ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

ಚೆನ್ನೈ: ತಮಿಳು ಭಾಷಾ ಸಿನಿಮಾ ನಟ, ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜೆ.ಕೆ.ರಿತೇಶ್ (46) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಜೆ.ಕೆ.ರಿತೇಶ್ ಅವರು ಗುರುವಾರ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಪಕ್ಷದ ನಾಯಕರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಜೆ.ಕೆ.ರಿತೇಶ್ ಅವರು ಡಿಎಂಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು […]
‘ಪಿಎಂ ನರೇಂದ್ರ ಮೋದಿ’ ಸಿನೆಮಾ ಬಿಡುಗಡೆಗೆ ಚುನಾವಣಾ ಆಯೋಗ ತಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯನ್ನು ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್ (ಸಿನೆಮಾ) ಬಿಡುಗಡೆಗೆ ಚುನಾವಣಾ ಆಯೋಗವು ಬುಧವಾರ ತಡೆ ನೀಡಿದೆ. ಹಾಗೆಯೇ ‘ನಮೋ ಟಿವಿ’ಯ ಪ್ರಸಾರಕ್ಕೂ ಲೋಕಸಭೆ ಚುನಾವಣೆ ಮುಗಿಯುವವರೆಗೆ ನಿರ್ಬಂಧ ಹೇರಲಾಗಿದೆ. ‘ನಮೋ ಟಿ.ವಿ’ಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್ ಏಪ್ರಿಲ್ 11ರಂದು ಬಿಡುಗಡೆಯಾಗಬೇಕಿತ್ತು. ಲೋಕಸಭೆಯ ಮೊದಲ ಹಂತದ ಮತದಾನವೂ ಅಂದೇ ನಡೆಯಲಿದೆ. ಆದರೆ ಅದಕ್ಕೂ ಒಂದು ದಿನ […]
ರಾಹುಲ್ ಗಾಂಧಿಗೆ ಮುಜಗರ ತಂದೊಡ್ಡಿದ ಜಾಹಿರಾತು ಚಿತ್ರ

ನವದೆಹಲಿ: ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿದ ಜಾಹೀರಾತೊಂದು ಇದೀಗ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಜುಗರ ತಂದೊಡ್ಡುವಂತಾಗಿದೆ. ಕಾಂಗ್ರೆಸ್ ಪಕ್ಷದ ‘ನ್ಯಾಯ್ ಯೋಜನೆ’ಯ ಪ್ರಚಾರದ ಜಾಹೀರಾತಿನಲ್ಲಿ ರಾಹುಲ್ ವಯೋವೃದ್ದೆಯನ್ನು ತಬ್ಬಿಕೊಂಡು ಸಂತೈಸುತ್ತಿರುವ ಚಿತ್ರವಿದೆ. ಆದರೆ ವೃದ್ಧೆಯನ್ನು ಹಿಡಿದುಕೊಂಡು ರಾಹುಲ್‌ಗೆ ಮೂರು ಕೈ ಇರುವ ರೀತಿ ಪೋಟೋ ತೆಗೆಯಲಾಗಿದೆ. ಇದು ಮೂಲ ಫೋಟೋವನ್ನು ಜಾಹೀರಾತಿಗೆ ಬಳಸುವ ವೇಳೆ ಮಾಡಿದ ಎಡವಟ್ಟಾಗಿದೆ. ರಾಹುಲ್ ಗಾಂಧಿ ಜತೆಗೆ ಮತ್ತೊಬ್ಬ ವ್ಯಕ್ತಿ ಕೂಡಾ ಸಂತೈಸುತ್ತಿದ್ದು ಆದರೆ ಜಾಹೀರಾತಿಗೆ ಆ ಫೋಟೋ ಬಳಸುವಾಗ ಮತ್ತೊಬ್ಬ […]
ಭಾರತದಲ್ಲಿ ಆ್ಯಪಲ್ ಐಫೋನ್ 10ಆರ್ ಬೆಲೆ ಇಳಿಕೆ

ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್ ಕಂಪನಿಯು ಬಿಡುಗಡೆ ಮಾಡಿರುವ ಐಫೋನ್ 10ಆರ್ ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಐಫೋನ್ 10ಆರ್ 64 ಜಿಬಿ ಬೆಲೆಯನ್ನು ₹ 17,900 ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಷ್‌ಬ್ಯಾಕ್ ಸಹ ಸಿಗಲಿದೆ. ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ. ಆ್ಯಪಲ್ ಕಂಪನಿಯ ಭಾರತದ ಜಾಲತಾಣದಲ್ಲಿ ಯಾವುದೇ ಬೆಲೆಗಳು ಬದಲಾವಣೆಯಾಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು […]
ಐಪಿಎಲ್ 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ CSK ತಂಡ 2 ಕೋಟಿ ನೆರವು!

ಚೆನ್ನೈ: 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ CSK ಫ್ರಾಂಚೈಸಿ 2 ಕೋಟಿ ರೂಪಾಯಿ ಹಣವನ್ಮು ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ. CSK ನಾಯಕ, ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಎಂ.ಎಸ್.ಧೋನಿ ಚೆಕ್ ವಿತರಿಸಿದರು. ಕಳೆದ ವಾರ CSK ಪಂದ್ಯದ ಆದಾಯವನ್ನು ಪುಲ್ವಾಮಾ ಹುತಾತ್ಮಯ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರಂತೆ ಇಂದು […]