ಜಮ್ಮು-ಕಾಶ್ಮೀರ 370 ನೇ ವಿಧಿ ರದ್ದತಿಗೆ ಸುಪ್ರೀಂ ಮೊಹರು: 370 ನೇ ವಿಧಿ ತಾತ್ಕಾಲಿಕ ನಿಬಂಧನೆ; ಶೀಘ್ರವೆ ಚುನಾವಣೆ ನಡೆಸಿ ಎಂದ ಮುಖ್ಯ ನ್ಯಾಯಮೂರ್ತಿಗಳು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಲಾಗಿದ್ದು, ಇಂದು ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ. 370 ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದೆ. ರಾಷ್ಟ್ರಪತಿ ಆಳ್ವಿಕೆಯಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಸೋಮವಾರ ತಮ್ಮ ತೀರ್ಪನ್ನು ಓದುವಾಗ ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ […]

ಕಾಂಗ್ರೆಸ್ ಸಂಸದರ ಅಕ್ರಮ ಹಣ ಪ್ರಕರಣ: ಮುಗಿದ ಎಣಿಕೆ ಕಾರ್ಯ; 353 ಕೋಟಿ ರೂ ಮೊತ್ತದ ಅಕ್ರಮ ಹಣ ಪತ್ತೆ

ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಪತ್ತೆಯಾದ ಅಪಾರ ಹಣದ ಮೊತ್ತವು ಭಾನುವಾರದಂದು 353 ಕೋಟಿ ರೂ ತಲುಪಿದ್ದು, ಅಂತಿಮವಾಗಿ ಎಣಿಕೆ ಕೊನೆಗೊಂಡಿದೆ. ಬುಧವಾರ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಂಸದರ ಮನೆಯ ಕಪಾಟಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು. ಕಳೆದ ಕೆಳವು ದಿನಗಳಿಂದ ನೋಟುಗಳ ಎಣಿಕೆ ಕಾರ್ಯವು ನಡೆದಿತ್ತು. ಈ ಮಧ್ಯೆ ಎಸ್‌ಬಿಐ ಶಾಖೆಯ ಕಾರ್ಯಾಚರಣೆ ಹಾಗೂ ನೋಟು ಎಣಿಸುವ ಯಂತ್ರಗಳು ಕೆಟ್ಟು ನಿಂತದ್ದರಿಂದ ಹಣ ಎಇಸುವ ಕಾರ್ಯಕ್ಕೆ […]

ನ್ಯೂಯಾರ್ಕ್ ಸ್ಟ್ರೈಕರ್ಸ್​​ಗೆ ಚಾಂಪಿಯನ್ ಪಟ್ಟ: ಅಬುಧಾಬಿ ಟಿ10

ಅಬುಧಾಬಿ:ಕಳೆದ ಎರಡು ಆವೃತ್ತಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್‌ ಜಯ ದಾಖಲಿಸಿತ್ತು. ಅದರಲ್ಲೂ 2022ರ ಆವೃತ್ತಿಯ ಫೈನಲ್​ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನೇ ಮಣಿಸಿ ಡೆಕ್ಕನ್​​ ಚಾಂಪಿಯನ್​ ಆಗಿತ್ತು. 2023ರ ಫೈನಲ್​​ನಲ್ಲಿ ಈ ಎರಡು ತಂಡಗಳೇ ಮುಖಾಮುಖಿ ಆದವು. ಆದರೆ ಈ ಬಾರಿ ಕಿರನ್​ ಪೊಲಾರ್ಡ್​​ ನಾಯಕತ್ವದ ನ್ಯೂಯಾರ್ಕ್​ ತಂಡ ಗೆದ್ದು ಬೀಗಿತು. ನ್ಯೂಯಾರ್ಕ್ ಸ್ಟ್ರೈಕರ್ಸ್​​ ತಂಡಕ್ಕೆ ಇದು ಎರಡನೇ ಆವೃತ್ತಿಯಾಗಿದೆ. ಕಳೆದ ಬಾರಿ ಫೈನಲ್ಸ್​ ಪ್ರವೇಶಿಸಿ ರನ್​ರ್​ ಅಪ್​ ಆಗಿದ್ದ ಪಡೆ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್​ ಆಗಿದೆ.\ ಇಲ್ಲಿನ ಝಾಯೆದ್ […]

ಇಸ್ರೋ : ಪೂರ್ಣ ಸೂರ್ಯನ ಮೊದಲ ಚಿತ್ರ ಸೆರೆಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್​-1 ನೌಕೆ

ಹೈದರಾಬಾದ್: ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ಒಳನೋಟಗಳನ್ನು ಇದು ಒದಗಿಸುತ್ತದೆ ಎಂದು ಇಸ್ರೋ ತಿಳಿಸಿದೆಸೌರ ಅಧ್ಯಯನಕ್ಕಾಗಿ ಹಾರಿ ಬಿಡಲಾದ ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಿದೆ.ಸೂರ್ಯನ ಅಧ್ಯಯನ ನಡೆಸುತ್ತಿರುವ ಆದಿತ್ಯ ಎಲ್​ 1 ಸೌರ ನೌಕೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಪೂರ್ಣ ಸೂರ್ಯನ ಮೊದಲ ಚಿತ್ರವನ್ನು ಸೆರೆಹಿಡಿದು ಭೂಮಿಗೆ ರವಾನಿಸಿದೆ..ನವೆಂಬರ್ 20 ರಂದು SUIT ಪೇಲೋಡ್ ಅನ್ನು […]

ಸೋಲಾರ್ ಅಲ್ಟ್ರಾ ವಯೋಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರ ಸೆರೆಹಿಡಿದ ಆದಿತ್ಯ-L1 ನೌಕೆ

ಬೆಂಗಳೂರು: ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿರುವ ಸೋಲಾರ್ ಅಲ್ಟ್ರಾ ವಯೋಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣವು 200-400 nm ತರಂಗಾಂತರ ಶ್ರೇಣಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿಯಿತು. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ. ನವೆಂಬರ್ 20, 2023 ರಂದು, SUIT (ಸೌರ ನೇರಳಾತೀತ ಚಿತ್ರಣ ದೂರದರ್ಶಕ) ಪೇಲೋಡ್ ಅನ್ನು ಆನ್ ಮಾಡಲಾಗಿದೆ. ಯಶಸ್ವಿ ಪೂರ್ವ ನಿಯೋಜಿತ ಹಂತದ […]