ಗೂಗಲ್ ಘೋಷಣೆ : ‘Google Play Movies’ ಆಯಪ್ ಜ.17ರಿಂದ ಸ್ಥಗಿತ

ನವದೆಹಲಿ :ಗೂಗಲ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಗೂಗಲ್ ಟಿವಿ ಅಪ್ಲಿಕೇಶನ್ಗೆ ತಂದಿದೆ. “ನೀವು ಹೊಸ ಚಲನಚಿತ್ರಗಳನ್ನು ಹೇಗೆ ಖರೀದಿಸುತ್ತೀರಿ ಅಥವಾ ಗೂಗಲ್ ಮೂಲಕ ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಹೇಗೆ ವೀಕ್ಷಿಸುತ್ತೀರಿ ಎಂಬುದನ್ನು ಸರಳೀಕರಿಸಲು ನಾವು ಕೆಲ ಬದಲಾವಣೆ ಮಾಡುತ್ತಿದ್ದೇವೆ” ಎಂದು ಕಂಪನಿ ಹೇಳಿದೆ. ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿ (Google Play Movies & TV) ಆಯಪ್ ಅನ್ನು ಗೂಗಲ್ ಸ್ಥಗಿತಗೊಳಿಸಲಿದೆ. ಹಾಗಾಗಿ ಇನ್ನು ಮುಂದೆ ಗೂಗಲ್ ಪ್ಲೇ […]
ಹಮಾಸ್ ನ ಭದ್ರಕೋಟೆಗಳನ್ನು ಸುತ್ತುವರಿದ ಇಸ್ರೇಲ್: ಕದನ ಅಂತಿಮ ಹಂತಕ್ಕೆ; ತುರ್ತು ಸಭೆ ಕರೆದ ವಿಶ್ವಸಂಸ್ಥೆ

ಟೆಲ್ ಅವೀವ್: ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಉತ್ತರ ಗಾಜಾದಲ್ಲಿ ಪ್ಯಾಲೆಸ್ತೀನ್ ಬೆಂಬಲಿತ ಹಮಾಸ್ ಉಗ್ರಗಾಮಿಗಳನ್ನು ಮಟ್ಟ ಹಾಕುವ ಕಾರ್ಯ ತನ್ನ ಅಂತಿಮ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ. ಜಬಲಿಯಾ ಮತ್ತು ಶೆಜೈಯಾ ಬೆಟಾಲಿಯನ್ ನ ಹಮಾಸ್ ಸದಸ್ಯರು ಶರಣಾಗುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. “ನಾವು ಜಬಾಲಿಯಾ ಮತ್ತು ಶೆಜೈಯಾದಲ್ಲಿನ ಹಮಾಸ್‌ನ ಅಂತಿಮ ಭದ್ರಕೋಟೆಗಳನ್ನು ಸುತ್ತುವರೆದಿದ್ದೇವೆ, ಅಜೇಯವೆಂದು ಪರಿಗಣಿಸಲ್ಪಟ್ಟ ಬೆಟಾಲಿಯನ್‌ಗಳು, ನಮ್ಮೊಂದಿಗೆ ಹೋರಾಡಲು ವರ್ಷಗಳ ಕಾಲದಿಂದ ಸಿದ್ಧತೆ ನಡೆಸಿವೆ, ಈಗ ಅವು ಕಿತ್ತುಹಾಕಲ್ಪಡುವ ಅಂಚಿನಲ್ಲಿದೆ,” ಎಂದು ಗ್ಯಾಲಂಟ್ […]
ಕುತೂಹಲಕ್ಕೆ ತೆರೆ ಎಳೆದ ಭಾಜಪ: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆ

ಭೋಪಾಲ್: ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷವು ಘೋಷಿಸಿದ್ದು, ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದಿದೆ. ಉಜ್ಜಯಿನಿಯಿಂದ ಮೂರು ಬಾರಿ ಶಾಸಕರಾಗಿದ್ದ 58 ವರ್ಷದ ಯಾದವ್ ಅವರು ಶಿವರಾಜ್ ಸಿಂಗ್ ಚೌಹಾಣ್ ಅವರ ಸಚಿವ ಸಂಪುಟದ ಭಾಗವಾಗಿದ್ದರು. ಜಗದೀಶ್ ದೇವದಾ ಮತ್ತು ರಾಜೇಂದ್ರ ಶುಕ್ಲಾ ಉಪಮುಖ್ಯಮಂತ್ರಿಗಳಾಗಿ ಹಾಗೂ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. “ನಾನು ಪಕ್ಷದ ಸಣ್ಣ ಕಾರ್ಯಕರ್ತ, ನಿಮ್ಮೆಲ್ಲರಿಗೂ, ರಾಜ್ಯ ನಾಯಕತ್ವ ಮತ್ತು […]
ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಶೇಕಡ 90ರಷ್ಟು ಜನ : 7 ಸಾವಿರ ಹಮಾಸ್ ಉಗ್ರರ ಹತ್ಯೆ

ಖಾನ್ ಯೂನಿಸ್ (ಗಾಜಾ): ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಿಂದ ಈಜಿಪ್ಟ್ ಗಡಿ ನಗರವಾದ ರಫಾಗೆ ಹೋಗುವ ರಸ್ತೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಬಾಂಬ್ ದಾಳಿ ನಡೆಸಿದೆ ಎಂದು ಹಮಾಸ್ ಉಗ್ರಗಾಮಿ ಗುಂಪು ಹೇಳಿದೆ.ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ನಿರ್ಬಂಧಿಸಿದ ನಂತರ ಇಸ್ರೇಲಿ ಪಡೆಗಳು ಗಾಜಾದ ಮೇಲೆ ದಾಳಿಯನ್ನು ತೀವ್ರಗೊಳಿಸಿದವು. ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಇಸ್ರೇಲ್ ದಕ್ಷಿಣ ಗಾಜಾದ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ. ಹಮಾಸ್ ನಿರ್ಮೂಲನೆಯೇ ನಮ್ಮ ಗುರಿ: […]
18 ಶೇಖರಣಾ ಘಟಕಗಳು ಬೆಂಕಿಗಾಹುತಿ: ತೈಲ ಸಂಸ್ಕರಣ ಸ್ಥಳದಲ್ಲಿ ಭಾರಿ ಸ್ಫೋಟ

ಟೆಹ್ರಾನ್(ಇರಾನ್): ಪೂರ್ವ ಇರಾನ್‌ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.ಈಗ ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟದಿಂದಾಗಿ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಸ್ಥಳದಿಂದ ದೂರ ಸರಿದಿವೆ.ಇರಾನ್‌ನ ತೈಲ ಸಂಸ್ಕರಣ ಘಟಕದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಸ್ಫೋಟದ ತೀವ್ರತೆ ಹೆಚ್ಚಾಗ್ತಿದ್ದು, ರಕ್ಷಣಾ ತಂಡಗಳು ಸ್ಥಳದಿಂದ ಹೊರಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಇರಾನ್ ಸ್ಥಾವರಗಳಲ್ಲಿ ಸ್ಫೋಟಗಳು ಮತ್ತು […]