ್ಲಿ ನಡೆಸುವಂತೆ ಆದೇಶ ನೀಡಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಂದಿರದ ಸಮೀಪವಿರುವ ಪ್ರದೇಶವು ನಿನ್ನೆ […]

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 55 ಲಕ್ಷ ಉದ್ಯೋಗಾವಕಾಶ ಸೃಜನೆ; ಐದು ಇಂಟಿಗ್ರೇಟೆಡ್ ಅಕ್ವಾ ಪಾರ್ಕ್‌ ಸ್ಥಾಪನೆ

ನವದೆಹಲಿ: ಗುರುವಾರದಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೀನುಗಾರಿಕಾ ಕ್ಷೇತ್ರಕ್ಕೆ ನೀಡಲಾದ ಪ್ರೋತ್ಸಾಹದ ಬಗ್ಗೆ ಸದನಕ್ಕೆ ತಿಳಿಸಿದರು. “ಮೀನುಗಾರರಿಗೆ ಸಹಾಯ ಮಾಡುವ ಮಹತ್ವವನ್ನು ಅರಿತು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಇದು ಒಳನಾಡು ಮತ್ತು ಜಲಚರಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ. 2013-14 ರಿಂದ ಸಮುದ್ರಾಹಾರ ರಫ್ತು ಕೂಡ ದ್ವಿಗುಣಗೊಂಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅನುಷ್ಠಾನವನ್ನು ಪ್ರತಿ ಹೆಕ್ಟೇರ್‌ಗೆ 3 ರಿಂದ 5 ಟನ್‌ ಗಳವರೆಗೆ ಜಲಕೃಷಿ […]

2014 ರ ಮೊದಲಿನ ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರ ಮಂಡನೆ; ಆದಾಯ ತೆರಿಗೆ ಯಥಾಸ್ಥಿತಿ, ಆವಾಸ್ ಯೋಜನೆ-ಆಯುಷ್ಮಾನ್ ಭಾರತ್ ವಿಸ್ತರಣೆ

ನವದೆಹಲಿ: ಆರನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಪ್ರಸರಣವನ್ನು ಕಂಡಿದೆ. ಅತ್ಯದ್ಭುತ ಕೆಲಸದ ಆಧಾರದ ಮೇಲೆ, ನಮ್ಮ ಸರ್ಕಾರವು ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು. ಹಿಂದಿನ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವೆ 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. 2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ […]

ಜ್ಞಾನವಾಪಿ ಮಂದಿರ ಪರಿಸರದಲ್ಲಿ ಹಿಂದೂ ಪಕ್ಷಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ

ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರದಂದು ಹಿಂದೂ ಪಕ್ಷದವರಿಗೆ ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. “ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ ಪೂಜೆಯ ವಿಧಿ ವಿಧಾನಗಳನ್ನು […]

ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಸದನಕ್ಕಾಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸದನದಲ್ಲಿ ಸೆಂಗೋಲಿನ ಸಹಿತ ಭವ್ಯ ಸ್ವಾಗತ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣದ ಶತಮಾನಗಳ ಹಿಂದಿನ ಕನಸು ಈಗ ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ. ಸಂಸತ್ತಿನ ಸದನಕ್ಕೆ ಪಾರಂಪರಿಕ ಕುದುರೆಗಾಡಿಯಲ್ಲಿ ಆಗಮಿಸಿದ ಅವರನ್ನು ಸೆಂಗೋಲು ಮತ್ತು ಪಾರಂಪರಿಕ ವಾದ್ಯಗಳ ಮೂಲಕ ಸದನದೊಳಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ಅವರ ಆಗಮನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಬಜೆಟ್ ಅಧಿವೇಶನಕ್ಕೂ (Budget 2024) ಮುನ್ನಾದಿನ ಬುಧವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿ […]