ಇನ್ನು ಸೋಪು, ಶಾಂಪೂ, ಟೂತ್‌ಪೇಸ್ಟ್‌ಗೂ ವೆಜ್-ನಾನ್‌ವೆಜ್ ಗುರುತು ಕಡ್ಡಾಯ

ನವದೆಹಲಿ: ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ಸೌಂದರ್ಯವರ್ಧಕ ಮತ್ತು ಶೌಚಾಲಯ ಉತ್ಪನ್ನಗಳ ಪ್ಯಾಕೇಜಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಲೇಬಲಿಂಗ್ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಈ ಉತ್ಪನ್ನಗಳಲ್ಲೂ ಅವು ಸಸ್ಯಾಹಾರಿ ಅಥವಾ ಮಾಂಸಾಹಾರಿ ಎಂಬುದನ್ನು ಸೂಚಿಸುವ ಗುರುತು ಕಡ್ಡಾಯವಾಗಲಿದೆ. ಹೊಸ ನಿಯಮದಂತೆ, ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು ಚುಕ್ಕೆ, ಮಾಂಸಾಹಾರಿ ಉತ್ಪನ್ನಗಳಿಗೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ ಇರಬೇಕು. ಈ ಗುರುತನ್ನು ಉತ್ಪನ್ನದ ಪ್ಯಾಕೇಜ್‌ನ ಮುಖ್ಯ ಪ್ರದರ್ಶನ ಫಲಕದ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಸೋಪು, […]

ಪೊಲೀಸರೆಂದು ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವ ಆರೋಪಿ ಬಂಧನ

ನವದೆಹಲಿ: ದಕ್ಷಿಣ ದೆಹಲಿಯ ಪ್ರಸಿದ್ಧ ಕಲ್ಕಾಜಿ ಮಂದಿರದ ಸಮೀಪದ ಉದ್ಯಾನವನದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಪೊಲೀಸರೆಂದು ಪರಿಚಯಿಸಿಕೊಂಡು ಬಾಲಕಿ ಹಾಗೂ ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸೋಮವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ಸಂಜೆ ಸುಮಾರು 7 ಗಂಟೆಗೆ ಕಲ್ಕಾಜಿ ಮಂದಿರಕ್ಕೆ ತೆರಳಿದ್ದಳು. ದರ್ಶನ ಮುಗಿಸಿದ ಬಳಿಕ ಸುಮಾರು […]

ಅಂತಾರಾಷ್ಟ್ರೀಯ ಪ್ರಶಸ್ತಿಯ ಅಂತಿಮಪಟ್ಟಿಗೆ ಮಾಹೆಯ ಸಿಐಎಸ್‌ಡಿ; ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ ಯೋಜನೆಗೆ ಸಿಕ್ಕಿದ ಮನ್ನಣೆ.!

ಮಣಿಪಾಲ: 2026 -ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಘಟಕವಾದ ಸೆಂಟರ್‌ ಫಾರ್‌ ಇಂಟರ್‌ ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌ ಪ್ರಸ್ತುತಪಡಿಸಿದ ನವೀನ ಕಲಿಕಾ ಯೋಜನೆಯು ಲಂಡನ್‌ನ ಕ್ಯುಎಸ್‌ ರಿ-ಇಮ್ಯಾಜಿನ್‌ ಎಜುಕೇಶನ್‌ನ ಪ್ರತಿಷ್ಠಿತ ಪ್ರಶಸ್ತಿಯ ಅಂತಿಮಪಟ್ಟಿಗೆ ಆಯ್ಕೆಯಾಗಿದೆ. ಕ್ಯುಎಸ್‌ ರಿ-ಇಮ್ಯಾಜಿನ್‌ ಎವರ‍್ಡ್ಸ್‌2026 ಕ್ಕೆ 2,226 ಪ್ರವೇಶಗಳು ಬಂದಿದ್ದು, ಅಂತಿಮಪಟ್ಟಿಗೆ ಆಯ್ಕೆಯಾದ ಯೋಜನೆಗಳಲ್ಲಿ ಸಿಐಎಸ್‌ಡಿಯ ‘ಲಿವಿಂಗ್‌ ಕಲ್ಚರ್ಸ್ ಆಫ್‌ ತುಳುನಾಡು’ಕೂಡ ಸೇರಿರುವುದು ಗಮನರ‍್ಹವೆನಿಸಿದೆ. ವಿಶ್ವಾದ್ಯಂತವಿರುವ 1,634 ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಮತ್ತು […]

ರಾಮ ಮಂದಿರ ದೇಣಿಗೆ ಕಳವು: CCTVಯಲ್ಲಿ 105 ಕಳ್ಳತನದ ದೃಶ್ಯಾವಳಿಗಳು ಪತ್ತೆ!

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ದೇಣಿಗೆ ಹಾಗೂ ಬೆಲೆಬಾಳುವ ವಸ್ತುಗಳ ಕಳವು ಆರೋಪಕ್ಕೆ ಸಂಬಂಧಿಸಿದಂತೆ ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳಲ್ಲಿ 105 ಕಳವು ಘಟನೆಗಳು ಪತ್ತೆಯಾಗಿವೆ ಎಂದು ವಿಶೇಷ ತನಿಖಾ ತಂಡ (SIT) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸೋಮವಾರ ಪ್ರಕರಣದ ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್‌ಐಟಿ ಸಿದ್ಧಪಡಿಸಿರುವ ಸ್ಥಿತಿಗತಿ ವರದಿಯ ವಿವರಗಳನ್ನು ನ್ಯಾಯಪೀಠದ ಮುಂದಿಟ್ಟರು. ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರೊಳಗೆ ದೋಷಾರೋಪ ಪಟ್ಟಿ […]

ಸೆ.28 ರಿಂದ ಮೂರು ದಿನ ಬ್ಯಾಂಕ್ ಮುಷ್ಕರ: SBI ಗ್ರಾಹಕರಿಗೆ ಮಹತ್ವದ ಸೂಚನೆ

ನವದೆಹಲಿ: ಸೆಪ್ಟೆಂಬರ್ 28ರಿಂದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಸೆಪ್ಟೆಂಬರ್ 28, 29 ಹಾಗೂ 30ರಂದು ಬ್ಯಾಂಕ್ ಮುಷ್ಕರ ನಡೆಯಲಿದ್ದು, ಇದಕ್ಕೂ ಮುನ್ನ ಸೆಪ್ಟೆಂಬರ್ 26 ಮತ್ತು 27ರಂದು ವಾರಾಂತ್ಯ ರಜೆ ಇರುವುದರಿಂದ ಸತತ ಐದು ದಿನಗಳ ಕಾಲ ಶಾಖಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಶಾಖೆಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ […]