ರೆಪೊ ದರದಲ್ಲಿ ಯಥಾಸ್ಥಿತಿ, ಜಿಡಿಪಿ ಬೆಳವಣಿಗೆ ಶೇ 7, ಹಣದುಬ್ಬರ ಶೇ 5.4 ಹೆಚ್ಚಳ : ಆರ್‌ಬಿಐನಿಂದ ಹಣಕಾಸು ನೀತಿ ಪ್ರಕಟ
ನವದೆಹಲಿ: ಮೂರು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ನಿಂದ(ಆರ್‌ಬಿಐ) ನಡೆಯುತ್ತಿರುವ ಸುದೀರ್ಘ ಹಣಕಾಸು ನೀತಿ ಸಮಿತಿ ಸಭೆ ಇಂದು (ಶುಕ್ರವಾರ) ಕೊನೆಗೊಂಡಿದೆ. ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದಕೊಳ್ಳಲಾಗಿದೆ. ರೆಪೊ ದರ ಶೇ 6.5 ಇದೆ. ಜಿಡಿಪಿ ಬೆಳವಣಿಗೆ ಶೇ 7ರಷ್ಟು ಆಗಲಿದೆ ಅಂದಾಜಿಸಿದ್ದಾರೆ. ಹಣದುಬ್ಬರ ಶೇ 5.4ರಷ್ಟಿದೆ ಎಂದು ಆರ್‌ಬಿಐ ಹೇಳಿದೆ. ಬಡ್ಡಿದರಗಳು ಹೆಚ್ಚಾಗುತ್ತವೆಯೋ ಅಥವಾ ಕಡಿಮೆಯಾಗುತ್ತವೆಯೋ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದೆ.ಭಾರತೀಯ ರಿಸರ್ವ್ […]
ಆರ್‌ಬಿಐ ರೆಪೋದರ ಶೇಕಡಾ 6.5: ಜಿಡಿಪಿ ಶೇಕಡಾ 7ಕ್ಕೆ ಏರಿಕೆ, ಹಣದುಬ್ಬರ ಶೇಕಡಾ 5.4ರ ಯಥಾಸ್ಥಿತಿ
ನವದೆಹಲಿ: ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಶುಕ್ರವಾರ ಸರ್ವಾನುಮತದಿಂದ ರೆಪೊ ದರವನ್ನು ಶೇಕಡಾ 6.5 ರ ಯಥಾಸ್ಥಿಯಲ್ಲಿ ಇರಿಸಲು ನಿರ್ಧರಿಸಿದೆ. ಕೇಂದ್ರ ಬ್ಯಾಂಕ್ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿರಿಸಿರುವುದು ಇದು ಸತತ ಐದನೇ ಬಾರಿಯಾಗಿದೆ. ಆರ್‌ಬಿಐ ಆರ್ಥಿಕ ವರ್ಷ 24 ಜಿಡಿಪಿ ಅನುಮಾನವನ್ನು ಶೇಕಡಾ 6.5 ರಿಂದ ಶೇಕಡಾ 7 ಕ್ಕೆ ಏರಿಸಿದೆ. 2023-24 ಕ್ಕೆ ಹಣದುಬ್ಬರ ಪ್ರಕ್ಷೇಪಣವನ್ನು 5.4 ಶೇಕಡಾದಲ್ಲಿ ಬದಲಾಯಿಸದೆ ಇರಿಸಿದೆ. ಆರು ಸದಸ್ಯರಲ್ಲಿ ಐವರು ಪರವಾಗಿ ಮತ ಚಲಾಯಿಸುವುದರೊಂದಿಗೆ, ಆರ್‌ಬಿಐ ಸಮಿತಿಯು “ವಸತಿ ಹಿಂತೆಗೆದುಕೊಳ್ಳುವಿಕೆ” […]
ನಟ ಜೂನಿಯರ್ ಮೆಹಮೂದ್ ಹೊಟ್ಟೆಯ ಕ್ಯಾನ್ಸರ್ನಿಂದ ನಿಧನ
ಮುಂಬೈ (ಮಹಾರಾಷ್ಟ್ರ): ಹೊಟ್ಟೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಜೂನಿಯರ್ ಮೆಹಮೂದ್ ಅವರಿಗೆ 67 ವರ್ಷ ವಯಸ್ಸಾಗಿತ್ತು. ಹೊಟ್ಟೆಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದಾಗ ಅವರು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಜೂನಿಯರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ನಟ ನಯೀಮ್ ಸಯ್ಯದ್ ನಿನ್ನೆ (ಗುರುವಾರ) ರಾತ್ರಿ 2 ಗಂಟೆಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹೊಟ್ಟೆಯ ಕ್ಯಾನ್ಸರ್ನಿಂದ ಜೂನಿಯರ್ ಮೆಹಮೂದ್ ಎಂದೇ ಖ್ಯಾತಿ ಗಳಿಸಿದ್ದ ನಟ ನಯೀಮ್ ಸಯ್ಯದ್ (67) […]
3 ವರ್ಷದಲ್ಲಿ 400 ಸಿಂಹಗಳ ಮರಣ : 5 ವರ್ಷಗಳಲ್ಲಿ ಹುಲಿ ದಾಳಿಗೆ 293, ಆನೆ ದಾಳಿಗೆ 2,657 ಜನ ಸಾವು
ನವದೆಹಲಿ: ಕಳೆದ ಐದು ವರ್ಷದಲ್ಲಿ (2018-2022) ಹುಲಿ ದಾಳಿಗೆ 293 ಮಂದಿ ಬಲಿಯಾಗಿದ್ದು, 2018-19 ಮತ್ತು 2022-23ರ ಅವಧಿಯಲ್ಲಿ 2,657 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರೆದಿದ್ದು, ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ […]
2 ಕಾರು 13 ದ್ವಿಚಕ್ರವಾಹನಗಳು ಭಸ್ಮ : ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ
ನವದೆಹಲಿ: ದೆಹಲಿಯ ರಾಜ್ ನಗರ ಭಾಗ-II ಪ್ರದೇಶದ ವೈಷ್ಣವಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎರಡು ಕಾರುಗಳು ಮತ್ತು 13 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ, ಈ ಅಗ್ನಿ ಅವಘಡದಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.ಅಪಾರ್ಟ್‌ಮೆಂಟ್‌ವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 13 ದ್ವಿಚಕ್ರ ವಾಹನಗಳು, 2 ಕಾರುಗಳು ಸುಟ್ಟು ಕರಕಲಾಗಿವೆ. 5 […]