ಕನಿಷ್ಠ ತಾಪಮಾನ ದಾಖಲಿಸಿದ ರಾಷ್ಟ್ರ ರಾಜಧಾನಿ: 15.6 ಡಿಗ್ರಿ ತಾಪಮಾನಕ್ಕೆ ನಡುಗಿದ ದೆಹಲಿಗರು

ನವದೆಹಲಿ: ಹೊಸ ವರ್ಷದ ಮುನ್ನಾ ದಿನದಿಂದಲೂ ರಾಷ್ಟ್ರೀಯ ರಾಜಧಾನಿಯಲ್ಲಿ ಚಳಿ ಹೆಚ್ಚುತ್ತಿದ್ದು, ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಜನರು ಚಳಿಯಿಂದ ನಡುಗುತ್ತಿದ್ದಾರೆ.

ರಾಜಧಾನಿಯು ಬುಧವಾರದಂದು 15.6 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನದೊಂದಿಗೆ ಋತುವಿನ ಅತ್ಯಂತ ತಂಪಾದ ದಿನವನ್ನು ದಾಖಲಿಸಿದೆ. ಹಿಮಾವೃತ ಗಾಳಿ ಮತ್ತು ಎತ್ತರದ ಪ್ರದೇಶಗಳಲ್ಲಿ ಭಾರೀ ಮಂಜಿನ ಕಾರಣದಿಂದ ರಾಜಧಾನಿಯಲ್ಲಿ ತಾಪಮಾನ ಇಳಿಕೆಯಾಗಿದೆ.

ಡಿಸೆಂಬರ್ 31 ರಿಂದ ಪ್ರತಿ ಮೂರು ಗಂಟೆಗಳಿಗೊಮ್ಮೆ ತೆಗೆದುಕೊಳ್ಳಲಾದ ತಾಪಮಾನಗಳ ವಿಶ್ಲೇಷಣೆಯು ನಗರವು ಅತ್ಯಂತ ತಂಪಾಗಿದೆ ಎಂದು ತೋರಿಸುತ್ತಿವೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ಚಳಿಯಲ್ಲಿ ಏರಿಕೆಯಾಗುತ್ತಿದ್ದು, ಸೂರ್ಯನ ಕಿರಣಗಳು ಬೀಳುವ ಹೊತ್ತಿಗೆ ಕಡಿಮೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಗಮನಿಸಿದೆ.