ಚೆನ್ನೈ: 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ CSK ಫ್ರಾಂಚೈಸಿ 2 ಕೋಟಿ ರೂಪಾಯಿ ಹಣವನ್ಮು ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ.
CSK ನಾಯಕ, ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಎಂ.ಎಸ್.ಧೋನಿ ಚೆಕ್ ವಿತರಿಸಿದರು. ಕಳೆದ ವಾರ CSK ಪಂದ್ಯದ ಆದಾಯವನ್ನು ಪುಲ್ವಾಮಾ ಹುತಾತ್ಮಯ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರಂತೆ ಇಂದು 2 ಕೋಟಿ ರೂಪಾಯಿ ಹಣವನ್ನು ನೀಡಿದೆ.