ರಾಹುಲ್ ಗಾಂಧಿಗೆ ಮುಜಗರ ತಂದೊಡ್ಡಿದ ಜಾಹಿರಾತು ಚಿತ್ರ

ನವದೆಹಲಿ: ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಡುಗಡೆಗೊಳಿಸಿದ ಜಾಹೀರಾತೊಂದು ಇದೀಗ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಗೆ ಮುಜುಗರ ತಂದೊಡ್ಡುವಂತಾಗಿದೆ.
ಕಾಂಗ್ರೆಸ್‌ ಪಕ್ಷದ ‘ನ್ಯಾಯ್‌ ಯೋಜನೆ’ಯ ಪ್ರಚಾರದ ಜಾಹೀರಾತಿನಲ್ಲಿ ರಾಹುಲ್ ವಯೋವೃದ್ದೆಯನ್ನು ತಬ್ಬಿಕೊಂಡು ಸಂತೈಸುತ್ತಿರುವ ಚಿತ್ರವಿದೆ. ಆದರೆ ವೃದ್ಧೆಯನ್ನು ಹಿಡಿದುಕೊಂಡು ರಾಹುಲ್‌ಗೆ ಮೂರು ಕೈ ಇರುವ ರೀತಿ ಪೋಟೋ ತೆಗೆಯಲಾಗಿದೆ. ಇದು ಮೂಲ ಫೋಟೋವನ್ನು ಜಾಹೀರಾತಿಗೆ ಬಳಸುವ ವೇಳೆ ಮಾಡಿದ ಎಡವಟ್ಟಾಗಿದೆ.
ರಾಹುಲ್ ಗಾಂಧಿ ಜತೆಗೆ ಮತ್ತೊಬ್ಬ ವ್ಯಕ್ತಿ ಕೂಡಾ ಸಂತೈಸುತ್ತಿದ್ದು ಆದರೆ ಜಾಹೀರಾತಿಗೆ ಆ ಫೋಟೋ ಬಳಸುವಾಗ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಅಳಿಸಿಹಾಕಲಾಗಿದ್ದು, ಕೈ ಭಾಗ ಮಾತ್ರ ಹಾಗೆಯೇ ಉಳಿದುಕೊಂಡಿದ್ದು ಆ ಫೋಟೊ ವೈರಲ್ ಆಗಿದೆ.