ಕೆರಿಬಿಯನ್ ಬೌಲಿಂಗ್ ದಾಳಿಗೆ ನಲುಗಿದ ಪಾಕ್, ವಿಶ್ವಕಪ್ ನಲ್ಲಿ 2ನೇ ಬಾರಿ ಅತೀ‌ ಕಡಿಮೆ ರನ್ ಗೆ ಆಲ್ ಔಟ್

ನಾಟಿಂಗ್‍ಹ್ಯಾಮ್: ವಿಶ್ವಕಪ್ ಸರಣಿಗೂ‌ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಪಾಕ್ ತಂಡ ಇದೀಗ ವಿಶ್ವಕಪ್‍ನಲ್ಲೂ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಕೇವಲ‌ 105 ರನ್ ಗಳಿಗೆ ಸರ್ವಪತನ‌ ಕಂಡಿದೆ.‌ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್, ಕೆರಿಬಿಯನ್ ಬೌಲಿಂಗ್ ದಾಳಿಗೆ ಒಳಗಾಗಿ 21.4 ಓವರ್ಗೆ ಆಲ್ ಔಟ್ ಆಗಿದ್ದು, ವಿಶ್ವಕಪ್ನಲ್ಲಿ ಮತ್ತೊಮ್ಮೆ ಅತೀ ಕಡಿಮೆ ರನ್ ಗೆ ಸರ್ವಪತನ‌ ಕಂಡಂತಾಗಿದೆ. 1992 ರಲ್ಲಿ ಇಂಗ್ಲೆಂಡ್ […]

12ನೇ ವಿಶ್ವಕಪ್ ಮೊದಲ ಪಂದ್ಯ,  ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ಗೆ ಭರ್ಜರಿ‌ ಜಯ 

ಲಂಡನ್: 12ನೇ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಶುಭಾರಂಭ ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ‌ ಪ್ರದರ್ಶನ‌ ನೀಡಿದ ಇಂಗ್ಲೆಂಡ್ ದ.ಆಫ್ರಿಕಾ ತಂಡವನ್ನು 104 ರನ್ಗಳಿಂದ ಬಗ್ಗು ಬಡಿದಿದೆ. ಟಾಸ್ ಗೆದ್ದ ದ.ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು.‌ ಹೀಗಾಗಿ ಮೊದಲು‌ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ 50 ಒವರ್ಗಳಲ್ಲಿ 311 ರನ್ ಕಲೆ‌ ಹಾಕಿತು. ಜಾನಿ ಬೈರ್ಸ್ಟೋ ಸೊನ್ನೆಗೆ ಔಟಾದರೂ ಇಂಗ್ಲೆಂಡ್ ಪರ ಜೇಸನ್ […]

ಮೋದಿ ಸರ್ಕಾರ್ 2: ಕೇಂದ್ರ ಸಚಿವ ಸಂಪುಟ ಸೇರಿದವರ ಪಟ್ಟಿ

ನವದೆಹಲಿ, ಮೇ 30: ನರೇಂದ್ರ ಮೋದಿ  ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುರುವಾರ ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.  ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಪಾಲ್ಗೊಂಡಿದ್ದರು. ಮೋದಿ ಸರ್ಕಾರದ ಸಚಿವರ ಪಟ್ಟಿ : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು.20 […]

ವಿಶ್ವಕಪ್-2019: 500 ರನ್ ದಾಟುವ ನಿರೀಕ್ಷೆ..!

ಲಂಡನ್ : ಈ ಬಾರಿ‌ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್’ನಲ್ಲಿ ಬ್ಯಾಟ್ಸ್’ಮನ್’ಗಳು ಅಬ್ಬರಿಸುವ ಸುಳಿವಿದ್ದು, ಅಭ್ಯಾಸ ಪಂದ್ಯದದಲ್ಲೇ ಹೆಚ್ಚಿನ‌ ತಂಡಗಳು 350, 400 ರನ್ ಗಳಿಸಿವೆ. ಇಂಗ್ಲೆಂಡ್’ನ ಬ್ಯಾಟಿಂಗ್ ಸ್ನೇಹಿ ಪಿಚ್’ಗಳಲ್ಲಿ ಏಕದಿನ ಕ್ರಿಕೆಟ್ ಮೊದಲ ಬಾರಿಗೆ 500 ರನ್’ಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಭಿಮಾನಿಗಳ ಸ್ಕೋರ್’ಕಾರ್ಡ್’ಗಳನ್ನು ಪರಿಷ್ಕರಿಸಿ, 500 ರನ್ ಪಟ್ಟಿಯನ್ನು ಅಳವಡಿಸಿದೆ. ಇಂಗ್ಲೆಂಡ್’ನಲ್ಲಿ ಪಂದ್ಯಗಳ ಸ್ಕೋರ್ ಪಟ್ಟಿಯನ್ನು ಅಭಿಮಾನಿಗಳು ಖರೀದಿಸಿ, ಸ್ಮರಣಿಕೆಯಾಗಿ ಸಂಗ್ರಹಿಸುವ ಪದ್ಧತಿ ಇದೆ. ಸ್ಕೋರ್ ಪಟ್ಟಿಯಲ್ಲಿ […]

ನವಭಾರತಕ್ಕಾಗಿ ಫಕೀರನ ಜೋಳಿಗೆ ತುಂಬಿಸಿದ್ದಾರೆ ದೇಶದ ಜನತೆ.. ದೇಶದ ಜನತೆಗೆ ಮೋದಿ ಅಭಿನಂದನೆ

ನವದೆಹಲಿ: ನವಭಾರತಕ್ಕಾಗಿ ದೇಶದ ಕೋಟಿ ಕೋಟಿ ನಾಗರಿಕರು ಫಕೀರನ ‌ಜೋಳಿಗೆಯನ್ನು ಈ ಜನತೆ ತುಂಬಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ‌ಮತದಾನವಾಗಿದೆ.‌ ಈ ಗೆಲುವನ್ನು ಜನತಾ ಜನಾರ್ದನನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ‌ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೋದಿ ಅವರು, ಭಾಷಣ ಪ್ರಾರಂಭಿಸುತ್ತಲೇ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ, ಹಿರಿಯ ನಾಯಕರು ಹಾಗೂ ದೇಶದ ಕೋಟಿ ಕೋಟಿ‌ ಕಾರ್ಯಕರ್ತರಿಗೆ, ಎಲ್ಲ ಜಯಗಳಿಸಿದ ಅಭ್ಯರ್ಥಿಗಳಿಗೆ ಮೋದಿ ಅಭಿನಂದನೆ […]