ದೇಶದಲ್ಲಿ 2ಲಕ್ಷ ದಾಟಿತು ಸೋಂಕಿತರ ಸಂಖ್ಯೆ: ಒಟ್ಟು 5,598 ಸಾವು!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಜೂನ್ 2ಕ್ಕೆ ಎರಡು ಲಕ್ಷ ದಾಟಿದೆ. ದೇಶದಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗೆವರೆಗೆ ಹೊಸ 8,171 ಪ್ರಕರಣಗಳು ದಾಖಲಾಗಿದ್ದು, ಸೋಂಕು  ಪ್ರಕರಣಗಳು ಸಂಖ್ಯೆ ಒಟ್ಟು 1,98,706 ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇತರ ರಾಜ್ಯಗಳು ನೀಡಿದ ಮಾಹಿತಿ ‍ಪ್ರಕಾರ, ಸೋಂಕಿತರ ಒಟ್ಟು ಸಂಖ್ಯೆಯು 2,00,403ಕ್ಕೆ ಏರಿದೆ. ಇದೀಗ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,598ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೃತರಲ್ಲಿ […]

ಅಸ್ಸಾಂ: ಮಳೆ, ಭೂಕುಸಿತಕ್ಕೆ 20 ಜನ ಬಲಿ

ಅಸ್ಸಾಂನಲ್ಲಿ ಭಾರಿ ಮಳೆ, ಭೂಕುಸಿತ ಸಂಭವಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕಛಾರ್, ಕರೀಮ್‌ಗಂಜ್ ಮತ್ತು ಹೈಲಾಕಂಡಿಗಳಲ್ಲಿ ಮಂಗಳವಾರ ನಸುಕಿನಲ್ಲಿ ಮಳೆಯಾಗಿ ಭೂಕುಸಿತ ಸಂಭವಿಸಿದೆ.  ಕಛಾರ್ ನ ಕೋಲಾಪುರ್ ಗ್ರಾಮದಲ್ಲಿ ಬೆಳಿಗ್ಗೆ ಐದು ಗಂಟೆಯ ವೇಳೆಗೆ ಒಂದೇ ಕುಟುಂಬದ ಏಳು ಮಂದಿ ಭೂಕುಸಿತದಲ್ಲಿ  ಮೃತಪಟ್ಟಿದ್ದಾರೆ. ಕರೀಮ್‌ಗಂಜ್ ಜಿಲ್ಲೆಯ ಮೋಹನ್‌ಪುರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಹಾಗೂ ಹೈಲಾಕಂಡಿಯಲ್ಲಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಮನೆಯ ಮೇಲೆ ಭೂಕುಸಿತಗೊಂಡಗ ಇವರೆಲ್ಲ ನಿದ್ರಿಸುತ್ತಿದ್ದರು […]

ಕೊರೊನಾ ವಿರುದ್ಧ ಹೋರಾಡಲು ಆಯುರ್ವೇದಕ್ಕೆ ಮೊರೆ ಹೋಗುವುದು ಅನಿವಾರ್ಯ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕರೊನಾದ ವಿರುದ್ಧ ಹೋರಾಡಲು ಅತ್ಯಂತ ಅವಶ್ಯಕವಾಗಿರುವುದು ಪ್ರತಿಯೊಬ್ಬ ನಾಗರಿಕರು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು. ಈ ಹಿನ್ನೆಲೆಯಲ್ಲಿ ನಮ್ಮ ಅತ್ಯಂತ ಪ್ರಾಚೀನ ಪರಂಪರೆಯಿಂದ ಬಂದಿರುವ ಆಯುರ್ವೇದಕ್ಕೆ ಮೊರೆ ಹೋಗುವುದು ಇಂದಿನ ಅವಶ್ಯಕತೆಯಾಗಿದೆ.‌ ಆಯುರ್ವೇದದಿಂದ ನಾವು ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಬೇರೆ ಬೇರೆ ದೇಶಗಳ ಜನರು ಕೂಡ ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದು ನಮ್ಮ ಭಾರತದ ಹಿರಿಮೆ […]

ಕೊರೊನಾಗೆ ಮಹಾರಾಷ್ಟ್ರದಲ್ಲಿ ಒಂದೇ ದಿನ 116 ಮಂದಿ ಸಾವು, 2682 ಹೊಸ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ 4,706ಕ್ಕೆ ತಲುಪಿದೆ. ಒಟ್ಟು 89,987 ಸಕ್ರಿಯ ಪ್ರಕರಣಗಳಿವೆ. ಈವರೆಗೆ 71,105 ಮಂದಿ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 116 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 2098 ಆಗಿದೆ. ಅದೇ ವೇಳೆ  2682 ಹೊಸ ಪ್ರಕರಣಗಳು ವರದಿಯಾಗಿದೆ ಹಾಗೂ ಸೋಂಕಿತರ ಸಂಖ್ಯೆ 62228ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಾಣು ನಿರೋಧಕ ಔಷಧಿ ರೆಮ್‌ಡೆಸಿವಿರ್‌ ಪರಿಣಾಮಕಾರಿಯಂತೆ!: ಅಮೇರಿಕಾ ಅಧ್ಯಯನ ವರದಿ

ಕೊರೊನಾ ಚಿಕಿತ್ಸೆಗೆ ವೈರಾಣು ನಿರೋಧಕ ಔಷಧಿ ‘ರೆಮ್‌ಡೆಸಿವಿರ್‌’ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲರ್ಜಿ ಆ್ಯಂಡ್‌ ಇನ್‌ಫೆಕ್ಚಿಯಸ್‌ ಡಿಸೀಜಸ್‌ (ಎನ್‌ಐಎಐಡಿ) ಪ್ರಾಯೋಜಿತ ಕ್ಲಿನಿಕಲ್‌ ಟ್ರಯಲ್‌, ಈ ಔಷಧಿ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ. ಕಳೆದ ಫೆಬ್ರುವರಿ 21ರಂದು ಆರಂಭವಾಗಿದ್ದ ಕ್ಲಿನಿಕಲ್‌ ಟ್ರಯಲ್ 10 ದಿನಗಳ ಕಾಲ ನಡೆದಿತ್ತು. 10 ದೇಶಗಳ 1,063 ರೋಗಿಗಳನ್ನು ಅಧ್ಯಯನದ ಭಾಗವಾಗಿದ್ದರು. ಈ ರೋಗಿಗಳ ಪೈಕಿ […]