ಅತಿರೇಕವಾದ ಐಫೋನ್ 18 ಪ್ರೊ ಹುಚ್ಚು: ಪತ್ನಿಗಾಗಿ ಚಿನ್ನ ಮಾರಿ ಐಫೋನ್ ಖರೀದಿಸಿದ ಪತಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್

  ನವದೆಹಲಿ: ಐಫೋನ್  ನಿಮ್ಮ  ಬಳಿಯಿಲ್ಲದಿದ್ದರೆ ಜೀವನವೇ ವೇಸ್ಟ್, ಬೇರೆಲ್ಲಾ ಫೋನುಗಳು ಐ ಫೋನ್ ಮುಂದೆ ವೇಸ್ಟ್ ಎನ್ನುವ ಜನರ ಮನಸ್ಥಿತಿ ಇನ್ನಷ್ಟು ಅತಿರೇಕಕ್ಕೆ ಹೋಗುತ್ತಿದೆ. ಐ ಫೋನ್ ಗಾಗಿ ಏನು ಬೇಕಾದರೂ ಮಾಡ್ತೇವೆ ಎನ್ನುವವರು ಇದ್ದಾರೆ. ಇದೀಗ ಇಲ್ಲೊಬ್ಬ ಪತಿ, ಕಷ್ಟಕ್ಕೆ ಕೈಹಿಡಿಯುತ್ತಿದ್ದ ಚಿನ್ನವನ್ನೇ ಮಾರಿ ಐ ಪೋನ್ ಆಸೆಗೆ ಬಿದ್ದು ಪತ್ನಿಗಾಗಿ ಶೋಕಿಯ ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ ಹೌದು ಪತ್ನಿಗೆ ಐಫೋನ್ 18 ಪ್ರೊ ಉಡುಗೊರೆಯಾಗಿ ನೀಡಲು ಪತಿಯೊಬ್ಬರು ಚಿನ್ನವನ್ನೇ […]

ಗಮನಿಸಿ, ಮಕ್ಕಳ ಪಾಸ್‌ಪೋರ್ಟ್ ಅವಧಿ ಬದಲಾವಣೆ ಅರ್ಜಿ ಶುಲ್ಕ ಪರಿಷ್ಕರಣೆ – ಏಷ್ಟು ಏರಿಕೆ

ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ‘ಪಾಸ್‌ಪೋರ್ಟ್‌ಗಳ (ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಮಕ್ಕಳ ಪಾಸ್‌ಪೋರ್ಟ್(Passports) ಮಾನ್ಯತೆಯ ಅವಧಿ ಹಾಗೂ ಅರ್ಜಿ ಶುಲ್ಕದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. 5 ವರ್ಷದೊಳಗಿನ ಮಕ್ಕಳಿಗೆ(Child) ನೀಡಲಾಗುವ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್, ವಿತರಿಸಿದ ದಿನಾಂಕದಿಂದ 5 ವರ್ಷಗಳವರೆಗೆ ಅಥವಾ ಆ ಮಗುವಿಗೆ 18 ವರ್ಷ ತುಂಬುವವರೆಗೆ(ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಮಾತ್ರ ಮಾನ್ಯವಾಗಿರುತ್ತದೆ. ನಿಯಮ 8 (1)ರ ತಿದ್ದುಪಡಿಗಳ ಅನ್ವಯ, ಎಲ್ಲಾ ಬಗೆಯ ಅರ್ಜಿ ಶುಲ್ಕಗಳು […]

ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಗೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಕಡ್ಡಾಯ, ಕೇಂದ್ರದ ಹೊಸ ಪ್ರಸ್ತಾವನೆ

ನವದೆಹಲಿ: ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ. ಇದರ ಭಾಗವಾಗಿ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಸಂಬಂಧ ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಸೆಪ್ಟೆಂಬರ್ 8ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಕರಡು ನಿಯಮ ಜಾರಿಗೆ ಬಂದರೆ, ನೋಂದಾಯಿತ ವೈದ್ಯರ ಪ್ರಿಸ್ಕ್ರಿಪ್ಷನ್ ಆಧರಿಸಿ ಔಷಧ ಮಾರಾಟ ಮಾಡುವ ಪರವಾನಗಿ ಹೊಂದಿರುವ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸಿ ನಿರ್ವಹಿಸುವುದು ಕಡ್ಡಾಯವಾಗಲಿದೆ. ಔಷಧ […]

ಜನನ–ಮರಣ ನೋಂದಣಿ ತಡವಾದರೆ ಇನ್ನು ಕಠಿಣ ನಿಯಮ; ಅಕ್ಟೋಬರ್ 1ರಿಂದ ಜಾರಿ

ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ ಮಾಡಿಸುವ ಪ್ರಕ್ರಿಯೆ ಇನ್ನು ಮುಂದೆ ಮತ್ತಷ್ಟು ಕಠಿಣವಾಗಲಿದೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2026ರ ನೂತನ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಹೊಸ ನಿಯಮದ ಪ್ರಕಾರ, ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷ ಕಳೆದ ಬಳಿಕ, ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ […]

ಈ ಬೆಕ್ಕಣ್ಣ ಈಗ ಮುಂಬೈ ಮೆಟ್ರೋದ ‘ಅಧಿಕಾರಿ..! ಜನಗಳ ಪ್ರೀತಿಯಿಂದಲೇ ಉನ್ನತ ಹುದ್ದೆ ಗಿಟ್ಟಿಸಿಕೊಂಡ ಮುದ್ದು ಬೆಕ್ಕು!

ಮುಂಬೈ: ಮೆಟ್ರೋ ನಿಲ್ದಾಣ ಎಂದರೆ ಪ್ರಯಾಣಿಕರ ಓಡಾಟ, ಸಿಬ್ಬಂದಿಯ ಕರ್ತವ್ಯ ಹಾಗೂ ರೈಲುಗಳ ಸಂಚಾರ. ಆದರೆ, ಮುಂಬೈನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಇವೆಲ್ಲದರ ನಡುವೆ ಪ್ರತಿದಿನ ಕಾಣಿಸಿಕೊಳ್ಳುವ ಮುದ್ದು ಬೆಕ್ಕೊಂದು ಇದೀಗ ಭಾರಿ ಸುದ್ದಿಯಾಗಿದೆ! ನಿಲ್ದಾಣದ ಪ್ರವೇಶದ್ವಾರದ ಬಳಿ ಆರಾಮವಾಗಿ ಕುಳಿತುಕೊಳ್ಳುವ ಈ ಬೆಕ್ಕು ಪ್ರಯಾಣಿಕರಿಗೂ ಚಿರಪರಿಚಿತ. ಕೆಲವೊಮ್ಮೆ ಅಲ್ಲೇ ನಿದ್ರಿಸುತ್ತಾ, ಕೆಲವೊಮ್ಮೆ ಪ್ರಯಾಣಿಕರತ್ತ ನೋಡುತ್ತಾ ‘ಕರ್ತವ್ಯ’ ನಿರ್ವಹಿಸುವಂತೆ ಕಾಣಿಸಿಕೊಳ್ಳುತ್ತದೆ. ಈ ಬೆಕ್ಕಿನ ಫೋಟೋವನ್ನು ಸಂದೇಶ್ ಸಾಮಂತ್ ಎಂಬ ಪ್ರಯಾಣಿಕ ‘ಎಕ್ಸ್‌’ನಲ್ಲಿ ಹಂಚಿಕೊಂಡು, “ಸಂಬಳವಿಲ್ಲದೆ ಉಚಿತ ಸೇವೆ […]