ದೇಶೀಯ CAR-T ಸೆಲ್ ಥೆರಪಿ ಚಿಕಿತ್ಸೆ ಪಡೆದ ಮೊದಲನೇ ರೋಗಿ ಕ್ಯಾನ್ಸರ್ ಕೋಶಗಳಿಂದ ಮುಕ್ತ: ಚಿಕಿತ್ಸೆ ಬೆಲೆ 4 ಕೋಟಿಯಿಂದ 42 ಲಕ್ಷಕ್ಕೆ ಇಳಿಕೆ

ನವದೆಹಲಿ: ಕಳೆದ ವರ್ಷ ಭಾರತದ ಔಷಧ ನಿಯಂತ್ರಕ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO), CAR-T ಸೆಲ್ ಥೆರಪಿಯ ವಾಣಿಜ್ಯ ಬಳಕೆಯನ್ನು ಅನುಮೋದಿಸಿತು. ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಳೀಯವಾಗಿ ಪುನರುತ್ಪಾದಿಸುವುದನ್ನು ಒಳಗೊಂಡಿದೆ.

ಇಂದು, ಭಾರತೀಯ ಸೇನೆಯಲ್ಲಿ 28 ವರ್ಷಗಳ ಅನುಭವ ಹೊಂದಿರುವ ದೆಹಲಿ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ (ಕರ್ನಲ್) ವಿ ಕೆ ಗುಪ್ತಾ ಸೇರಿದಂತೆ ಅನೇಕ ರೋಗಿಗಳಿಗೆ ಚಿಕಿತ್ಸೆಯು ಜೀವರಕ್ಷಕವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅವರು ಭಾರತೀಯ ರೂಪಾಯಿಗಳಲ್ಲಿ 42 ಲಕ್ಷ ಅಥವಾ $ 50,000 ಪಾವತಿಸುವ ಮೂಲಕ ಚಿಕಿತ್ಸೆಯನ್ನು ಪಡೆದಿದ್ದಾರೆ. ಒಂದೊಮ್ಮೆ ಇದೇ ರೀತಿಯ ಚಿಕಿತ್ಸೆಯು ವಿದೇಶದಲ್ಲಿ ನಡೆದಿದ್ದರೆ 4 ಕೋಟಿ ರೂ ಅಥವಾ $ 480,000 ವರೆಗೆ ವೆಚ್ಚವಾಗುತ್ತಿತ್ತು.

ಗುಪ್ತಾ ಅವರು ಈ ಪ್ರಕ್ರಿಯೆಗೆ ಒಳಗಾದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರ ಪ್ರಕಾರ ಅವರೀಗ “ಪ್ರಸ್ತುತ ಕ್ಯಾನ್ಸರ್ ಕೋಶಗಳಿಂದ ಮುಕ್ತರಾಗಿದ್ದಾರೆ” . ಗುಪ್ತಾ ಅವರು ಈ ಸ್ಥಿತಿಯನ್ನು ಸಾಧಿಸಿದ ಮೊದಲ ರೋಗಿಯಾಗಿದ್ದಾರೆ ಎಂದು ವೈದರು ತಿಳಿಸಿದ್ದಾರೆ.

“ಇದು ಜೀವಮಾನದ ಚಿಕಿತ್ಸೆ ಆಗಲಿದೆಯೆ ಎಂದು ಹೇಳಲು ಇದೀಗಲೇ ಹೇಳಲು ಸಾಧ್ಯವಿಲ್ಲ,ಆದಾಗ್ಯೂ ರೋಗಿಯು ಪ್ರಸ್ತುತ ಕ್ಯಾನ್ಸರ್ ಕೋಶಗಳಿಂದ ಮುಕ್ತನಾಗಿದ್ದಾನೆ” ಎಂದು ಟಾಟಾ ಸ್ಮಾರಕ ಕೇಂದ್ರದ (ACTREC) ಅಡ್ವಾನ್ಸ್ಡ್ ಸೆಂಟರ್ ಫಾರ್ ಟ್ರೀಟ್ಮೆಂಟ್, ರಿಸರ್ಚ್ ಅಂಡ್ ಎಜುಕೇಶನ್‌ನ ಹೆಮಟೋ-ಆಂಕೊಲಾಜಿಸ್ಟ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಡಾ.ಹಸ್ಮುಖ್ ಜೈನ್ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಸಂವಾದದಲ್ಲಿ ತಿಳಿಸಿದ್ದಾರೆ.

ಚಿಕಿತ್ಸೆಯ ಯಶಸ್ಸಿನ ದರದ ಬಗ್ಗೆ ಹೇಳಲು ಇಷ್ಟು ಬೇಗ ಹೇಳಲು ಸಾಧ್ಯವಿಲ್ಲ ಎಂದಿರುವ ವೈದ್ಯರು, ಆರಂಭಿಕ ಸಂಶೋಧನೆಗಳು ಕ್ಯಾನ್ಸರಿನ ಆರಂಭಿಕ ಹಂತದ ರೋಗಿಗಳಿಗೆ “ಉತ್ತಮ ಬದುಕುಳಿಯುವ ಅವಕಾಶಗಳು ಮತ್ತು ಕಡಿಮೆ ಉಪಶಮನ ದರಗಳನ್ನು” ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ.

NexCAR19 ಅನ್ನು ImmunoACT ಅಭಿವೃದ್ಧಿಪಡಿಸಿದೆ, ಇದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (IITB), IIT-B ಮತ್ತು ಟಾಟಾ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಇನ್ಕ್ಯೂಬೇಟ್ ಮಾಡಿದ ಕಂಪನಿಯಾಗಿದೆ. ಇದು ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಬಿ-ಸೆಲ್ ಕ್ಯಾನ್ಸರ್‌ಗಳ (ಪ್ರತಿರಕ್ಷಣಾ ವ್ಯವಸ್ಥೆಯ ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್‌ಗಳ ವಿಧಗಳು) ಚಿಕಿತ್ಸೆಯನ್ನು ಕೇಂದ್ರೀಕರಿಸುತ್ತದೆ.

CDSCO ಅಕ್ಟೋಬರ್ 2023 ರಲ್ಲಿ ಅದರ ವಾಣಿಜ್ಯ ಬಳಕೆಯನ್ನು ಅನುಮೋದಿಸಿದೆ. ಇಂದು, ಭಾರತದಲ್ಲಿ 10 ಕ್ಕೂ ಹೆಚ್ಚು ನಗರಗಳಲ್ಲಿ 30 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಬಿ-ಸೆಲ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 15 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳು ಚಿಕಿತ್ಸೆಗೆ ಅರ್ಹರು.