ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಜ. 22ರಂದು ಅವಿಭಜಿತ ದ.ಕ ಜಿಲ್ಲೆಯ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ ವಿತರಣೆ

ಉಡುಪಿ/ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Ayodhya Ram Lalla Pran Pratishta) ದಿನಗಣನೆ ಆರಂಭಗೊಂಡಿದ್ದು, ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಜ. 22ರಂದು ದ.ಕ – ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಯಾ ಊರಿನ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ರಾಮ ಮಂದಿರ ಪ್ರತಿಷ್ಠಾಪನೆಯ ನೇರವೀಕ್ಷಣೆಗಾಗಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ರಾಮನಾಪ ಜಪ, ಭಜನೆ ಸಂಕೀರ್ತನೆ, ಪಾನಕ, […]

ಪ್ರಧಾನಿ ಮೋದಿ, ಲಕ್ಷದ್ವೀಪ ಕುರಿತು ಅವಹೇಳನಕಾರಿ ಪೋಸ್ಟ್: ಮೂವರು ಸಚಿವರನ್ನು ಅಮಾನತುಗೊಳಿಸಿದ ಮಾಲ್ಡೀವ್ಸ್ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್‌ಗಳ ವಿವಾದದ ನಂತರ ಮಾಲ್ಡೀವ್ಸ್ ಸರ್ಕಾರ ತನ್ನ ಮೂವರು ಸಚಿವರನ್ನು ಅಮಾನತುಗೊಳಿಸಿದೆ. ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಜಟಾಪಟಿ ನಡೆಸಿದ ಸಚಿವರು ಮತ್ತು ಸಂಸದರು ಮಾಡಿದ ಹೇಳಿಕೆಗಳಿಂದ ಮಾಲ್ಡೀವ್ಸ್ ಸರ್ಕಾರ ದೂರವಾದ ಕೆಲವೇ ಗಂಟೆಗಳ ಬಳಿಕ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಪ್ರಧಾನಿ ಮೋದಿ ಲಕ್ಷದ್ವೀಪ […]

ಸತತ 4ನೇ ಬಾರಿ ಗೆದ್ದು ಬಾಂಗ್ಲಾ ಪ್ರಧಾನಿ ಪಟ್ಟ ಅಲಂಕರಿಸಿದ ಶೇಖ್ ಹಸೀನಾ

ಢಾಕಾ: ಬಾಂಗ್ಲಾದೇಶದಲ್ಲಿ ಜನವರಿ 7 ರಂದು ನಡೆದ 12 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ-ಬಿಎನ್‌ಪಿ ಮತದಾನ ಬಹಿಷ್ಕಾರದ ನಡುವೆ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಅವಾಮಿ ಲೀಗ್ (AL) ಪಕ್ಷ ಗೆಲುವು ಸಾಧಿಸಿದೆ. ತನ್ಮೂಲಕ ಸತತ ನಾಲ್ಕನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿ ಗದ್ದುಗೆ ಏರಲಿದ್ದಾರೆ. ಭಾನುವಾರ ಮತದಾನ ಮುಕ್ತಾಯದ ಬಳಿಕ ನಡೆದ ಮತ ಎಣಿಕೆಯಲ್ಲಿ ಅವಾಮಿ ಲೀಗ್‌ ಆರಂಭಿಕ ಮುನ್ನಡೆ ಸಾಧಿಸಿದ್ದು, 224 ಸ್ಥಾನಗಳ ಪೈಕಿ […]

ಚೀನಾ ಮೇಲೆ ಹದ್ದಿನ ಕಣ್ಣಿಡಲು ಭಾರತ ತಯಾರಿ: LAC ಬಳಿ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್‌ ಆಹ್ವಾನ

ನವದೆಹಲಿ: ಒಂದು ಪ್ರಮುಖ ಕ್ರಮದಲ್ಲಿ, ಸರ್ಕಾರವು ಅಂತಿಮವಾಗಿ ದೇಶದ ಅತ್ಯಂತ ಸವಾಲಿನ ಮತ್ತು ಕಾರ್ಯತಂತ್ರದ ಯೋಜನೆಯನ್ನು ನೈಜ ನಿಯಂತ್ರಣ ರೇಖೆಯ (LAC) ಪಕ್ಕದಲ್ಲಿ ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ಫ್ರಾಂಟಿಯರ್ ಹೆದ್ದಾರಿ ಯೋಜನೆಯ ನಿರ್ಮಾಣಕ್ಕಾಗಿ ಮೊದಲ ಟೆಂಡರ್‌ಗಳನ್ನು ಸರ್ಕಾರ ಗುರುವಾರ ಆಹ್ವಾನಿಸಿದ್ದು, 2027 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ನ್ಯೂಸ್ 18 ವರದಿ ಹೇಳಿದೆ. ಸರ್ಕಾರವು ಆಹ್ವಾನಿಸಿದ ಮೊದಲ ಟೆಂಡರ್‌ಗಳು ಸುಮಾರು 2,200 ಕೋಟಿ ರೂ.ಮೌಲ್ಯದ್ದಾಗಿದೆ. LAC ಪಕ್ಕದಲ್ಲಿ ಹುನ್ಲಿ ಮತ್ತು ಹಯುಲಿಯಾಂಗ್ ನಡುವೆ ಸುಮಾರು […]

ಪ್ರಧಾನಿ ಮೋದಿ ಸ್ನಾರ್ಕ್ಲಿಂಗ್ ಸಾಹಸ: ಗೂಗಲ್ ನಲ್ಲಿ ಲಕ್ಷದ್ವೀಪಕ್ಕಾಗಿ 50,000 ಕ್ಕೂ ಹೆಚ್ಚು ಹುಡುಕಾಟ!!

ಲಕ್ಷದ್ವೀಪ: ಕೇರಳದ ಕರಾವಳಿಯ ಲಕ್ಕಾಡಿವ್ ಸಮುದ್ರದಲ್ಲಿ 36 ಹವಳಗಳು ಮತ್ತು ಹವಳದ ಬಂಡೆಗಳ ಉಷ್ಣವಲಯದ ದ್ವೀಪಸಮೂಹಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಸ್ನಾರ್ಕಿಂಗ್ ಸಹಿತ ಅಲ್ಲಿನ ಮನಮೋಹಕ ಸಮುದ್ರ ತೀರದ ಚಿತ್ರಗಳನ್ನು ಹಂಚಿಕೊಂಡ ಬಳಿಕ ಗೂಗಲ್ ನಲ್ಲಿ ಲಕ್ಷದ್ವೀಪದ ಬಗ್ಗೆ ಹುಡುಕಾಡುವವರ ಸಂಖ್ಯೆ ಹೆಚ್ಚಾಗಿದೆ. ಹೆಸರು ಸೂಚಿಸುವಂತೆ ಲಕ್ಷದ್ವೀಪಗಳ ಸಮೂಹ ಲಕ್ಷದ್ವೀಪ, ಪ್ರಶಾಂತವಾದ ಕಡಲತೀರಗಳು, ನೀಲಿವರ್ಣದ ನೀರು, ಬಿಳಿ ಮರಳುಗಳು, ಸ್ನೇಹಪರ ಜನರು ಮತ್ತು ವಿಪರೀತ ವಾಣಿಜ್ಯೀಕರಣದ ಶೋಷಣೆಯಿಂದ ಸಂರಕ್ಷಿಸಲ್ಪಟ್ಟ ಪ್ರಕೃತಿಯಿಂದಾಗಿ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ […]