ಎರಡು ವರ್ಷದೊಳಗೆ ಕೊರೊನಾ ಪಿಡುಗು ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ವಿಶ್ವಾಸ

ಜಿನಿವಾ: ಕೊರೊನಾ ಸೋಂಕಿಗೆ ಜಗತ್ತು ಲಸಿಕೆ ಕಂಡುಹಿಡಿಯಲು ಯಶಸ್ವಿಯಾದರೆ, ಈ ಮಹಾಮಾರಿ ಸೋಂಕನ್ನು‌ ಎರಡು ವರ್ಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಕೊನೆಯಾಗಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಹಾಗೂ ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣದಿಂದ ಕೊರೊನಾ ಸೋಂಕು ಬಹುಬೇಗನೆ ವ್ಯಾಪಿಸುತ್ತಿದೆ ಎಂದು ಹೇಳಿದ್ದಾರೆ. ಕೊರೊನಾ […]

ದೆಹಲಿಯಲ್ಲಿ ಐಸಿಸ್ ಉಗ್ರನ ಸೆರೆ: ವಿಧ್ವಂಸಕ ಕೃತ್ಯ ನಡೆಸಲು ಸಂಗ್ರಹಿಸಿದ್ದ ಭಾರಿ ಪ್ರಮಾಣದ ಸ್ಫೋಟಕ ವಶ

ನವದೆಹಲಿ: ಸುಧಾರಿತ ಸ್ಫೋಟಕ ಹೊಂದಿದ್ದ ಐಸಿಸ್ ಉಗ್ರನನ್ನು ದೆಹಲಿಯ ರಿಡ್ಜ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಪೊಲೀಸರು ಮತ್ತು ಉಗ್ರನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬಳಿಕ ಐಸಿಸ್ ನಂಟು ಹೊಂದಿದ್ದ ಉತ್ತರ ಪ್ರದೇಶ ಮೂಲದ ಅಬ್ದುಲ್ ಯೂಸೂಫ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ಆತನಿಂದ ಭಾರಿ ಪ್ರಮಾಣದ ಸ್ಫೋಟಕ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಗ್ರರು ದೆಹಲಿಯಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ದೆಹಲಿಯಲ್ಲಿ […]

ಅಯೋಧ್ಯೆ: ರಾಮಮಂದಿರಕ್ಕೆ ಕಲ್ಲುಗಳ ಬಳಕೆ, ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಮಂದಿರಕ್ಕೆ ಏನೂ ಆಗದು- ಚಂಪತ್‌ ರಾಯ್‌

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೂರುವರೆ ವರ್ಷಗಳೊಳಗೆ ಮಂದಿರ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಈ ಕುರಿತು ಟ್ರಸ್ಟ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಮಾಹಿತಿ ನೀಡಲಾಗಿದೆ. ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್‌ಐ), ಚೆನ್ನೈನ ಐಐಟಿ ಮತ್ತು ‘ಎಲ್ ಅ್ಯಂಡ್‌ ಟಿ (ಲಾರ್ಸೆನ್ ಮತ್ತು ಟೌಬ್ರೊ)’ ಎಂಜಿನಿಯರ್‌ಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ ಎಂದು […]

ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಅಗ್ನಿದುರಂತ: 9 ಸಿಬ್ಬಂದಿ ಸಾವು

ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಸಿಲುಕಿಕೊಂಡಿದ್ದ 9 ಮಂದಿ ಸಿಬ್ಬಂದಿ ಕೂಡ ಮೃತಪಟ್ಟಿದ್ದು, ಇಬ್ಬರು ಸಹಾಯಕ ಎಂಜಿನಿಯರ್‌ಗಳ ಮೃತದೇಹಗಳನ್ನು ರಕ್ಷಣಾ ತಂಡಗಳು ಹೊರತೆಗೆದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಸುರಂಗದಿಂದ ಈಗಲೂ ಹೊಗೆಹೊರಬರುತ್ತಿದ್ದು, ಹೊಗೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಗಳು ಸಾಗಿವೆ. ತೆಲಂಗಾಣ-ಆಂಧ್ರ ಪ್ರದೇಶ ಗಡಿಯಲ್ಲಿರುವ ಈ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಗುರುವಾರ ರಾತ್ರಿ ಶಾರ್ಟ್‌ ಸರ್ಕೀಟ್ ಕಾರಣದಿಂದ ಬೆಂಕಿ […]

ಎಸ್ ಪಿಬಿ ಚೇತರಿಕೆಗೆ ವಿಶ್ವದಾದ್ಯಂತ ಸಂಗೀತ ಪ್ರಿಯರಿಂದ ಪ್ರಾರ್ಥನೆ

ಚೆನ್ನೈ: ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ಶೀಘ್ರ ಚೇತರಿಕೆಗಾಗಿ ವಿಶ್ವದಾದ್ಯಂತ ಎಸ್ ಪಿಬಿ ಅಭಿಮಾನಿಗಳು ಹಾಗೂ ಸಂಗೀತ ಪ್ರಿಯರಿಂದ ಪ್ರಾರ್ಥನೆ. ಸಂಗೀತ ಗಾಯನದ ಮೂಲಕ ಎಸ್ ಪಿಬಿ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್ ಸಹಿತ ಭಾರತೀಯ ಸಂಗೀತ ದಿಗ್ಗಜರು, ಚಿತ್ರರಂಗದವರು ಸಾಥ್ ನೀಡಿದ್ದಾರೆ. ಸದ್ಯ ಎಸ್ ಪಿಬಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಬದಲಾವಣೆ ಆಗಿಲ್ಲ. ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶದ […]