ಚಂದ್ರನ ಅಂಗಳದಲ್ಲಿ ಹಾರಾಟ ನಡೆಸಲಿರುವ ನಾಸಾದ ಗಗನಯಾನಿಗಳಿಗೆ ಆತಿಥ್ಯ ನೀಡಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್( ಅಮೆರಿಕ)​​: 50 ವರ್ಷದ ಬಳಿಕ ಇದೀಗ ನಾಲ್ಕು ಮಂದಿ ಗಗನಯಾನಿಗಳು ಚಂದ್ರನ ಅಂಗಳದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದು, ಇವರಿಗೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್​​​​ ಅವರು ಶ್ವೇತ ಭವನದಲ್ಲಿ ಆತಿಥ್ಯ ನೀಡಿದರು.ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್​ ಕ್ಯಾಪ್ಸುಲ್​ನಲ್ಲಿ ಹಾರಾಡಲಿದ್ದಾರೆ. ಈ ವೇಳೆ, ಓವಲ್​ ಕಚೇರಿಯಲ್ಲಿ ಅಪೋಲೋ ಕಾಲಘಟ್ಟದಲ್ಲಿ ಸಂಗ್ರಹಿಸಿ ಚಂದ್ರನ ಕಲ್ಲುಗಳನ್ನು ತೋರಿಸಲಾಯಿತು. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಯೋಜನೆ ಸಾಕಾರಗೊಳ್ಳಲಿದೆ.

ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್​ ಕ್ಯಾಪ್ಸುಲ್​ನಲ್ಲಿ ಹಾರಾಡಲಿದ್ದಾರೆ. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯಿಂದ ಇವರ ಪ್ರಯಾಣ ಆರಂಭ ಆಗಲಿದೆ. ಅವರು ಚಂದ್ರನ ಕಕ್ಷೆಯಲ್ಲಿ ಇಳಿಯುವುದಿಲ್ಲ. ಬದಲಾಗಿ ಚಂದ್ರನ ಸುತ್ತ, ಭೂಮಿಗೆ ನೇರವಾಗಿ ಹಾರಾಟ ನಡೆಸಲಿದ್ದಾರೆ. ವರ್ಷದ ಬಳಿಕ ಚಂದ್ರನ ಅಂಗಳದಲ್ಲಿ ಇಳಿಯುವ ಯೋಜನೆ ರೂಪಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಆರ್ಟೆಮಿಸ್ II ಮೂವರು ಅಮೆರಿಕನ್​ ಮತ್ತು ಒಬ್ಬ ಕೆನಡಿಯನ್​ ಈ ಗಗನಯಾನ ಕೈಗೊಳ್ಳುವುದಾಗಿ ಘೋಷಣೆ ಮಾಡಲಾಗಿತ್ತು. ಯೋಜನೆಗೆ ಅವರನ್ನು ಹೆಸರಿಸಿದ ನಂತರ ಶ್ವೇತಭವನದಲ್ಲಿ ಆತಿಥ್ಯ ನೀಡುವ ಭರವಸೆ ಪೂರ್ಣಗೊಳಿಸಿದರು. ಇದೇ ವೇಳೆ, ಅವರು ಉಪ ಅಧ್ಯಕ್ಷೆ ಕಮಲಾ ಹ್ಯಾರಿಸ್​ ಅವರನ್ನು ಭೇಟಿಯಾದರು. ಅವರ ನಾಯಕತ್ವದಲ್ಲಿ ನಮ್ಮ ಈ ಅದ್ಭುತ ಪ್ರಯಾಣ ಸಾಧ್ಯವಾಗುತ್ತಿದ್ದು, ಅವರನ್ನು ಭೇಟಿಯಾಗಿ, ಕೈ ಕುಲುಕಿ ಮಾತನಾಡಿಸಿದ್ದು ಸಂತಸವಾಗಿದೆ ಎಂದು ಪೈಲಟ್​ ವಿಕ್ಟರ್​ ಗ್ಲೊವರ್​ ತಿಳಿಸಿದ್ದಾರೆ.

