ಕೊರೋನಾ ವೈರಾಣು ನಿರೋಧಕ ಔಷಧಿ ರೆಮ್‌ಡೆಸಿವಿರ್‌ ಪರಿಣಾಮಕಾರಿಯಂತೆ!: ಅಮೇರಿಕಾ ಅಧ್ಯಯನ ವರದಿ

ಕೊರೊನಾ ಚಿಕಿತ್ಸೆಗೆ ವೈರಾಣು ನಿರೋಧಕ ಔಷಧಿ ‘ರೆಮ್‌ಡೆಸಿವಿರ್‌’ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಲರ್ಜಿ ಆ್ಯಂಡ್‌ ಇನ್‌ಫೆಕ್ಚಿಯಸ್‌ ಡಿಸೀಜಸ್‌ (ಎನ್‌ಐಎಐಡಿ) ಪ್ರಾಯೋಜಿತ ಕ್ಲಿನಿಕಲ್‌ ಟ್ರಯಲ್‌, ಈ ಔಷಧಿ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ.
ಕಳೆದ ಫೆಬ್ರುವರಿ 21ರಂದು ಆರಂಭವಾಗಿದ್ದ ಕ್ಲಿನಿಕಲ್‌ ಟ್ರಯಲ್ 10 ದಿನಗಳ ಕಾಲ ನಡೆದಿತ್ತು. 10 ದೇಶಗಳ 1,063 ರೋಗಿಗಳನ್ನು ಅಧ್ಯಯನದ ಭಾಗವಾಗಿದ್ದರು. ಈ ರೋಗಿಗಳ ಪೈಕಿ ಕೆಲವರಿಗೆ ರೆಮ್‌ಡೆಸಿವಿರ್‌ ಔಷಧಿ ನೀಡಲಾಗಿದ್ದರೆ, ಇನ್ನೂ ಕೆಲವರಿಗೆ ರೆಮ್‌ಡೆಸಿವಿರ್‌ ಹೊರತುಪಡಿಸಿ ಇತರ ಔಷಧಿಗಳನ್ನು ನೀಡಲಾಗಿತ್ತು.
ರೆಮ್ ಡೆಸಿವಿರ್ ಔಷಧಿ ನೀಡಲಾಗಿದ್ದವರು ಸುಧಾರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.