ದೇಶದಲ್ಲಿ ಇಂಧನ ದರ ಏರಿಕೆ: ಮುಂಬೈನಲ್ಲಿ 100ರೂ. ಗಡಿ ದಾಟಿದ ಲೀಟರ್ ಪೆಟ್ರೋಲ್ ದರ

ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ದೇಶದಲ್ಲೂ ಇಂಧನ ದರ ಏರಿಕೆಯಾಗಿದೆ. ಮುಂಬೈ ನಲ್ಲಿ ಮೊದಲ ಬಾರಿಗೆ ಲೀಟರ್ ಪೆಟ್ರೋಲ್ ದರ 100ರೂ. ಗಡಿ ದಾಟಿದೆ. ಲೀಟರ್ ಪೆಟ್ರೋಲ್ ಗೆ 26 ಪೈಸೆ, ಡೀಸೆಲ್ ಬೆಲೆ 28 ಪೈಸೆ ಹೆಚ್ಚಳವಾಗಿದೆ. ಮುಂಬೈ ನಲ್ಲಿ ಲೀಟರ್ ಪೆಟ್ರೋಲ್ ದರ 100.19ರೂ.ಕ್ಕೆ ಏರಿಕೆಯಾಗಿದ್ದು,  ಡೀಸೆಲ್ ದರ 92. 17ರೂ. ಗೆ ತಲುಪಿದೆ. ಹಾಗೆಯೇ ದೆಹಲಿಯಲ್ಲಿ  ಪೆಟ್ರೋಲ್ ದರ ಲೀಟರ್ ಗೆ 93.94ರೂ. ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಗೆ […]

ಐಪಿಎಲ್ ಉಳಿದ ಪಂದ್ಯಗಳನ್ನು ಮುಂದುವರಿಸುವ ಬಗ್ಗೆ ನಾಳೆ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೊವೀಡ್ ನಿಂದ ಮುಂದೂಡಿರುವ ಐಪಿಎಲ್‌ ಕ್ರಿಕೆಟ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರಿಸುವ ಬಗ್ಗೆ ಮೇ 29ರಂದು ನಿರ್ಧಾರವಾಗಲಿದ್ದು, ಬಿಸಿಸಿಐ ಈ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಬಿಸಿಸಿಐಯು ಅಂತರರಾಷ್ಟ್ರೀಯ ಟೂರ್ನಿಗಳ ನಡುವೆ ಸೆ.15ರಿಂದ ಅ.15ರ ಅವಧಿಯ ನಡುವೆ ಸಿಗುವ ಸಮಯಾವಕಾಶದಲ್ಲಿ ಉಳಿದಿರುವ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸಿವೆ. ನಾಳೆ ನಡೆಯಲಿರುವ ಸಭೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮತ್ತು ಕೋವಿಡ್ ನ ಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ […]

ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ತಂಡನ್‌

ವಾಷಿಂಗ್ಟನ್:  ಭಾರತ ಮೂಲದ ಸಂಜಾತೆ ನೀರಾ ತಂಡನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದಾರೆ. ರಿಪಬ್ಲಿಕನ್‌ ಸೆನೆಟರ್‌ಗಳ ತೀವ್ರ ವಿರೋಧದಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಶ್ವೇತ ಭವನದ ಬಜೆಟ್‌ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮ ನಿರ್ದೇಶವನ್ನು ನೀರಾ ತಂಡನ್‌  ಹಿಂಪಡೆದಿದ್ದರು. ತಂಡನ್‌ ಅವರಿಗೆ ಎರಡು ಹೊಣೆಗಾರಿಕೆ ನೀಡಲಾಗಿದೆ. ಮೊದಲನೆಯದು ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ಎರಡನೆಯದು ‘ಅಫೋರ್ಡಬಲ್ ಕೇರ್‌ ಆ್ಯಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ […]

ಮೋದಿ ಸರ್ಕಾರ ಕೋವಿಡ್ ಲಸಿಕೆ ಪೂರೈಕೆಯನ್ನು ತನಗೆ ಬೇಕಾದಂತೆ ನಿಯಂತ್ರಿಸುತ್ತಿದೆ: ಮನೀಶ್ ಸಿಸೋಡಿಯಾ

ದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಪೂರೈಕೆಯನ್ನು ತನಗೆ ಬೇಕಾದಂತೆ ನಿಯಂತ್ರಿಸುತ್ತಿದೆ ಎಂದು  ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಹೇಳಿದ್ದಾರೆ ರಾಷ್ಟ್ರ ರಾಜಧಾನಿಗೆ “ಹೆಚ್ಚುವರಿ” ಕೋವಾಕ್ಸಿನ್ ಡೋಸ್ ನೀಡಲು ಸಾಧ್ಯವಿಲ್ಲ ಎಂದು ಲಸಿಕೆ ತಯಾರಕ ಭಾರತ್ ಬಯೋಟೆಕ್ ದೆಹಲಿ ಸರ್ಕಾರಕ್ಕೆ ತಿಳಿಸಿದೆ ಇದು ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಪೂರೈಕೆ ನಿಯಂತ್ರಿಸುತ್ತಿರುವುದಕ್ಕೆ ಉದಾಹರಣೆ ಎಂದವರು ಹೇಳಿದ್ದಾರೆ. ದೆಹಲಿಯಲ್ಲಿ ಕೋವಾಕ್ಸಿನ್ ದಾಸ್ತಾನು ಮುಗಿದಿದೆ.  17 ಶಾಲೆಗಳಲ್ಲಿ ಸ್ಥಾಪಿಸಲಾದ ಸುಮಾರು 100 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ ಎಂದು […]

ನಮ್ಮ ದೇಶದಲ್ಲಿ ಕೊರೋನಾ ಸೋಂಕೇ ಇಲ್ಲ ಎಂದು ವಿಶ್ವ ಸಂಸ್ಥೆಗೆ ಹೇಳಿದ ದೇಶ ಯಾವುದು?

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.ಅಬ್ಬಾ ಇದೇನಪ್ಪಾ ಜಗತ್ತೇ ಕೊರೋನಾದಿಂದ ತತ್ತರಿಸುತ್ತಿದ್ದರೆ ಅದ್ಯಾವ ದೇಶದಲ್ಲಿ ಕೋರೋನಾನೇ ಇಲ್ವಂತೆ ಅಂತ ಅಚ್ಚರಿ ಪಡ್ತಿದ್ದೀರಾ. ಹೌದಂತೆ. ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದ್ದು ಎಲ್ಲೆಡೆ ಅಚ್ಚರಿ ವ್ಯಕ್ತವಾಗಿದೆ. ಏಪ್ರಿಲ್ ನಿಂದ ಈ […]