ಕೊರೊನಾಗೆ ಮಹಾರಾಷ್ಟ್ರದಲ್ಲಿ ಒಂದೇ ದಿನ 116 ಮಂದಿ ಸಾವು, 2682 ಹೊಸ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ 4,706ಕ್ಕೆ ತಲುಪಿದೆ. ಒಟ್ಟು 89,987 ಸಕ್ರಿಯ ಪ್ರಕರಣಗಳಿವೆ. ಈವರೆಗೆ 71,105 ಮಂದಿ ಚೇತರಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 116 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 2098 ಆಗಿದೆ. ಅದೇ ವೇಳೆ  2682 ಹೊಸ ಪ್ರಕರಣಗಳು ವರದಿಯಾಗಿದೆ ಹಾಗೂ ಸೋಂಕಿತರ ಸಂಖ್ಯೆ 62228ಕ್ಕೆ ಏರಿಕೆಯಾಗಿದೆ.