ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿಧಾನಸಭೆಯಲ್ಲಿ 24 ಸ್ಥಾನ ಮೀಸಲು: ಪಿಒಕೆ ನಮ್ಮದು ಎಂದು ಗೃಹ ಸಚಿವ ಅಮಿತ್ ಶಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ “ಪಿಒಕೆ ನಮ್ಮದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಂಸತ್ತಿನಲ್ಲಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಅನ್ನು ಮಂಡಿಸಿದ ಶಾ, ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು ಆದರೆ ಈಗ ಅದು 43ಕ್ಕೇರಿದೆ ಹಾಗೂ ಕಾಶ್ಮೀರ 46 ಸ್ಥಾನಗಳನ್ನು ಹೊಂದಿದ್ದು, ಈಗ ಅದು 47 ಸ್ಥಾನಗಳನ್ನು ಹೊಂದಿದೆ ಎಂದು […]
ಅಂಬೇಡ್ಕರ್ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ; ಮಹಾಪರಿನಿರ್ವಾಣ ದಿನ
ನವದೆಹಲಿ : ಶೋಷಿತ ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪಿಎಂ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಸ್ಮರಣಾರ್ಥ ಇಂದು ದೇಶದಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ತಿನ ಸಂಕೀರ್ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ ನಿಮಿತ್ತ ಶ್ರದ್ಧಾಂಜಲಿ […]
ಹಫೀಜ್ ಸಯೀದ್ ನ ಆಪ್ತ ಹಂಝ್ಲಾ ಅದ್ನಾನ್ ಅಜ್ಞಾತ ಬಂದೂಕುಧಾರಿಗಳ ಗುಂಡಿಗೆ ಬಲಿ
ಕರಾಚಿ: ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಂಝ್ಲಾ ಅದ್ನಾನ್ ನನ್ನು ಪಾಕಿಸ್ತಾನದ ಕರಾಚಿಯಲ್ಲಿರುವ ಆತನ ನಿವಾಸದ ಬಳಿ ಅಜ್ಞಾತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಂತರ ಆತನನ್ನು ಪಾಕಿಸ್ತಾನದ ಸೇನೆಯು ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿದ್ದು, ಮಂಗಳವಾರ (ಡಿಸೆಂಬರ್ 5) ದಂದು ಆತ ನಿಧನನಾಗಿದ್ದಾನೆ ಎಂದು ವರದಿಯಾಗಿದೆ. ಅದ್ನಾನ್ ಅಹ್ಮದ್ ಅಲಿಯಾಸ್ ಹಂಝ್ಲಾ ಅದ್ನಾನ್ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್‌ಗೆ ಅತ್ಯಂತ ಆಪ್ತನಾಗಿದ್ದ. ಡಿಸೆಂಬರ್ 2 ರ ರಾತ್ರಿ, ಅಜ್ಞಾತ ಬಂಧೂಕುದಾರಿಗಳು ದಾಳಿ ನಡೆಸಿದ್ದಾರೆ. ಹಂಝ್ಲಾ […]
ಸಮುದ್ರದೊಳಗಿನ ಈ ವಿಶೇಷ ಖನಿಜದಿಂದ ಭೂಗ್ರಹದ ಮೇಲೆ ಇಂಗಾಲದ ಪ್ರಮಾಣ ಇಳಿಕೆ? ಭೂಮಿಯನ್ನು ತಂಪಾಗಿಸುವ ಆ ಖನಿಜ ಯಾವುದು?
ನ್ಯೂಯಾರ್ಕ್: ಕೇಂಬ್ರಿಡ್ಜ್ ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಭೂವಿಜ್ಞಾನಿಗಳು “ಸ್ಮೆಕ್ಟೈಟ್” ಎಂದು ಕರೆಯಲ್ಪಡುವ ವಿಶೇಷ ರೂಪದ ಮಣ್ಣಿನ ಖನಿಜವನ್ನು ಗುರುತಿಸಿದ್ದಾರೆ. ಇದು ಲಕ್ಷಾಂತರ ವರ್ಷಗಳಿಂದ ಇಂಗಾಲವನ್ನು ಸೆರೆಹಿಡಿಯುವ ಮತ್ತು ಸಂಗ್ರಹಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಮತ್ತಿದು ನಮ್ಮ ಭೂಗ್ರಹವನ್ನು ತಂಪಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ತಳದ ಸಂಕೀರ್ಣ ಪದರಗಳಲ್ಲಿ ಕಂಡುಬರುವ, ಸ್ಮೆಕ್ಟೈಟ್‌ನ ಸಮರೂಪ ತರಹದ ರಚನೆಯು ಸಾವಯವ ಇಂಗಾಲವನ್ನು ಹಿಡಿದಿಡುವಲ್ಲಿ ಪ್ರವೀಣವಾಗಿದೆ. ಈ ಪ್ರಕ್ರಿಯೆಯು ಭೂತಟ್ಟೆಗಳ ಚಲನೆಯ ಉದಯದಿಂದಲೂ […]
ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ರಾಷ್ಟ್ರವ್ಯಾಪಿ CPR ತಂತ್ರ ಕಲಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ
ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯುವ ಜನತೆ ಸೇರಿದಂತೆ ವಯಸ್ಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಷ್ಟ್ರವ್ಯಾಪಿ CPR ತಂತ್ರವನ್ನು ಕಲಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಕಾರ್ಡಿಯೋಪಲ್ಮನರಿ ಪುನರುಜ್ಜೀವನವನ್ನು CPR ಎಂದೂ ಕರೆಯುತ್ತಾರೆ. ಇದು ವ್ಯಕ್ತಿಯ ಹೃದಯ ಬಡಿತ ಅಥವಾ ಉಸಿರಾಟ ನಿಂತಾಗ ಮಾಡುವ ತುರ್ತು ಜೀವ ಉಳಿಸುವ ವಿಧಾನವಾಗಿದೆ. CPR ದೇಹದ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕೀಕರಣವನ್ನು ನಿರ್ವಹಿಸಲು ಎದೆಯ ಸಂಕೋಚನ ಮತ್ತು ಕೃತಕ ಉಸಿರಾಟದ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಡಿಸೆಂಬರ್ […]