ಭಾರತೀಯ ಯೋಧರ ಶೌರ್ಯ, ಬಲಿದಾನ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ ಭದೌರಿಯಾ

ಹೈದರಾಬಾದ್: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ತೋರಿದ ಧೈರ್ಯ, ಸಾಹಸ, ತ್ಯಾಗವನ್ನು ಎಂದಿಗೂ ವ್ಯರ್ಥ ಆಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ದೇಶದ ಜನತೆಗೆ ಭರವಸೆ ನೀಡುತ್ತೇನೆ ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಹೇಳಿದ್ದಾರೆ. ಹೈದರಾಬಾದ್ ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ಸಂಯೋಜಿತ ಪದವಿ ಪರೇಡ್ ನಲ್ಲಿ ಮಾತನಾಡಿದರು. ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ. ಶತ್ರು ದೇಶಗಳು ಗಡಿಯಲ್ಲಿ‌ ನಡೆಸುವ ಚಟುವಟಿಕೆಗಳಿಗೆ ಸೂಕ್ತ ರೀತಿಯಲ್ಲಿ […]

ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಸದ್ಯಕ್ಕಿಲ್ಲ:ಟ್ರಸ್ಟ್

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭಿಸುವ ಯೋಜನೆಯನ್ನು ಸದ್ಯ ಭಾರತ– ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ  ಮುಂದೂಡಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್‌ ತಿಳಿಸಿದೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಗಾಲ್ವನ್‌ ಕಣಿವೆಯಲ್ಲಿ ಭಾರತದ ಯೋಧರು ಹುತಾತ್ಮರಾದ ಬಗ್ಗೆ ಶೋಕ ವ್ಯಕ್ತಪಡಿಸಿರುವ ಟ್ರಸ್ಟ್‌ ಮಂದಿರ ನಿರ್ಮಾಣ ಆರಂಭಿಸುವ ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದಿದೆ.

ಕುವೈಟ್ ನಿಂದ ಯಶಸ್ವಿಯಾಗಿ ತಾಯ್ನಾಡಿಗೆ ತಲುಪಿದ ಖಾಸಗಿ ವಿಮಾನ

ಉಡುಪಿ: ಕುವೈಟ್ ನ ಕರ್ನಾಟಕ ಸಂಘಗಳು ಒಂದುಗೂಡಿ ಅಕ್ಬರ್ ಟ್ರಾವೆಲ್ಸ್ ನ ಸಹಯೋಗದೊಂದಿಗೆ ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ ಕುವೈಟ್ ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸುವ ಸಲುವಾಗಿ ಜಜೀರಾ ಖಾಸಗಿ ವಿಮಾನವು ಯಶಸ್ವಿಯಾಗಿ ಹಾರಾಟ ನಡೆಸಿತು. ಹಿರಿಯ ನಾಗರಿಕರು, ಗರ್ಭಿಣಿ ಸ್ತ್ರೀಯರು, ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿ ನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ 165 ಪ್ರಯಾಣಿಕರನ್ನು ಒಳಗೊಂಡ ಖಾಸಗಿ ವಿಮಾನವು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು […]

ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ: ಭಾರತೀಯ ಯೋಧರ ಗುಂಡಿಗೆ 43 ಚೀನಾ ಯೋಧರು ಬಲಿ

ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ  ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) 45 ವರ್ಷಗಳ ಬಳಿಕ ಚೀನಾ ಭಾರತದ ಸೇನೆಯ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಚೀನಾದ 43 ಸೈನಿಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಖಚಿತಪಡಿಸಿದೆ. […]

ಗಡಿಯಲ್ಲಿ ಚೀನಾ- ಭಾರತ ಮಧ್ಯೆ ಸಂಘರ್ಷ: ಐದು ಚೀನಾ ಯೋಧರನ್ನು ಹೊಡೆದುರುಳಿಸಿದ ಭಾರತ 

ನವದೆಹಲಿ: ಲಡಾಖ್ ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತ ಹಾಗೂ ಚೀನಾ ದೇಶದ ಸೇನಾಪಡೆಯೊಂದಿಗೆ ಸಂಘರ್ಷ ಉಂಟಾಗಿದ್ದು, ಇದರಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಸಹಿತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ ಚೀನಾದ ಐದು ಸೈನಿಕರನ್ನು ಹೊಡೆದುರಳಿಸಿದೆ ಎಂದು ಸೇನಾಪಡೆ ಮೂಲಗಳು ಹೇಳಿವೆ. ಈ ಸಂಘರ್ಷದಲ್ಲಿ ಚೀನಾದ 11 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಸೇನಾಪಡೆ ಅಧಿಕಾರಿಗಳು ಗಲ್ವಾನ್‌ನಲ್ಲಿ ಸಭೆ ನಡೆಸಿದರು. ಭಾರತ […]