3 ವರ್ಷದಲ್ಲಿ 400 ಸಿಂಹಗಳ ಮರಣ : 5 ವರ್ಷಗಳಲ್ಲಿ ಹುಲಿ ದಾಳಿಗೆ 293, ಆನೆ ದಾಳಿಗೆ 2,657 ಜನ ಸಾವು

ನವದೆಹಲಿ: ಕಳೆದ ಐದು ವರ್ಷದಲ್ಲಿ (2018-2022) ಹುಲಿ ದಾಳಿಗೆ 293 ಮಂದಿ ಬಲಿಯಾಗಿದ್ದು, 2018-19 ಮತ್ತು 2022-23ರ ಅವಧಿಯಲ್ಲಿ 2,657 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರೆದಿದ್ದು, ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ […]

2 ಕಾರು 13 ದ್ವಿಚಕ್ರವಾಹನಗಳು ಭಸ್ಮ : ಅಪಾರ್ಟ್​​​ಮೆಂಟ್​​​ನಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ರಾಜ್ ನಗರ ಭಾಗ-II ಪ್ರದೇಶದ ವೈಷ್ಣವಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎರಡು ಕಾರುಗಳು ಮತ್ತು 13 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ, ಈ ಅಗ್ನಿ ಅವಘಡದಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.ಅಪಾರ್ಟ್‌ಮೆಂಟ್‌ವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 13 ದ್ವಿಚಕ್ರ ವಾಹನಗಳು, 2 ಕಾರುಗಳು ಸುಟ್ಟು ಕರಕಲಾಗಿವೆ. 5 […]

ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ : ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ

ನವದೆಹಲಿ: ಸಮಾರಂಭದಲ್ಲಿ ಭಾಗಿಯಾಗುವಂತೆ ಸುಮಾರು 7000 ಗಣ್ಯರಿಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಿದೆ.ಅಯೋಧ್ಯಾ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವು 2024 ರ ಜನವರಿ 22 ರಂದು ಅತ್ಯಂತ ಅದ್ದೂರಿಯಾಗಿ ನಡೆಯಲಿದೆ.ಮುಂದಿನ ವರ್ಷದ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗಲು 7 ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ರಾಮ ಮಂದಿರ ಟ್ರಸ್ಟ್ 3,000 ವಿಐಪಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರಿಗೆ ಆಹ್ವಾನ […]

ಸಶಸ್ತ್ರ ಪಡೆಗಳ ಯೋಧರ ಸೇವೆ, ಶೌರ್ಯ, ತ್ಯಾಗಕ್ಕೆ ಗೌರವಾರ್ಪಣೆ : ಇಂದು ಭಾರತದ ಧ್ವಜ ದಿನ

ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಯೋಧರ ತ್ಯಾಗ, ಶೌರ್ಯ ಹಾಗೂ ಸಮರ್ಪಣೆ ಗೌರವಿಸುವ ಹಾಗೂ ವೀರ ಯೋಧರ ತ್ಯಾಗದ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್​ 7 ರಂದು ಅಂದರೆ ಇಂದು ಭಾರತದ ಧ್ವಜ ದಿನವನ್ನು ಆಚರಿಸಲಾಗುತ್ತದೆ.ಈ ದಿನವನ್ನು ಸಶಸ್ತ್ರ ಪಡೆಗಳ ಧ್ವಜ ದಿನ ಎಂದೂ ಆಚರಿಸಲ್ಪಡುವ ಈ ದಿನ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಜೊತೆಗೆ ಮೂರೂ ಸೇನೆಗಳನ್ನು ಪ್ರತಿನಿಧಿಸುವ ಧ್ವಜ, ಬ್ಯಾಡ್ಜ್​, ಸ್ಟಿಕ್ಕರ್​ ಹಾಗೂ ಇತರ ವಸ್ತುಗಳ ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.ಈ ದಿನ […]

ಹರಿಯಾಣ ರಾಜ್ಯಪಾಲರಿಂದ ಗೀತಾ ಮಹೋತ್ಸವ ಉದ್ಘಾಟನೆ : ಕುರುಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗೀತಾ ಜಯಂತಿ 2023

ಕುರುಕ್ಷೇತ್ರ (ಹರಿಯಾಣ): ಕರಕುಶಲ ಮತ್ತು ಸಾರಸ್ ಮೇಳದಲ್ಲಿ 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತಾರೆ. ಕ್ರಾಫ್ಟ್ಸ್ ಮತ್ತು ಸಾರಸ್ ಮೇಳವು ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಜನರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ವರ್ಷ ಬ್ರಹ್ಮ ಸರೋವರ ದಡದಲ್ಲಿ 600ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳನ್ನು ಸ್ಥಾಪಿಸಲಾಗುವುದು. 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಮೇಳಕ್ಕೆ ಆಗಮಿಸಿ ತಮ್ಮ ಕಲೆಗಾರಿಕೆ ಪ್ರದರ್ಶಿಸಲಿದ್ದಾರೆ. 2023ರ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಅಂತಾರಾಷ್ಟ್ರೀಯ ಗೀತಾ […]