ಹಫೀಜ್ ಸಯೀದ್ ನ ಆಪ್ತ ಹಂಝ್ಲಾ ಅದ್ನಾನ್ ಅಜ್ಞಾತ ಬಂದೂಕುಧಾರಿಗಳ ಗುಂಡಿಗೆ ಬಲಿ

ಕರಾಚಿ: ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಂಝ್ಲಾ ಅದ್ನಾನ್ ನನ್ನು ಪಾಕಿಸ್ತಾನದ ಕರಾಚಿಯಲ್ಲಿರುವ ಆತನ ನಿವಾಸದ ಬಳಿ ಅಜ್ಞಾತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಂತರ ಆತನನ್ನು ಪಾಕಿಸ್ತಾನದ ಸೇನೆಯು ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿದ್ದು, ಮಂಗಳವಾರ (ಡಿಸೆಂಬರ್ 5) ದಂದು ಆತ ನಿಧನನಾಗಿದ್ದಾನೆ ಎಂದು ವರದಿಯಾಗಿದೆ. ಅದ್ನಾನ್ ಅಹ್ಮದ್ ಅಲಿಯಾಸ್ ಹಂಝ್ಲಾ ಅದ್ನಾನ್ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ಗೆ ಅತ್ಯಂತ ಆಪ್ತನಾಗಿದ್ದ. ಡಿಸೆಂಬರ್ 2 ರ ರಾತ್ರಿ, ಅಜ್ಞಾತ ಬಂಧೂಕುದಾರಿಗಳು ದಾಳಿ ನಡೆಸಿದ್ದಾರೆ. ಹಂಝ್ಲಾ […]
ಸಮುದ್ರದೊಳಗಿನ ಈ ವಿಶೇಷ ಖನಿಜದಿಂದ ಭೂಗ್ರಹದ ಮೇಲೆ ಇಂಗಾಲದ ಪ್ರಮಾಣ ಇಳಿಕೆ? ಭೂಮಿಯನ್ನು ತಂಪಾಗಿಸುವ ಆ ಖನಿಜ ಯಾವುದು?

ನ್ಯೂಯಾರ್ಕ್: ಕೇಂಬ್ರಿಡ್ಜ್ ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಭೂವಿಜ್ಞಾನಿಗಳು “ಸ್ಮೆಕ್ಟೈಟ್” ಎಂದು ಕರೆಯಲ್ಪಡುವ ವಿಶೇಷ ರೂಪದ ಮಣ್ಣಿನ ಖನಿಜವನ್ನು ಗುರುತಿಸಿದ್ದಾರೆ. ಇದು ಲಕ್ಷಾಂತರ ವರ್ಷಗಳಿಂದ ಇಂಗಾಲವನ್ನು ಸೆರೆಹಿಡಿಯುವ ಮತ್ತು ಸಂಗ್ರಹಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಮತ್ತಿದು ನಮ್ಮ ಭೂಗ್ರಹವನ್ನು ತಂಪಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ತಳದ ಸಂಕೀರ್ಣ ಪದರಗಳಲ್ಲಿ ಕಂಡುಬರುವ, ಸ್ಮೆಕ್ಟೈಟ್‌ನ ಸಮರೂಪ ತರಹದ ರಚನೆಯು ಸಾವಯವ ಇಂಗಾಲವನ್ನು ಹಿಡಿದಿಡುವಲ್ಲಿ ಪ್ರವೀಣವಾಗಿದೆ. ಈ ಪ್ರಕ್ರಿಯೆಯು ಭೂತಟ್ಟೆಗಳ ಚಲನೆಯ ಉದಯದಿಂದಲೂ […]
ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ರಾಷ್ಟ್ರವ್ಯಾಪಿ CPR ತಂತ್ರ ಕಲಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯುವ ಜನತೆ ಸೇರಿದಂತೆ ವಯಸ್ಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಷ್ಟ್ರವ್ಯಾಪಿ CPR ತಂತ್ರವನ್ನು ಕಲಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಕಾರ್ಡಿಯೋಪಲ್ಮನರಿ ಪುನರುಜ್ಜೀವನವನ್ನು CPR ಎಂದೂ ಕರೆಯುತ್ತಾರೆ. ಇದು ವ್ಯಕ್ತಿಯ ಹೃದಯ ಬಡಿತ ಅಥವಾ ಉಸಿರಾಟ ನಿಂತಾಗ ಮಾಡುವ ತುರ್ತು ಜೀವ ಉಳಿಸುವ ವಿಧಾನವಾಗಿದೆ. CPR ದೇಹದ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕೀಕರಣವನ್ನು ನಿರ್ವಹಿಸಲು ಎದೆಯ ಸಂಕೋಚನ ಮತ್ತು ಕೃತಕ ಉಸಿರಾಟದ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಡಿಸೆಂಬರ್ […]
ಇಸ್ರೋ : ಚಂದ್ರನ ಕಕ್ಷೆಯಿಂದ ಭೂ ಕಕ್ಷೆಗೆ ಮರಳಿದ ಚಂದ್ರಯಾನ-3ರ ಪ್ರೊಪಲ್ಷನ್ ಮಾಡ್ಯೂಲ್

