ನಾಲ್ಕು ಮುದ್ದು ಮರಿಗಳಿಗೆ ಜನ್ಮವಿತ್ತ ನಮೀಬಿಯಾ ಚಿರತೆ ಜ್ವಾಲಾ; ಮೂರು ಮರಿಗಳ ತಾಯಿಯಾದ ಆಶಾ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜನವರಿ 24 ರಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರದಂದು ಚಿರತೆಯು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಸಚಿವರು ಹೇಳಿದ್ದರು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಂಚೂಣಿ ವನ್ಯಜೀವಿ ಯೋಧರು ‘ಜ್ವಾಲಾ’ ಚಿರತೆಯ ಅತಿ ಹತ್ತಿರ ಹೋಗಿ ನೋಡಿದಾಗ ನಾಲ್ಕು ಮರಿಗಳಿರುವುದು ಕಂಡುಬಂದಿದೆ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, […]

ನ್ಯೂ ಹ್ಯಾಂಪ್‌ಶೈರ್‌ ಪ್ರೈಮರಿ ಚುನಾವಣೆ ಗೆದ್ದ ಡೊನಾಲ್ಡ್ ಟ್ರಂಪ್; ನಿಕ್ಕಿ ಹ್ಯಾಲೆಗೆ ಸೋಲು

ವಾಷಿಗ್ಟನ್ ಡಿಸಿ: ನ್ಯೂ ಹ್ಯಾಂಪ್‌ಶೈರ್‌ನ ಪ್ರೈಮರಿ(ಪ್ರಾಥಮಿಕ) ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ ನಂತರ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಹತ್ತಿರವಾಗಿದ್ದಾರೆ. “ನಾವು ಈಗ ಮೂರು ಬಾರಿ ನ್ಯೂ ಹ್ಯಾಂಪ್‌ಶೈರ್ ಅನ್ನು ಗೆದ್ದಿದ್ದೇವೆ. ನಾವು ಪ್ರತಿ ಬಾರಿಯೂ ಅದನ್ನು ಗೆಲ್ಲುತ್ತೇವೆ, ನಾವು ಪ್ರಾಥಮಿಕವನ್ನು ಗೆದ್ದಿದ್ದೇವೆ, ನಾವು ಜನರಲ್‌ಗಳನ್ನು ಗೆಲ್ಲುತ್ತೇವೆ ”ಎಂದು ಟ್ರಂಪ್ ಮಂಗಳವಾರ ರಾತ್ರಿ ತಮ್ಮ ವಿಜಯ ಭಾಷಣದಲ್ಲಿ ಹೇಳಿದ್ದಾರೆ. ನಿಕ್ಕಿ ಹ್ಯಾಲೆ ಕೂಡಾ ಅಭ್ಯರ್ಥಿಯಾಗಿದ್ದು ನ್ಯೂ ಹ್ಯಾಂಪ್‌ಶೈರ್ ಪ್ರಾಥಮಿಕ […]

ಅಯೋಧ್ಯೆಯಲ್ಲೊಂದು ಸುಂದರ ಘಟನೆ: ರಾಮಲಲ್ಲಾನನ್ನು ನೋಡಲು ಬಂದರೇ ಸಾಕ್ಷಾತ್ ರಾಮನ ಬಂಟ ಹನುಮ?

ಅಯೋಧೆ: ಅಯೋಧ್ಯೆಯಲ್ಲೊಂದು ವಿಲಕ್ಷಣ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಜ.23 ರ ಸಂಜೆ ವೇಳೆಗೆ ಕೋತಿಯೊಂದು ರಾಮನ ವಿಗ್ರಹವಿದ್ದ (Ram Lalla) ಗರ್ಭಗುಡಿಯನ್ನು ಪ್ರವೇಶಿಸಿ ಆಶ್ಚರ್ಯ ಸೃಷ್ಟಿಸಿದೆ. ಆದರೆ ಅದಕ್ಕಿಂತಲೂ ವಿಚಿತ್ರವೆಂದರೆ ಕೋತಿ ಯಾರಿಗೂ ಯಾವುದೇ ಅಪಾಯ ಮಾಡದೆ ತಣ್ಣನೆ ಹೊರನಡೆದಿದೆ! ಈ ಬಗ್ಗೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ ಮಾಹಿತಿ ಹಂಚಿಕೊಂಡಿದೆ. ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಇಂದು ನಡೆದ ಸುಂದರ ಘಟನೆಯ ವಿವರಣೆ: “ಇಂದು(ಜ.23) ಸಂಜೆ 5:50ರ ಸುಮಾರಿಗೆ ಕೋತಿಯೊಂದು ದಕ್ಷಿಣ […]

“ಸೂರ್ಯವಂಶಿ” ರಾಘವನ ಪ್ರತಿಷ್ಠೆಯ ಬಳಿಕ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಘೋಷಿಸಿದ ಮೋದಿ: ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳ ಮಾಹಿತಿ ಇಲ್ಲಿದೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಸೌರಶಕ್ತಿ ಯೋಜನೆಯಾದ “ಪ್ರಧಾನ ಮಂತ್ರಿ ಸೂರ್ಯೋದಯ” ( Pradhanmantri Suryoday Yojana) ಯೋಜನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ದೇಶದ 1 ಕೋಟಿ ಮನೆಗಳ ಛಾವಣಿಯ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗುವುದು. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ನಡೆಸಲಾಗಿದೆ. “ಪ್ರಪಂಚದ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ. ಇಂದು, ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಯ ಜೀವನದ ಶುಭ ಸಂದರ್ಭದಲ್ಲಿ, ಭಾರತದ […]

ಶ್ರೀರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅನವರತ ದುಡಿದ ಕಾರ್ಮಿಕರ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಠಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ದುಡಿದ ಕುಶಲಕರ್ಮಿ ಕಾರ್ಮಿಕರ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಠಿ ನಡೆಸಿ ಅವರೆಲ್ಲರನ್ನೂ ಗೌರವಿಸಿದರು.