ಬೆಂಗಳೂರಿನಲ್ಲಿ ದೇಶದಲ್ಲೇ ಅತೀದೊಡ್ಡ ಕೊವಿಡ್ ಕೇರ್ ಸೆಂಟರ್ ನಿರ್ಮಾಣ: ಒಂದು ವಾರದೊಳಗೆ ಸೋಂಕಿತರ ಚಿಕಿತ್ಸೆಗೆ ಮುಕ್ತ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇದೀಗ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ಉತ್ತರ ತಾಲ್ಲೂಕಿನ ಮಾದವಾರ ಬಳಿಯ ಬಿಐಇಸಿಯಲ್ಲಿ 10,100 ಬೆಡ್ ಗಳ ಕೊವಿಡ್ ಕೇರ್ ಸೆಂಟರ್ ಅನ್ನು ಸಿದ್ಧಪಡಿಸಿದೆ. ಇಂದು ಕೊವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕೊವಿಡ್ ಕೇರ್ ಸೆಂಟರ್ ಒಂದು ವಾರದೊಳಗೆ ಸೋಂಕಿತರ ಚಿಕಿತ್ಸೆಗೆ ಮುಕ್ತವಾಗಲಿದೆ. ಇಲ್ಲಿ ಎಲ್ಲ ರೀತಿಯ ಅಗತ್ಯ ಮೂಲಭೂತ […]

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ವಿಕಾಸ್ ದುಬೆ ದೇವಾಲಯದಲ್ಲಿ ಬಂಧನ

ಭೋಪಾಲ್: ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಉಜ್ಜಯನಿ ದೇವಾಲಯವೊಂದರಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ನಿನ್ನೆ ಪೊಲೀಸರ ಕಾರ್ಯಾಚರಣೆಯಲ್ಲಿ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು.

ಫೇಸ್ ಬುಕ್ ಸಹಿತ 89 ಆ್ಯಪ್ ಗಳನ್ನು ತೆಗೆಯುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ

ಫೇಸ್ ಬುಕ್ ಸಹಿತ 89 ಆ್ಯಪ್ ಗಳನ್ನು ತೆಗೆಯುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ ನವದೆಹಲಿ: ಭಾರತೀಯ ಸೇನೆ ಸಿಬ್ಬಂದಿಗೆ ಫೇಸ್‌ಬುಕ್‌, ಪಬ್‌ಜಿ, ಟಿಕ್‌ಟಾಕ್‌ ಸೇರಿದಂತೆ 89 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ. ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ಈಗಾಗಲೇ ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌, ಯುಸಿ ನ್ಯೂಸ್, ಶೇರ್‌ಇಟ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಚೀನಾ ಆ್ಯಪ್‌ಗಳನ್ನು ಒಳಗೊಂಡಂತೆ […]

ಚೀನಾ ಆಪ್ ಗಳ ನಿಷೇಧದ ಬಳಿಕ ದೇಶಿಯ ಆಪ್ ಗಳಿಗೆ ಬಹುಬೇಡಿಕೆ: 25 ಮಿಲಿಯನ್ ಡೌನ್ ಲೋಡ್ಸ್ ಪಡೆದ ದೇಸಿ ಮಿತ್ರೋನ್ ಆಪ್ 

ನವದೆಹಲಿ: ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾದ ಆಪ್ ಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದೀಗ ದೇಸಿ ಆಪ್ ಗಳಿಗೆ ಬಹುಬೇಡಿಕೆ ಬಂದಿದೆ. ಅದರಂತೆ ಮಿತ್ರೋನ್ ದೇಶಿಯ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್‌ನಿಂದ 25 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಸಾಧಿಸಿದೆ ಎಂದು ವಿಡಿಯೋ ಅಪ್ಲಿಕೇಶನ್ ಮಿತ್ರೋನ್ ಮಂಗಳವಾರ ತಿಳಿಸಿದೆ. ಚೀನಾ ಆಪ್ ಗಳಿಗೆ ಪರ್ಯಾಯವಾಗಿ ಚಿಂಗಾರಿ, ರೊಪೊಸೊ ಮತ್ತು ಮಿಟ್ರಾನ್ ಮೊದಲಾದ ದೇಶಿ ಅಪ್ಲಿಕೇಶನ್ ಬಹುಬೇಡಿಕೆಯ ಆಪ್ ಗಳಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಭಾರತವು ಕಳೆದ ತಿಂಗಳ […]

ಸಂಕಷ್ಟದಲ್ಲಿ ಸಿಲುಕಿದ್ದ ಉದ್ಯೋಗಿಗಳನ್ನು ವಾಪಾಸ್ ಕರೆಸಿಕೊಂಡ ಇನ್ಫೋಸಿಸ್

ಬೆಂಗಳೂರು: ಅಮೆರಿಕಾದಲ್ಲಿ ಸಿಲುಕಿದ್ದ 200 ಮಂದಿ ಭಾರತೀಯ ಉದ್ಯೋಗಿಗಳನ್ನು ಇನ್ಫೋಸಿಸ್ ಸಂಸ್ಥೆ ವಾಪಸ್ ಕರೆಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕಾದಲ್ಲಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಭಾರತೀಯರು ಹಾಗೂ ಅವರ ಕುಟುಂಬವನ್ನು ಸಂಸ್ಥೆ ವಾಪಸ್ ಕರೆ‌‌ ತಂದಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಿಶೇಷ ಚಾರ್ಟೆಡ್ ವಿಮಾನದಲ್ಲಿ  ಕರೆತರಲಾಗಿದೆ ಎಂದು ಇನ್ಫೋಸಿಸ್ ಉಪಾಧ್ಯಕ್ಷ ಸಮೀರ್ ಗೋಸವಿ ತಿಳಿಸಿದ್ದಾರೆ.