ಫೇಸ್ ಬುಕ್ ಸಹಿತ 89 ಆ್ಯಪ್ ಗಳನ್ನು ತೆಗೆಯುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ

ಫೇಸ್ ಬುಕ್ ಸಹಿತ 89 ಆ್ಯಪ್ ಗಳನ್ನು ತೆಗೆಯುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ
ನವದೆಹಲಿ: ಭಾರತೀಯ ಸೇನೆ ಸಿಬ್ಬಂದಿಗೆ ಫೇಸ್‌ಬುಕ್‌, ಪಬ್‌ಜಿ, ಟಿಕ್‌ಟಾಕ್‌ ಸೇರಿದಂತೆ 89 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ. ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಈಗಾಗಲೇ ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌, ಯುಸಿ ನ್ಯೂಸ್, ಶೇರ್‌ಇಟ್‌ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಚೀನಾ ಆ್ಯಪ್‌ಗಳನ್ನು ಒಳಗೊಂಡಂತೆ ಒಟ್ಟು 89 ಆ್ಯಪ್‌ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.