HomeTrendingದೇಶದಲ್ಲಿ ಇಂಧನ ದರ ಏರಿಕೆ: ಮುಂಬೈನಲ್ಲಿ 100ರೂ. ಗಡಿ ದಾಟಿದ ಲೀಟರ್ ಪೆಟ್ರೋಲ್ ದರ

ದೇಶದಲ್ಲಿ ಇಂಧನ ದರ ಏರಿಕೆ: ಮುಂಬೈನಲ್ಲಿ 100ರೂ. ಗಡಿ ದಾಟಿದ ಲೀಟರ್ ಪೆಟ್ರೋಲ್ ದರ

ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ದೇಶದಲ್ಲೂ ಇಂಧನ ದರ ಏರಿಕೆಯಾಗಿದೆ.
ಮುಂಬೈ ನಲ್ಲಿ ಮೊದಲ ಬಾರಿಗೆ ಲೀಟರ್ ಪೆಟ್ರೋಲ್ ದರ 100ರೂ. ಗಡಿ ದಾಟಿದೆ. ಲೀಟರ್ ಪೆಟ್ರೋಲ್ ಗೆ 26 ಪೈಸೆ, ಡೀಸೆಲ್ ಬೆಲೆ 28 ಪೈಸೆ ಹೆಚ್ಚಳವಾಗಿದೆ.
ಮುಂಬೈ ನಲ್ಲಿ ಲೀಟರ್ ಪೆಟ್ರೋಲ್ ದರ 100.19ರೂ.ಕ್ಕೆ ಏರಿಕೆಯಾಗಿದ್ದು,  ಡೀಸೆಲ್ ದರ 92. 17ರೂ. ಗೆ ತಲುಪಿದೆ.
ಹಾಗೆಯೇ ದೆಹಲಿಯಲ್ಲಿ  ಪೆಟ್ರೋಲ್ ದರ ಲೀಟರ್ ಗೆ 93.94ರೂ. ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಗೆ 84.89 ರೂ. ಏರಿಕೆಯಾಗಿದೆ.
ಕೊಲ್ಕತ್ತಾದಲ್ಲಿ ಡೀಸೆಲ್ ದರ 87.74 ರೂ. ಆಗಿದ್ದು, ಪೆಟ್ರೋಲ್ ಲೀಟರ್ ದರ 93.97ರೂ. ಗೆ ತಲುಪಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 96.80ರೂ. ಗೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್ ದರ 89.70ರೂ. ಗೆ ಏರಿಕೆಯಾಗಿದೆ.
error: Content is protected !!