ಚಂದ್ರನ ಅಂಗಳದಲ್ಲಿ ಹಾರಾಟ ನಡೆಸಲಿರುವ ನಾಸಾದ ಗಗನಯಾನಿಗಳಿಗೆ ಆತಿಥ್ಯ ನೀಡಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್( ಅಮೆರಿಕ)​​: 50 ವರ್ಷದ ಬಳಿಕ ಇದೀಗ ನಾಲ್ಕು ಮಂದಿ ಗಗನಯಾನಿಗಳು ಚಂದ್ರನ ಅಂಗಳದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದು, ಇವರಿಗೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್​​​​ ಅವರು ಶ್ವೇತ ಭವನದಲ್ಲಿ ಆತಿಥ್ಯ ನೀಡಿದರು.ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್​ ಕ್ಯಾಪ್ಸುಲ್​ನಲ್ಲಿ ಹಾರಾಡಲಿದ್ದಾರೆ. ಈ ವೇಳೆ, ಓವಲ್​ ಕಚೇರಿಯಲ್ಲಿ ಅಪೋಲೋ ಕಾಲಘಟ್ಟದಲ್ಲಿ ಸಂಗ್ರಹಿಸಿ ಚಂದ್ರನ ಕಲ್ಲುಗಳನ್ನು ತೋರಿಸಲಾಯಿತು. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಯೋಜನೆ ಸಾಕಾರಗೊಳ್ಳಲಿದೆ. ಈ ನಾಲ್ವರು ಗಗನಯಾನಿಗಳು ಮೊದಲಿಗೆ […]

ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳದ ಆರೋಪ: ಜೀವನ ಕೊನೆಗೊಳಿಸಲು ಅನುಮತಿ ಕೋರಿ ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ; ವರದಿ ಕೇಳಿದ ಸಿಜೆಐ

ಲಕ್ನೋ: ಇತರರಿಗೆ ನ್ಯಾಯ ನೀಡಬೇಕಾಗಿರುವ ನ್ಯಾಯಾಧೀಶೆಯೆ ನ್ಯಾಯಕಾಗಿ ಮೊರೆ ಇಡುವ ಪ್ರಸಂಗ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳಾ ಸಿವಿಲ್ ನ್ಯಾಯಾಧೀಶೆಯೊಬ್ಬರಿಗೆ ಎದುರಾಗಿದೆ. ಹಿರಿಯ ನ್ಯಾಯಾಧೀಶರಿಂದ ಲೈಗಿಂಕ ಶೋಷಣೆ ಎದುರಿಸುತ್ತಿರುವ ನ್ಯಾಯಾಧೀಶೆಯು ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತಮ್ಮ ಹಿರಿಯರಿಂದ ಲೈಂಗಿಕ ಕಿರುಕುಳ ಎದುರಿಸುತ್ತಿರುವುದನ್ನು ಆರೋಪಿಸಿದ್ದಾರೆ. “ಇನ್ನು ನನಗೆ ಬದುಕುವ ಇಚ್ಛೆ ಇಲ್ಲ” ಎಂದಿರುವ ಅವರು ನ್ಯಾಯಯುತವಾದ ವಿಚಾರಣೆಯನ್ನು ಪಡೆಯುವ ಭರವಸೆ ಇಲ್ಲದ ಕಾರಣ ತನ್ನ ಜೀವನವನ್ನು ಕೊನೆಗೊಳಿಸಲು ಅನುಮತಿ ಕೋರಿದ್ದಾರೆ. ಗುರುವಾರ […]

ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಆಯೋಗ ರಚನೆಗೆ ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ

ಅಲಹಾಬಾದ್: ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಕೃಷ್ಣ ದೇವಸ್ಥಾನದ ಪ್ರದೇಶದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದ್ದು, ಈ ಬಗ್ಗೆ ಹಿಂದೂ ಪರ ಅರ್ಜಿದಾರರು ದೇವಾಲಯ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಮಾಡಲು ಅನುಮತಿ ಕೋರಿ ಅಲಹಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಹಿ ಈದ್ಗಾ ಮಸೀದಿ ಸಂಕೀರ್ಣವನ್ನು ಪರಿಶೀಲಿಸಲು ಆಯೋಗವನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಅಂಗೀಕರಿಸಿದೆ. ಅರ್ಜಿದಾರರ ಪರ ವಕೀಲ ರಂಜನಾ ಅಗ್ನಿಹೋತ್ರಿ ಮಾಧ್ಯಮದ ಜೊತೆ ಮಾತನಾಡಿ, ಸ್ಥಳವನ್ನು ಸಮೀಕ್ಷೆ ಮಾಡಲು ಆಯೋಗವನ್ನು ನೇಮಿಸಬೇಕೆಂಬ […]

ಸಂಸತ್ತಿನಲ್ಲಿ ಭದ್ರತಾ ಲೋಪ: 6 ಬಂಧನ; ಆರೋಪಿಗಳ ಮೇಲೆ ಯುಎಪಿಎ ದಾಖಲು

ನವದೆಹಲಿ: ಸಂಸತ್ತಿನ ಲೋಕಸಭೆಯಲ್ಲಿ ಬುಧವಾರದಂದು ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಕೆಳಮನೆಗೆ ಧುಮುಕಿ ಹೊಗೆ ಕ್ಯಾನ್ ಗಳನ್ನು ಸಿಡಿಸಿ ರಂಪಾಟ ಮಾಡಿದ್ದು, ಸದನದಲ್ಲಿದ್ದ ಸಂಸದರೆಲ್ಲರೂ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ ತನಿಖೆ ಮುಂದುವರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಜನರನ್ನು ಬಂಧಿಸಲಾಗಿದೆ. ರಂಪಾಟ ನಡೆಸಿದವರು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದುಕೊಂಡು ಲೋಕಸಭೆಯ ಸದನದೊಳಗೆ ಪ್ರವೇಶಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಏಳನೇ […]

ಬಿಎಸ್​ಇ ನಿಫ್ಟಿ 90 & ಸೆನ್ಸೆಕ್ಸ್​ 377 ಅಂಕ ಕುಸಿತ

ಮುಂಬೈ : ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಕುಸಿತದೊಂದಿಗೆ ವಹಿವಾಟು ಕೊನೆಗೊಳಿಸಿವೆ ಚಿಲ್ಲರೆ ಹಣದುಬ್ಬರ ದತ್ತಾಂಶ ಪ್ರಕಟವಾಗುವ ಮುನ್ನ ಇಂಧನ ಷೇರುಗಳ ಮೌಲ್ಯ ಕುಸಿತದಿಂದಾಗಿ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಕೆಳಮಟ್ಟದಲ್ಲಿ ಕೊನೆಗೊಂಡವು.. ಇಂದು ಬಿಎಸ್‌ಇ ಸೆನ್ಸೆಕ್ಸ್ 377.50 ಪಾಯಿಂಟ್ಸ್ ಕುಸಿದು 69,551.03 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ-50 90 ಪಾಯಿಂಟ್ಸ್ ಕುಸಿದು 20,900 ಕ್ಕೆ ತಲುಪಿದೆ. ಹೆಚ್ಚಿನ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ಇತರ ವೈಯಕ್ತಿಕ ಷೇರುಗಳಲ್ಲಿ ಸ್ಪೈಸ್ ಜೆಟ್ ಷೇರುಗಳು […]