ಅರುಣಾಚಲ ಪ್ರದೇಶ: ನಾಪತ್ತೆಯಾಗಿದ್ದ ಐವರು ಯುವಕರನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಇಟಾನಗರ: ಅರುಣಾಚಲ ಪ್ರದೇಶದ ಸುಬನ್‌ಸಿರಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐವರು ಯುವಕರು ಪತ್ತೆಯಾಗಿದ್ದು, ಇವರನ್ನು ಚೀನಾ ಸೇನೆಯು ಶನಿವಾರ ಬಿಡುಗಡೆ ಮಾಡಿದೆ.

ಅರುಣಾಚಲಪ್ರದೇಶದ ಅಪ್ಪರ್‌ ಸುಬನ್‌ಸಿರಿ ಜಿಲ್ಲೆಯ ಮೆಕ್‌ಮೋಹನ್‌ ಗಡಿರೇಖೆ ಬಳಿ ಸೆ. 1ರಂದು ಬೇಟೆಯಾಡಲು ಕಾಡಿಗೆ ತೆರಳಿದ್ದ ಈ ಐವರು ಯುವಕರು ನಾಪತ್ತೆಯಾಗಿದ್ದರು. ಬಳಿಕ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಿಂದ (ಪಿಎಲ್‌ಎ) ಅಪಹರಣಕ್ಕೊಳಗಾಗಿದ್ದರು ಎನ್ನಲಾಗಿತ್ತು.

ಯುವಕರು ನಾಪತ್ತೆಯಾಗಿದ್ದ ವಿಷಯವನ್ನು ಭಾರತೀಯ ಸೇನೆಯು ಪಿಎಲ್‌ಎ ಗಮನಕ್ಕೆ ತಂದಿತ್ತು. ಯುವಕರನ್ನು ಪತ್ತೆ ಮಾಡಿದ ಚೀನಾ, ಅವರು ತಮ್ಮಲ್ಲಿ ಇರುವುದನ್ನು ದೃಢಪಡಿಸಿತ್ತು.

ಇಟಾನಗರದಿಂದ ಸಾವಿರ ಕಿ.ಮೀ ದೂರದಲ್ಲಿರುವ ಅಂಜಾವ್‌ ಜಿಲ್ಲೆಯಲ್ಲಿ ಯುವಕರನ್ನು ಪಿಎಲ್‌ಎ ಸೇನೆಗೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.