ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಉದ್ಘಾಟನೆಯ ಆಹ್ವಾನಕ್ಕೆ ಪ್ರಧಾನಿ ಮೋದಿ ಅಸ್ತು

ನವದೆಹಲಿ: ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ತಿಳಿಸಿದೆ. ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯ ನಿವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಫೆಬ್ರವರಿ 14 ರಂದು ಮಂದಿರದ ಉದ್ಘಾಟನೆಗೆ ಆಹ್ವಾನವನ್ನು ನೀಡಿದರು ಎಂದು ಸ್ವಾಮಿನಾರಾಯಣ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರಬ್ ದೇಶದಲ್ಲಿ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪಿಎಂ […]
8 ಮಾಜಿ ಭಾರತೀಯ ನೌಕಾಪಡೆಯ ಸಿಬಂದಿಗಳ ಮರಣದಂಡನೆಗೆ ತಡೆ ನೀಡಿದ ಕತಾರ್: ಭಾರತದ ರಾಜತಾಂತ್ರಿಕ ಪ್ರಯತ್ನಕ್ಕೆ ಮೊದಲ ಗೆಲುವು

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳ ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಲಾಗಿದೆ. ಇದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಂದ ಗೆಲುವಾಗಿದೆ. COP28 ಶೃಂಗಸಭೆಯ ಬದಿಯಲ್ಲಿ ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನೂ ಬಹಿರಂಗವಾಗದ ಆರೋಪಗಳಿಗಾಗಿ ಮರಣದಂಡನೆಗೊಳಗಾಗಿರುವರು ಕಡಿತಗೊಂಡ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಸರ್ಕಾರ ತಿಳಿಸಿದೆ. ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು […]
ಅಯೋಧ್ಯೆ: ರಾಮ ಮಂದಿರಕ್ಕಾಗಿ 600 ಕೆ.ಜಿ ತೂಕದ ಬೃಹತ್ ಘಂಟೆ

ಲಖನೌ: ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಡಿಸೆಂಬರ್ 30ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲ್ವೆ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ.ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ಅದಕ್ಕಾಗಿ, ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅಯೋಧ್ಯೆ ನಗರದಲ್ಲಿ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ನಡುವೆ, ರಾಮ ದೇವಾಲಯದಲ್ಲಿ ಅಳವಡಿಸಲು ತಯಾರಿಸಿರುವ 600 ಕೆ.ಜಿ ತೂಕದ ಬೃಹತ್ ಘಂಟೆ ಎಲ್ಲರ ಗಮನ […]
ಭೂಮಿ ಖರೀದಿ ಪ್ರಕರಣ: ಆರೋಪ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಹೆಸರು ಉಲ್ಲೇಖಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ವು ಇದೇ ಮೊದಲ ಬಾರಿ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಉಲ್ಲೇಖಿಸಿದೆ. 2006ರಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್ ಪಹ್ವಾ ಅವರಿಂದ ಹರಿಯಾಣದ ಫರಿದಾಬಾದ್‌ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿ, ಅದೇ ಭೂಮಿಯನ್ನು ಫೆಬ್ರವರಿ, 2010 ರಲ್ಲಿ ಅವರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ನಿರ್ದೇಶನಾಲಯವು ಪ್ರಿಯಾಂಕಾ ಗಾಂಧಿಯ ಹೆಸರನ್ನು ಉಲ್ಲೇಖಿಸಿದೆ. ತನಿಖಾ ಸಂಸ್ಥೆಯ […]
ಕ್ರಿಕೆಟಿಗನಂತೆ ಬಿಂಬಿಸಿಕೊಂಡು ಭಾರತದ ಸ್ಪೋಟಕ ಆಟಗಾರ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ ಯುವಕ!!

ನವದೆಹಲಿ: 25 ರ ಹರೆಯದ, ಪ್ರಸ್ತುತ ಓರ್ವ ವಂಚಕ ಮತ್ತು ಹಿಂದೆ ಹರಿಯಾಣದ U-19 ಕ್ರಿಕೆಟಿಗ ಮೃಣಾಂಕ್ ಸಿಂಗ್, ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ್ದಾನೆ. ಪ್ರತಿಷ್ಠಿತ ಬ್ರಾಂಡ್‌ಗಳು ಮತ್ತು ಜನರನ್ನು ವಂಚಿಸಲು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವ ಈತ ಹಲವರಿಗೆ ಇದೇ ರೀತಿ ಟೋಪಿ ಹಾಕಿದ್ದಾನೆ. ಐಷಾರಾಮಿ ಜೀವನಕ್ಕಾಗಿ ತಾನು ಪ್ರಸಿದ್ದ ವ್ಯಕ್ತಿ ಎಂಬಂತೆ ಬಿಂಬಿಸುತ್ತಿದ್ದ ಈತ 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್‌ಗಾಗಿ ಆಡಿದ IPL ಕ್ರಿಕೆಟಿಗನಂತೆ […]