ಈ ನಾಲ್ಕು ಜನರನ್ನು ಚಂದ್ರನತ್ತ ಕಳುಹಿಸಲು ಅತಿ ದೊಡ್ಡ ತಂಡ ಕೆಲಸ ಮಾಡಲಿದೆ. ನಿತ್ಯ ನಾವು ಈ ಯೋಜನೆಗೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಯೋಜನೆಯ ಸ್ಪೆಷಲಿಸ್ಟ್ ಆಗಿರುವ ಕೆನಡಿಯನ್​ ಗುಂಪಿನ ಸದಸ್ಯ​​ ಜೆರೆಮೆ ಹ್ಯಾನ್ಸೆನ್​ ತಿಳಿಸಿದರು. ಅಮೆರಿಕದಿಂದ ಹೊರತಾಗಿರುವ ಸಿಬ್ಬಂದಿಗಳನ್ನು ಸೇರಿಸಿಕೊಂಡಿರುವ ಮೊದಲ ಚಂದ್ರ ಯೋಜನೆಯ ತಂಡ ಇದಾಗಿದೆ. ಅಪೋಲೋ ಬಳಿಕ ನಾಸಾದ ಹೊಸ ಚಂದ್ರ ಕಾರ್ಯಕ್ರಮ ಆರ್ಟೆಮಿನ್​ನ ಮೊದಲ ಸಿಬ್ಬಂದಿ ಕೂಡ ಇವರಾಗಿದ್ದಾರೆ. ಕಳೆದ ವರ್ಷ ಖಾಲಿ ಓರಿಯನ್​ ಕ್ಯಾಪ್ಸುಲ್​ ಚಂದ್ರನ ಸುತ್ತ ಹಾರಾಟ ನಡೆಸಿತ್ತು.

ಆಗಸ್ಟ್​​ನಲ್ಲಿ ಈ ಗಗನಯಾನಿಗಳು ಈ ಬಾಹ್ಯಕಾಶಯಾನದ ಮೊದಲ ನೋಟವನ್ನು ಪಡೆದಿದ್ದರು. ಆದರೆ ಕ್ಯಾಪ್ಸುಲ್​ನ ಹೀಟ್​ ಶೀಲ್ಡ್​​​ ತಡವಾದ ಹಿನ್ನಲೆ ಅವರ ಹಾರಾಟ ವಿಳಂಬವಾಗಿದೆ. ಕಳೆದ ವರ್ಷ ಚಂದ್ರನ ಸುತ್ತಲ್ಲಿನ ಈ ಪರೀಕ್ಷಾ ಹಾರಾಟದಲ್ಲಿ ಯಾರು ಕೂಡ ಇರಲಿಲ್ಲ. ಈ ವೇಳೆ ಅನಿರೀಕ್ಷಿತ ಶಾಖದಿಂದ ಸುಟ್ಟು, ವಸ್ತುಗಳು ಹಾಳಾಯಿತು. ಈ ಹೀಟ್​ ಶೀಲ್ಡ್​​ ಎಂಬುದು ಮರುಪ್ರವೇಶದ ತೀವ್ರ ಶಾಖದ ವಿರುದ್ಧ ಕ್ಯಾಪ್ಸುಲ್​ ಅನ್ನು ಸಂರಕ್ಷಣೆ ಮಾಡಲಿದೆ.1962ರ ಚಂದ್ರಯಾದದ ಬಗ್ಗೆ ಜಾನ್​ ಎಫ್​ ಕೆನಡಿ ಅಂದು ಮಾಡಿದ ದ ಭಾಷಣದ ಬಗ್ಗೆ ಬೈಡನ್​​ ಮಾತನಾಡಿದರು ಎಂದು ಯೋಜನೆಯ ಸ್ಪೆಷಲಿಸ್ಟ್​ ಕ್ರಿಸ್ಟಿನಾ ಕೊಚ್​ ತಿಳಿಸಿದರು.

ಇನ್ನು ಈ ಕುರಿತ ದಿನಾಂಕವನ್ನು ನಾವು ಯೋಚಿಸಿಲ್ಲ ಎಂದು ಕಮಾಂಡರ್​ ರೇಡ್​ ವೈಸ್​ಮ್ಯಾನ್​ ತಿಳಿಸಿದ್ದಾರೆ. ನಾಸಾ ಮತ್ತು ವಾಹನ ಯಾವಾಗ ಸಿದ್ದವಾಗುತ್ತದೆಯೋ ಆಗ ನಾವು ಹೋಗುತ್ತೇವೆ. ಈ ನಡುವೆ ನಾಲ್ಕು ಮಂದಿ ಸಿದ್ಧತೆ ನಡೆಸಲಿದ್ದಾರೆ. ಅವರು ಹೇಗೆ ಸುರಕ್ಷಿತವಾಗಿ ಹೋಗಿ ಬರುವುದು ಮಿಷನ್​ ನಿಯಂತ್ರಣದ ಕೆಲಸ ನಿರ್ವಹಿಸಲಿದ್ದಾರೆ. ಫೆಬ್ರವರಿಯಿಂದ ಡ್ರೆಸ್​ನ ಪೂರ್ವ ತಯಾರಿ ನಡೆಸಲಿದ್ದಾರೆ. ಅಲ್ಲಿ ಅವರು ಫೆಸಿಫಿಕ್​ ಸಾಗರದಲ್ಲಿನ ಕ್ಯಾಪ್ಸುಲ್​ ಮೇಲೆ ಸುತ್ತಾಟದ ಅಭ್ಯಾಸ ನಡೆಸಲಿದ್ದಾರೆ.