ನಿತೀಶ್ ಕುಮಾರ್ ಗೆ ಕರೆ ಮಾಡಿದ ರಾಹುಲ್ ಗಾಂಧಿ : ಪ್ರಧಾನಿ ಹುದ್ದೆಗೆ ಖರ್ಗೆ ಹೆಸರು ಪ್ರಸ್ತಾವ
ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟುಗಳು ತಲೆದೂರಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಿಗೇ ಗುರುವಾರ ಸಂಜೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಈ ಇಬ್ಬರು ಇಂದು ಸಂಜೆ ಮಾತುಕತೆ ನಡೆಸುವ ನಿರೀಕ್ಷೆ ಇದೆ. ರಾಹುಲ್ ಗಾಂಧಿ ಕರೆಯ ಕಾರ್ಯಸೂಚಿ ಏನು ಎಂಬುದು ಈವರೆಗೆ ತಿಳಿದು ಬಾರದಿದ್ದರೂ, ಬುಧವಾರ ನಡೆದ INDIA ಮೈತ್ರಿಕೂಟದ ಸಭೆಯಲ್ಲಿ […]
ಸಂಸತ್ ರಕ್ಷಣೆ ಇನ್ನು ಮುಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹೆಗಲಿಗೆ; ಭದ್ರತಾ ಲೋಪ ಬಳಿಕ ಎಚ್ಚೆತ್ತ ಕೇಂದ್ರ ಗೃಹ ಸಚಿವಾಲಯ
ನವದೆಹಲಿ: ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಘಟನೆಯ ಬಳಿಕ ಹೊಸ ಸಂಸತ್ತಿನ ಕಟ್ಟಡ ಸಂಕೀರ್ಣದ “ಸಮಗ್ರ ಭದ್ರತೆ” ಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವಹಿಸಿಕೊಳ್ಳಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನ ಕಟ್ಟಡ ಸಂಕೀರ್ಣದ ಸಮೀಕ್ಷೆಗೆ ಬುಧವಾರ ನಿರ್ದೇಶನ ನೀಡಿದ್ದು, ಇದರಿಂದ “ಸಿಐಎಸ್‌ಎಫ್ ಭದ್ರತೆ ಮತ್ತು ಅಗ್ನಿಶಾಮಕ ವಿಭಾಗವನ್ನು ಸಮಗ್ರ ಮಾದರಿಯಲ್ಲಿ ನಿಯಮಿತವಾಗಿ ನಿಯೋಜನೆ” ಮಾಡಬಹುದಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. CISF ಒಂದು […]
ಅಧ್ಯಯನ ವರದಿ : ಡಿಜಿಟಲ್ ಎಂಟರ್ಟೇನ್ಮೆಂಟ್ ಉದ್ಯಮ ಮೂರು ಪಟ್ಟು ಬೆಳವಣಿಗೆ ಸಾಧ್ಯತೆ
ನವದೆಹಲಿ: ಪ್ರಸ್ತುತ 12 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಭಾರತದ ಡಿಜಿಟಲ್ ಮಾಧ್ಯಮ ಮತ್ತು ಮನರಂಜನಾ ಉದ್ಯಮವು 2030ರ ವೇಳೆಗೆ ಗಾತ್ರದಲ್ಲಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ.ಭಾರತದ ಡಿಜಿಟಲ್ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಕೆಲ ವರ್ಷಗಳಲ್ಲಿ ಮೂರು ಪಟ್ಟು ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಸೀರ್ ರಿಸರ್ಚ್ ವರದಿ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ, ನಾನ್-ರಿಯಲ್ ಮನಿ ಗೇಮಿಂಗ್ (ಆರ್ ಎಂಜಿ) ಮತ್ತು ಒಟಿಟಿ ವೀಡಿಯೊದ ಹೆಚ್ಚಿದ ಬಳಕೆಯು ಡಿಜಿಟಲ್ […]
ನೆರೆಯ ದೇಶಗಳಲ್ಲಿ ಭಾರಿ ಏರಿಕೆ : ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ
ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಕಡಿಮೆಯಾಗಿದ್ದರೆ, ನೆರೆಯ ಮತ್ತು ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲಿ ಅವುಗಳ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. “ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಸವಾಲನ್ನು ಎದುರಿಸುತ್ತಿರುವ ಮೋದಿ ಸರ್ಕಾರ ನಾಗರಿಕರನ್ನು ಆರ್ಥಿಕ ಹೊರೆಯಿಂದ […]
INDIA ಬಣ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ; ಗೆಲ್ಲುವ ಬಗ್ಗೆ ಗಮನಹರಿಸಿ ಎಂದ ಖರ್ಗೆ
ನವದೆಹಲಿ: ಮಂಗಳವಾರ ಇಲ್ಲಿ ನಡೆದ Indian National Developmental, Inclusive Alliance (INDIA) ಸಭೆಯಲ್ಲಿ ಡಿಸೆಂಬರ್ 31 ರೊಳಗೆ ಬಣವು ತನ್ನ ಸೀಟು ಹಂಚಿಕೆಯನ್ನು ಅಂತಿಮಗೊಳಿಸುತ್ತದೆ ಎಂಬ ಸಲಹೆಗಳ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೈತ್ರಿ ಪಕ್ಷದ ಪ್ರಧಾನ ಮಂತ್ರಿಯಾಗಿ ಪ್ರಸ್ತಾಪಿಸಿದ್ದಾರೆ. ಅವರು ಭಾರತದ ಮೊದಲ ದಲಿತ ಪ್ರಧಾನಿಯಾಗಬಹುದು ಎಂದು ಬ್ಯಾನರ್ಜಿ ಹೇಳಿರುವುದನ್ನು ಹಿರಿಯ ವಿರೋಧ ಪಕ್ಷದ ನಾಯಕರೊಬ್ಬರು ಉಲ್ಲೇಖಿಸಿದ್ದಾರೆ. […]