ನವದೆಹಲಿ: ಚಂದ್ರನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿದ್ದ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಕಕ್ಷೆಗೆ ಸ್ಥಳಾಂತರಿಸುವ ವಿಶಿಷ್ಟ ಪ್ರಯೋಗದಲ್ಲಿ ಯಶಸ್ವಿಯಾಗಿದೆ.ಚಂದ್ರಯಾನ-3 ಯೋಜನೆಯಲ್ಲಿನ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಚರಿತ್ರೆ ಸೃಷ್ಟಿಸಿದ್ದ ಇಸ್ರೋ, ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.ಚಂದ್ರನ ಸುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ ಯಶಸ್ವಿಯಾಗಿ ಭೂಮಿಯ ಕಕ್ಷೆಗೆ ಮರಳಿದೆ. ಮಾಡ್ಯೂಲ್ನಲ್ಲಿ ಹೆಚ್ಚುವರಿ ಇಂಧನ: ಚಂದ್ರಯಾನ-3ರ ಎಲ್ಲ ಯೋಜಿತ ಉದ್ದೇಶಗಳು ಸಂಪೂರ್ಣವಾಗಿ ಯಶಸ್ಸು […]
2015ರ ಬಳಿಕ ಭೀಕರ ಮಳೆ ಕಂಡ ತಮಿಳುನಾಡು, ವಿಮಾನ ಸೇವೆ ಪುನಾರಂಭ : ಇಳಿದ ಮಿಚೌಂಗ್ ಅಬ್ಬರ

ಚೆನ್ನೈ (ತಮಿಳುನಾಡು): ಕೆಲ ನದಿಗಳು ಉಕ್ಕಿ ಹರಿಯುತ್ತಿದ್ದು, ವಿಮಾನ ಸಂಚಾರ ಪುನಾರಂಭವಾಗಿದೆ. 2015 ರ ಬಳಿಕ ದೊಡ್ಡ ಮಳೆಯನ್ನು ರಾಜ್ಯ ಕಂಡಿದೆ ಎಂದು ಸರ್ಕಾರ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಮಿಚೌಂಗ್ ಚಂಡಮಾರುತ ಅಬ್ಬರಿಸಿ ಚೆನ್ನೈನ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಸಿ ಇದೀಗ ಶಾಂತವಾಗಿದೆ. ತಮಿಳುನಾಡಿನಲ್ಲಿ ಅಬ್ಬರಿಸಿದ ಮಿಚೌಂಗ್ ಚಂಡಮಾರುತದ ಅಬ್ಬರ ಇಳಿದಿದೆ. ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭಿಸಲಾಗಿದೆ. 2015 ರ ಬಳಿಕ ದೊಡ್ಡ ಮಳೆ: ರಾಜ್ಯದಲ್ಲಿ ಈಗ ಬಿದ್ದಿರುವ ಮಳೆ 2015 ರ […]