ಐಪಿಎಲ್ ಉಳಿದ ಪಂದ್ಯಗಳನ್ನು ಮುಂದುವರಿಸುವ ಬಗ್ಗೆ ನಾಳೆ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೊವೀಡ್ ನಿಂದ ಮುಂದೂಡಿರುವ ಐಪಿಎಲ್‌ ಕ್ರಿಕೆಟ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರಿಸುವ ಬಗ್ಗೆ ಮೇ 29ರಂದು ನಿರ್ಧಾರವಾಗಲಿದ್ದು, ಬಿಸಿಸಿಐ ಈ ಕುರಿತು ವಿಶೇಷ ಚರ್ಚೆ ನಡೆಯಲಿದೆ.

ಬಿಸಿಸಿಐಯು ಅಂತರರಾಷ್ಟ್ರೀಯ ಟೂರ್ನಿಗಳ ನಡುವೆ ಸೆ.15ರಿಂದ ಅ.15ರ ಅವಧಿಯ ನಡುವೆ ಸಿಗುವ ಸಮಯಾವಕಾಶದಲ್ಲಿ ಉಳಿದಿರುವ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸಿವೆ.

ನಾಳೆ ನಡೆಯಲಿರುವ ಸಭೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮತ್ತು ಕೋವಿಡ್ ನ ಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಐಸಿಸಿಐನ್ನು ಕೋರಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ಸಭೆಯಲ್ಲಿ ಬಯೊಬಬಲ್, ವಿದೇಶಿ ಆಟಗಾರರ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.