ಅಜಯ್ ದೇವಗನ್ v/s ಕಿಚ್ಚ ಸುದೀಪ್ ಭಾಷಾ ಯುದ್ದ: ಭಾಷಾ ವಿಭಜನೆ ಬೇಡ ಎಂದ ಸೋನು ನಿಗಮ್

ಹೊಸದಿಲ್ಲಿ: ರಾಷ್ಟ್ರ ಭಾಷೆಯಾಗಿ ಹಿಂದಿ ವಿವಾದದ ನಡುವೆಯೇ ಈ ವಿಷಯದ ಬಗ್ಗೆ ಗಾಯಕ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋನು ನಿಗಮ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬೀಸ್ಟ್ ಸ್ಟೂಡಿಯೋಸ್ ನ ಸ್ಥಾಪಕ ಮತ್ತು ಸಿಇಒ ಸುಶಾಂತ್ ಮೆಹ್ತಾ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಲು ಕೇಳಿದಾಗ, ಗಾಯಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸೋನು ನಿಗಮ್, “ನನ್ನ ಜ್ಞಾನದ ಪ್ರಕಾರ, ಭಾರತದ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಬರೆಯಲಾಗಿಲ್ಲ, ನಾನು ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿದ್ದೇನೆ. ಹಿಂದಿ […]

ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ ಮನವಿ ಮಾಡಿದ್ದೇವೆ: ಪ್ರಧಾನಿ ಮೋದಿ

“ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮ ಮತ್ತು ಸಮಸ್ಯೆಗೆ ಪರಿಹಾರಕ್ಕಾಗಿ ಸಂವಾದ ಮತ್ತು ಕಾರ್ಯತಂತ್ರದ ಹಾದಿಯನ್ನು ಹಿಡಿಯಲು ನಾವು ಮನವಿ ಮಾಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ಭೇಟಿಯಾದರು. ಕೋಪನ್ ಹ್ಯಾಗನ್ ನಲ್ಲಿ ಉಭಯ ಸರ್ಕಾರಗಳು ಉದ್ದೇಶ ಪತ್ರಗಳು ಮತ್ತು ತಿಳುವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು. ಈ ಸಭೆಯಲ್ಲಿ, ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಡೆನ್ಮಾರ್ಕ್ ಮತ್ತು ಇಡೀ ಯೂರೋಪಿಯನ್ ಒಕ್ಕೂಟವು ಉಕ್ರೇನ್ ಮೇಲೆ […]

ದೇಶದ ಗಡಿ ತಂಟೆಗೆ ಬರುವವರಿಗೆ ಅಮೇರಿಕಾ, ಇಸ್ರೇಲ್ ಮಾದರಿ ಉತ್ತರ: ಅಮಿತ್ ಶಾ

ಬೆಂಗಳೂರು: ದೇಶದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತವು ಅಮೇರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದ್ದಾರೆ. ಯಾರಾದರೂ ತಮ್ಮ ಗಡಿ ಮತ್ತು ಮಿಲಿಟರಿಯ ತಂಟೆಗೆ ಬಂದಾಗ ಕೇವಲ ಎರಡು ರಾಷ್ಟ್ರಗಳು ಸಂಯುಕ್ತ ಅಮೇರಿಕಾ ಮತ್ತು ಇಸ್ರೇಲ್ ಗಳು ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ, ನಮ್ಮ ಮಹಾನ್ ರಾಷ್ಟ್ರ ಭಾರತವು ಕೂಡಾ ಆ ಗುಂಪಿಗೆ ಸೇರಿದೆ ಎಂದು ನೃಪತುಂಗ ವಿಶ್ವವಿದ್ಯಾನಿಲಯ, ಅದರ […]

ನೀಟ್ 2022: ನೋಂದಣಿ ದಿನಾಂಕ ಮೇ 15 ರವರೆಗೆ ವಿಸ್ತರಣೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ ನೋಂದಣಿ ಗಡುವನ್ನು ವಿಸ್ತರಿಸಿದೆ. 2022 ರ ನೀಟ್ ಅರ್ಜಿ ಪ್ರಕ್ರಿಯೆಯನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಮೊದಲು ನೀಟ್ ಪದವಿಪೂರ್ವ-2022 ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನಾಂಕ ಮೇ 6 ಆಗಿತ್ತು. ವೈದ್ಯಕೀಯ ಆಕಾಂಕ್ಷಿಗಳು ಎನ್.ಟಿ.ಎ ನೀಟ್ ಯುಜಿ ಗಾಗಿ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. ಜುಲೈ 17 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು 200 […]

ದುಬೈ ಅನ್ನು ಹಿಂದಿಕ್ಕಿದ ದೆಹಲಿ ವಿಮಾನ ನಿಲ್ದಾಣ: ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ!

ದೆಹಲಿ: ಜಾಗತಿಕ ಟ್ರಾವೆಲ್ ಡೇಟಾ ಪೂರೈಕೆದಾರರಾದ ಒಫೀಷಿಯಲ್ ಏರ್‌ಲೈನ್ ಗೈಡ್ ಅಧ್ಯಯನಗಳ ಪ್ರಕಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ(ಮಾರ್ಚ್ 2022 ರಲ್ಲಿ). ಓಎಜಿ ಪ್ರಕಾರ ಫೆಬ್ರವರಿ 2022ರಲ್ಲಿ ಜಿ ಎಮ್ ಆರ್ ಚಾಲಿತ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿತ್ತು, ಮತ್ತು ಶ್ರೇಯಾಂಕದಲ್ಲಿ ಮುಂಬಡ್ತಿಯನ್ನು ಹೊಂದಲು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿತು. ಸಂಯುಕ್ತ ಅಮೇರಿಕಾದ ಅಟ್ಲಾಂಟಾ ವಿಮಾನ ನಿಲ್ದಾಣವು […]