ಯೋಗಿ ಆದಿತ್ಯನಾಥರಿಂದ ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ (ಜೂನ್ 1) ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹದ ಪೂಜೆಯನ್ನು ನೆರವೇರಿಸಿ ಶಂಕುಸ್ಥಾಪನೆ ಮಾಡಿದರು. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಹಾಗೂ ಅಯೋಧ್ಯೆಯ ಸಂತರು ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು. #WATCH | Uttar Pradesh Chief Minister Yogi Adityanath performs 'poojan' of Garbhagriha at Ayodhya's Ram Mandir. pic.twitter.com/DFe98HUWeY — ANI UP/Uttarakhand (@ANINewsUP) June 1, 2022 ರಾಮಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5, 2020 ರಂದು […]
ಯು ಪಿ ಎಸ್ ಸಿ ಫಲಿತಾಂಶ: ಬಾಲಕಿಯರದ್ದೇ ಮೇಲುಗೈ, ಮೊದಲ ಮೂರು ಸ್ಥಾನಗಳು ಹುಡುಗಿಯರ ಪಾಲು

ಸೋಮವಾರ ಯು ಪಿ ಎಸ್ ಸಿ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಮೂರು ಸ್ಥಾನಗಳನ್ನು ಹುಡುಗಿಯರು ಪಡೆದುಕೊಂಡಿದ್ದಾರೆ. ಶ್ರುತಿ ಶರ್ಮಾ ಮೊದಲ ಸ್ಥಾನ, ಅಂಕಿತಾ ಅಗರ್ವಾಲ್ ಎರಡನೇ ಸ್ಥಾನ ಮತ್ತು ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪ್ರಕಾರ, ಸುಮಾರು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ತೇರ್ಗಡೆಯಾಗದವರ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸಿರುವ ಪ್ರಧಾನಿ , “ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗದವರ ನಿರಾಶೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಆದರೆ ಇವರು […]
ಬಿಹಾರದ ಜಮುಯಿಯಲ್ಲಿ 230 ಮಿಲಿಯನ್ ಟನ್ ಚಿನ್ನದ ನಿಕ್ಷೇಪ? ಇರುವೆಗಳಿಂದ ಬಯಲಾಯಿತು ಚಿನ್ನದ ರಹಸ್ಯ!!

ಬಿಹಾರ: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನ ಇರುವ ಬಗ್ಗೆ ಸಮೀಕ್ಷೆಯನ್ನು ಹೊಂದಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯಲ್ಲಿ ಚಿನ್ನದ ಹುಡುಕಾಟ ನಡೆಸಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದು, ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ದೇಶದ ಶೇ.44ರಷ್ಟು ಚಿನ್ನದ ನಿಕ್ಷೇಪ ಈ ಪ್ರದೇಶವೊದರಲ್ಲೆ ಇದೆ ಎಂದು […]
ಕೋವಿಡ್ -19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 4,000 ರೂಪಾಯಿ: ಪ್ರಧಾನಿ ಮೋದಿ

ದೆಹಲಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಪ್ರಯೋಜನಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ -19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದೈನಂದಿನ ಅಗತ್ಯಗಳನ್ನು ಪೂರೈಸಲು ವಿವಿಧ ಯೋಜನೆಗಳ ಮೂಲಕ 4,000 ರೂಪಾಯಿಗಳನ್ನು ನೀಡಲಾಗುವುದು ಎಂದು ಸೋಮವಾರ ಘೋಷಿಸಿದರು. ವೃತ್ತಿಪರ ಕೋರ್ಸ್‌ಗಳಿಗಾಗಿ, ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ ಕೇರ್ಸ್ ಅದಕ್ಕೆ ಸಹಾಯ ಮಾಡುತ್ತದೆ. ಇದಲ್ಲದೆ, 18 ರಿಂದ 23 ವರ್ಷದೊಳಗಿನವರಿಗೆ ಸ್ಟೈಫಂಡ್ ನೀಡಲಾಗುವುದು ಎಂದು ಅವರು ಹೇಳಿದರು. “ನಾನು ಮಕ್ಕಳೊಂದಿಗೆ […]
ಅಯೋಧ್ಯೆ ತೆರಳುವ ಮಾರ್ಗದಲ್ಲಿ ಬಸ್-ಟ್ರಕ್ ಮುಖಾಮುಖಿ: ಕರ್ನಾಟಕದ 7 ಪ್ರಯಾಣಿಕರು ಮೃತ್ಯುವಶ, 9 ಮಂದಿ ಗಾಯಾಳು

ಬಹ್ರೈಚ್: ಕರ್ನಾಟಕದಿಂದ 16 ಜನರನ್ನು ಅಯೋಧ್ಯೆಗೆ ಹೊತ್ತೊಯ್ಯುತ್ತಿದ್ದ ಬಸ್ ಒಂದು ಬಹ್ರೈಚ್‌ನ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಪ್ರಯಾಣಿಕರು ಅಸುನೀಗಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಈ ಯುಪಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಪ್ರವಾಸಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ […]