ಅರುಣಾಚಲ ಪ್ರದೇಶ: ನಾಪತ್ತೆಯಾಗಿದ್ದ ಐವರು ಯುವಕರನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಇಟಾನಗರ: ಅರುಣಾಚಲ ಪ್ರದೇಶದ ಸುಬನ್‌ಸಿರಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐವರು ಯುವಕರು ಪತ್ತೆಯಾಗಿದ್ದು, ಇವರನ್ನು ಚೀನಾ ಸೇನೆಯು ಶನಿವಾರ ಬಿಡುಗಡೆ ಮಾಡಿದೆ. ಅರುಣಾಚಲಪ್ರದೇಶದ ಅಪ್ಪರ್ ಸುಬನ್‌ಸಿರಿ ಜಿಲ್ಲೆಯ ಮೆಕ್‌ಮೋಹನ್ ಗಡಿರೇಖೆ ಬಳಿ ಸೆ. 1ರಂದು ಬೇಟೆಯಾಡಲು ಕಾಡಿಗೆ ತೆರಳಿದ್ದ ಈ ಐವರು ಯುವಕರು ನಾಪತ್ತೆಯಾಗಿದ್ದರು. ಬಳಿಕ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಿಂದ (ಪಿಎಲ್‌ಎ) ಅಪಹರಣಕ್ಕೊಳಗಾಗಿದ್ದರು ಎನ್ನಲಾಗಿತ್ತು. ಯುವಕರು ನಾಪತ್ತೆಯಾಗಿದ್ದ ವಿಷಯವನ್ನು ಭಾರತೀಯ ಸೇನೆಯು ಪಿಎಲ್‌ಎ ಗಮನಕ್ಕೆ ತಂದಿತ್ತು. ಯುವಕರನ್ನು ಪತ್ತೆ ಮಾಡಿದ ಚೀನಾ, ಅವರು ತಮ್ಮಲ್ಲಿ ಇರುವುದನ್ನು ದೃಢಪಡಿಸಿತ್ತು. […]
ಜಾಮೀನು ಅರ್ಜಿ ವಜಾ: ರಿಯಾ ಚಕ್ರವರ್ತಿಗೆ ಜೈಲೇ ಗತಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಸಂಸ್ಥೆಯಿಂದ (ಎನ್‌ಸಿಬಿ) ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಇಂದು ವಜಾಗೊಳಿಸಿದೆ. ಮಂಗಳವಾರ ಬಂಧನಗೊಂಡ ರಿಯಾ ಅವರಿಗೆ ನ್ಯಾಯಾಲಯ ಸೆ. 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ರಿಯಾ ಚಕ್ರವರ್ತಿ ಪರ ವಕೀಲರು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ […]
ಸಾಲ ಮರುಪಾವತಿ ಅವಧಿ ಸೆ. 28ರ ವರೆಗೆ ಮುಂದೂಡಿಕೆ

ನವದೆಹಲಿ: ಕೋವಿಡ್ 19 ಸಂಕಷ್ಟದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಸಾಲ ಮರುಪಾವತಿ ವಿನಾಯ್ತಿ (ಮೊರಟೊರಿಯಂ ಅವಧಿ) ಅವಧಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 28ರ ವರೆಗೆ ವಿಸ್ತರಿಸಿದೆ. ಈ ಹಿಂದೆ ಸಾಲ ಮರುಪಾವತಿ ಅವಧಿಯನ್ನು ಆಗಸ್ಟ್ 31ಕ್ಕೆ ಅಂತಿಮಗೊಳಿಸಲಾಗಿತ್ತು. ಜನರು ಇನ್ನೂ ಕೋವಿಡ್ ಸಂಕಷ್ಟಗಳಲ್ಲಿ ಇದ್ದು, ಮಾರಟೊರಿಯಂ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ಸಾಲ ಮರುಪಾವತಿ ಕುರಿತಂತೆ ಸಲ್ಲಿಕೆಯಾಗಿರುವ ಪಿಐಎಲ್ ಗಳನ್ನು ಮನಗಂಡಿರುವ ಸುಪ್ರೀಂ ಕೋರ್ಟ್, ಸಾಲ ಮರುಪಾವತಿ […]
ಭಾರತೀಯ ವಾಯುಪಡೆಗೆ ಐದು ರಫೇಲ್ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆ

ಅಂಬಾಲಾ: ಭಾರತೀಯ ವಾಯುಪಡೆಗೆ ಇಂದು ಐದು ರಫೇಲ್ ಯುದ್ಧವಿಮಾನಗಳು ಅಧಿಕೃತವಾಗಿ ಸೇರ್ಪಡೆಗೊಂಡಿತು. ಇಲ್ಲಿರುವ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ನಡೆಯಿತು. ಗಡಿ ವಿಷಯವಾಗಿ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟಿರುವ ಸಂದರ್ಭದಲ್ಲಿಯೇ ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಿದ್ದು, ವಾಯುಪಡೆಗೆ ಮತ್ತಷ್ಟು ಬಲ ನೀಡಿದೆ. ಈ ಸಂದರ್ಭದಲ್ಲಿ ಸಚಿವ ರಾಜನಾಥ್‌ಸಿಂಗ್, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ […]
ನಟಿ ರಿಯಾ ಚಕ್ರವರ್ತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಮುಂಬೈನ ಮ್ಯಾಜೀಸ್ಟೆಟರ್ ನ್ಯಾಯಾಲಯ ಸೆ. 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಡ್ರಗ್ಸ್ ಜಾಲದ ನಂಟಿನ ಆರೋಪದಡಿ ರಿಯಾಳನ್ನು ಬಂಧಿಸಿರುವ ಎನ್ ಸಿಬಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿರುವ ನ್ಯಾಯಾಲಯ ರಿಯಾಳಿಗೆ […]