Home Trending ಗಡಿಯಲ್ಲಿ ಚೀನಾ- ಭಾರತ ಮಧ್ಯೆ ಸಂಘರ್ಷ: ಐದು ಚೀನಾ ಯೋಧರನ್ನು ಹೊಡೆದುರುಳಿಸಿದ ಭಾರತ 

ಗಡಿಯಲ್ಲಿ ಚೀನಾ- ಭಾರತ ಮಧ್ಯೆ ಸಂಘರ್ಷ: ಐದು ಚೀನಾ ಯೋಧರನ್ನು ಹೊಡೆದುರುಳಿಸಿದ ಭಾರತ 

ನವದೆಹಲಿ: ಲಡಾಖ್ ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತ ಹಾಗೂ ಚೀನಾ ದೇಶದ ಸೇನಾಪಡೆಯೊಂದಿಗೆ ಸಂಘರ್ಷ ಉಂಟಾಗಿದ್ದು, ಇದರಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಸಹಿತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ ಚೀನಾದ ಐದು ಸೈನಿಕರನ್ನು ಹೊಡೆದುರಳಿಸಿದೆ ಎಂದು ಸೇನಾಪಡೆ ಮೂಲಗಳು ಹೇಳಿವೆ.
ಈ ಸಂಘರ್ಷದಲ್ಲಿ ಚೀನಾದ 11 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಸೇನಾಪಡೆ ಅಧಿಕಾರಿಗಳು ಗಲ್ವಾನ್‌ನಲ್ಲಿ ಸಭೆ ನಡೆಸಿದರು.
ಭಾರತ ಮತ್ತು ಚೀನಾದ ಪಡೆಗಳು ಕೆಲವು ವಾರಗಳಿಂದ ಗಲ್ವಾನ್‌ ಕಣಿವೆಯಲ್ಲಿ ಬಹುಸಂಖ್ಯೆಯಲ್ಲಿ ಜಮಾವಣೆಗೊಂಡಿವೆ.
error: Content is protected !!