ಉಪರಾಷ್ಟ್ರಪತಿಗಳನ್ನು ಅಣಕವಾಡಿದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ: ನಾಚಿಕೆಗೇಡಿನ ಸಂಗತಿ ಎಂದ ಜಗದೀಪ್ ಧಂಖರ್
ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನ ಹೊರಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಅನುಕರಣೆ ಮಾಡಿ ಅಣಕಿಸಿರುವುದನ್ನು ರಾಜ್ಯಸಭಾ ಅಧ್ಯಕ್ಷರಾಗಿರುವ ಜಗದೀಪ್ ಧಂಖರ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷಗಳ ಸಂಸದರನ್ನು ಸಾಮೂಹಿಕ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳ ಸಂಸದರ ಮಧ್ಯೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿಗಳ ಅನುಕರಣೆ ಮಾಡಿ ಅಣಕಿಸುತ್ತಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅದನ್ನು ಮೊಬೈಲ್ ಫೋನ್ ನಲ್ಲಿ […]
13 ಮಂದಿ ಸಾವು, 178 ಜನರಿಗೆ ಗಾಯ : ಗಿನಿಯಾ ರಾಜಧಾನಿಯಲ್ಲಿ ಬೃಹತ್ ತೈಲ ಟರ್ಮಿನಲ್ನಲ್ಲಿ ಸ್ಫೋಟ
ಕೊನಾಕ್ರಿ (ಗಿನಿಯಾ): ಭಾನುವಾರ ಮಧ್ಯರಾತ್ರಿಯ ನಂತರ ಗಿನಿಯನ್ ಪೆಟ್ರೋಲಿಯಂ ಕಂಪನಿಯ ಟರ್ಮಿನಲ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಗಿನಿಯಾ ಪ್ರೆಸಿಡೆನ್ಸಿ ತಿಳಿಸಿದೆ. ಸ್ಫೋಟದಿಂದ ಕಲೂಮ್ ಜಿಲ್ಲೆಯ ಹೃದಯಭಾಗದಲ್ಲಿ ತುಂಬಾ ಹಾನಿ ಉಂಟಾಗಿದೆ. ಈ ಭಾಗದಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿವೆ. ಗಾಯಗೊಂಡ 178 ಜನರಲ್ಲಿ ಕನಿಷ್ಠ 89 ಜನರು ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಹತ್ಯೆಗೀಡಾದ 13 ಜನರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆಫ್ರಿಕನ್ ದೇಶವಾದ ಗಿನಿಯಾದ ರಾಜಧಾನಿ ಕೊನಾಕ್ರಿಯಲ್ಲಿ ಬೃಹತ್ […]
ಮುಂಜಾಗ್ರತೆಗೆ WHO ಕರೆ : ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಏರಿಕೆ ಕಾಣುತ್ತಿದೆ ಕೋವಿಡ್
ನವದೆಹಲಿ: ಕೇರಳದಲ್ಲಿ ಓಮಿಕ್ರಾನ್ ಉಪತಳಿಯಾಗಿರುವ ಜೆಎನ್.1 ಭಾರತದಲ್ಲಿ ಪತ್ತೆಯಾಗುವ ಜೊತೆಗೆ ದೇಶದೆಲ್ಲೆಡೆ ಕೋವಿಡ್ 19 ಪ್ರಕರಣಗಳ ಏರಿಕೆ ಕೂಡ ಕಂಡು ಬಂದಿದೆ.ಇತ್ತೀಚಿಗೆ ಅನೇಕ ಕಾರಣದಿಂದಾಗಿ ಶ್ವಾಸಕೋಶದ ಸೋಂಕಿನಲ್ಲಿ ಏರಿಕೆ ಕಂಡಿದೆ. ಕೇವಲ ಕೋವಿಡ್ 19 ಮಾತ್ರವಲ್ಲದೆ, ಇನ್ನಿತರ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಕಾಡುತ್ತಿವೆ. ಭಾರತದಲ್ಲಿ ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲೂ ಕೋವಿಡ್ 19 ಪ್ರಕರಣಗಳ ಏರಿಕೆ ಕಂಡು ಬಂದಿದೆ. ಹೀಗಾಗಿ ದೇಶಗಳು ಮುಂಜಾಗ್ರತೆ ಜೊತೆಗೆ ಈ ತಳಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜಾಗತಿಕ […]
5000 ಅಮೇರಿಕನ್ ಡೈಮಂಡ್ ವಜ್ರಗಳಿಂದ ಅಯೋಧ್ಯಾ ರಾಮಮಂದಿರ ನೆಕ್ಲೇಸ್ ತಯಾರಿಸಿದ ಸೂರತ್ ಜ್ಯುವೆಲರಿ ಸಂಸ್ಥೆ!!
ಸೂರತ್: ನಗರದ ಆಭರಣ ಸಂಸ್ಥೆಯೊಂದು ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರದ ವಾಸ್ತುಶಿಲ್ಪದ ವೈಶಿಷ್ಟ್ಯಗಳಿಂದ ಪ್ರೇರಿತವಾದ 5000 ಅಮೇರಿಕನ್ ಡೈಮಂಡ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಹೊಂದಿರುವ ನೆಕ್ಲೇಸ್ ಅನ್ನು ತಯಾರಿಸಿದೆ. ಸೂರತ್ ಮೂಲದ ರಸೇಶ್ ಜ್ಯುವೆಲರ್ಸ್, ವಜ್ರಗಳು ಮತ್ತು ಚಿನ್ನವನ್ನು ಬಳಸಿ ರಾಮ, ಲಕ್ಷ್ಮಣ, ಸೀತಾ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ರಾಮ್ ದರ್ಬಾರ್ ಜೊತೆಗೆ ಸಂಕೀರ್ಣ ವಿನ್ಯಾಸದ ನೆಕ್ಲೇಸ್ ಅನ್ನು ತಯಾರಿಸಿದೆ. ಎರಡು ಕಿಲೋಗ್ರಾಂ ತೂಕದ ಕಲಾಕೃತಿಯು 5,000 ವಜ್ರಗಳು, ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿದೆ. […]
ಬಿಜೆಪಿ ಅಭಿಯಾನ : ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಮನೆ-ಮನೆಗೆ ಆಮಂತ್ರಣ
ನವದೆಹಲಿ: ಭಾರತೀಯ ಜನತಾ ಪಕ್ಷದ ಸದಸ್ಯರು ನಗರಾದ್ಯಂತ ಮನೆ ಮನೆಗೆ ತೆರಳಿ ಅಯೋಧ್ಯೆಯ ರಾಮ ಮಂದಿರವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದ ನಂತರ ಭೇಟಿ ನೀಡುವಂತೆ ಜನರನ್ನು ಆಹ್ವಾನಿಸಲಿದ್ದಾರೆ ಎಂದು ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಭಾನುವಾರ ಹೇಳಿದ್ದಾರೆ.ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ […]